Home
ಸುದ್ದಿಜಾಲ

ಇಂದು ವಿವೋ T2 5G ಫಸ್ಟ್‌ ಸೇಲ್‌!..ಜಬರ್ದಸ್ತ್‌ ಫೀಚರ್ಸ್‌ ಜೊತೆಗೆ ಭರ್ಜರಿ ಆಫರ್‌!

ವಿವೋ ಕಂಪನಿಯು ಇತ್ತೀಚಿಗೆ ಹೊಸದಾಗಿ 'ವಿವೋ T2 5G' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಭಿನ್ನ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ಇಂದು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮತ್ತು ವಿವೋ ಸ್ಟೋರ್‌ ಮೂಲಕ ಭಾರತದಲ್ಲಿ ಮೊದಲ ಮಾರಾಟ ಪ್ರಾರಂಭಿಸಿದೆ. ಈ ಫೋನಿನ 6GB + 128GB ಸ್ಟೋರೇಜ್‌ನ ಆರಂಭಿಕ ಬೆಲೆಯು 18,999ರೂ. ಆಗಿದೆ.

ಹೌದು, ವಿವೋ ಸಂಸ್ಥೆಯ ವಿವೋ T2 5G ಫೋನಿನ ಫಸ್ಟ್‌ ಸೇಲ್‌ ಇಂದು (ಏ 18) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮತ್ತು ವಿವೋ ಸ್ಟೋರ್‌ ಶುರುವಾಗಿದೆ. ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 1,500 ರೂ. ತ್ವರಿತ ರಿಯಾಯಿತಿ ಸಿಗಲಿದೆ.

ಇಂದು ವಿವೋ T2 5G ಫಸ್ಟ್‌ ಸೇಲ್‌!..ಜಬರ್ದಸ್ತ್‌ ಫೀಚರ್ಸ್‌ ಜೊತೆಗೆ ಭರ್ಜರಿ ಆಫರ್‌

ಇನ್ನು ಈ ಫೋನ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ವಿವೋ T2 5G ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನುಳಿದಂತೆ ವಿವೋ T2 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ T2 5G ಫೀಚರ್ಸ್‌ ಹೀಗಿವೆ : ವಿವೋ T2 5G ಸ್ಮಾರ್ಟ್‌ಫೋನ್‌ 6.38 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇಂದು ವಿವೋ T2 5G ಫಸ್ಟ್‌ ಸೇಲ್‌!..ಜಬರ್ದಸ್ತ್‌ ಫೀಚರ್ಸ್‌ ಜೊತೆಗೆ ಭರ್ಜರಿ ಆಫರ್‌

ಇದರೊಂದಿಗೆ 8GB ವರೆಗೆ ವರ್ಚುವಲ್ RAM ಅನ್ನು ಸಹ ನೀಡಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕಲ್ಪಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಇನ್ನು ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್, ಮೈಕ್ರೋ, ಪನೋರಮಾ, ಸ್ಲೋ ಮೋಷನ್, ಡ್ಯುಯಲ್ ವ್ಯೂ ವೀಡಿಯೋ ಮತ್ತು ಡಬಲ್ ಎಕ್ಸ್‌ಪೋಸರ್ ಅನ್ನು ಬೆಂಬಲಿಸಲಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ, ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಇಂದು ವಿವೋ T2 5G ಫಸ್ಟ್‌ ಸೇಲ್‌!..ಜಬರ್ದಸ್ತ್‌ ಫೀಚರ್ಸ್‌ ಜೊತೆಗೆ ಭರ್ಜರಿ ಆಫರ್‌

ಭಾರತದಲ್ಲಿ ವಿವೋ T2 ಸರಣಿಯ ಬೆಲೆ ಮತ್ತು ಲಭ್ಯತೆ ಭಾರತದಲ್ಲಿ ವಿವೋ T2 5G ಸ್ಮಾರ್ಟ್‌ಫೋನ್‌ 6GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 18,999ರೂ. ಬೆಲೆಯನ್ನು ಹೊಂದಿದೆ. ಇದರ 8GB + 128GB ರೂಪಾಂತರದ ಆಯ್ಕೆಯು 20,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಏಪ್ರಿಲ್ 18 ರಿಂದ ನೈಟ್ರೋ ಬ್ಲೇಜ್ ಮತ್ತು ವೆಲಾಸಿಟಿ ವೇವ್ ಶೇಡ್‌ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.

ಹಾಗೆಯೇ ನೂತನ ವಿವೋ T2x 5G ಸ್ಮಾರ್ಟ್‌ಫೋನ್‌ 4 GB RAM + 128 GB ಸ್ಟೋರೇಜ್ ಮಾದರಿಗೆ 12,999 ರೂ. ಬೆಲೆ ಹೊಂದಿದೆ. ಅಲ್ಲದೆ 6GB + 128GB ರೂಪಾಂತರದ ಆಯ್ಕೆಯು 13,999ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಫೋನ್‌ ಇದೇ ಏಪ್ರಿಲ್ 21 ರಿಂದ ಗೋಲ್ಡ್, ಗ್ಲಿಮ್ಮರ್ ಬ್ಲ್ಯಾಕ್ ಮತ್ತು ಮೆರೈನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Vivo T2 5G has been launched with two storage options in India. The base model of the phone packs 6GB of RAM and 128GB of storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+