Home
ಸುದ್ದಿಜಾಲ

ವಿವೋದ ಈ ಸ್ಟೈಲಿಶ್‌ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!..ಕರ್ವ್ ಡಿಸ್‌ಪ್ಲೇ ಇದೆ!

ವಿವೋ ಭಿನ್ನ ಶ್ರೇಣಿಯಲ್ಲಿ ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗಿನ ಫೋನ್‌ ಎನಿಸಿರುವ ವಿವೋ T2 ಪ್ರೊ 5G ಮೊಬೈಲ್‌ ಡಿಸೈನ್‌ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇದೀಗ ಫೋನ್‌ ಸಖತ್‌ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದ್ದು, ವಿವೋ ಪ್ರಿಯರಿಗೆ ಹಬ್ಬದ ವಾತಾವರಣ ಎನಿಸಿದೆ.

ಹೌದು, ದಿಗ್ಗಜ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ವಿವೋ T2 ಪ್ರೊ 5G (vivo T2 Pro 5G) ಫೋನ್‌ ಬೆಲೆಯಲ್ಲಿ ಶೇ. 10% ರಷ್ಟು ಆಕರ್ಷಕ ರಿಯಾಯಿತಿ ಲಭ್ಯ ಆಗಿದೆ. 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ 27,999ರೂ. ಗಳ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದ್ದು, ಆದರೆ ಇದೀಗ ಕೊಡುಗೆಯಲ್ಲಿ ಈ ಫೋನ್‌ 24,999ರೂ. ಗಳಿಗೆ ಖರೀದಿಗೆ ಲಭ್ಯ ಇದೆ.

ವಿವೋದ ಈ ಸ್ಟೈಲಿಶ್‌ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!..ಕರ್ವ್ ಡಿಸ್‌ಪ್ಲೇ ಇದೆ!

ಅಂದಹಾಗೆ ಈ ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಪವರ್ ಪಡೆದಿದ್ದು, ಆಂಡ್ರಾಯ್ಡ್ 13 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ವಿವೋ T2 ಪ್ರೊ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನುಳಿದಂತೆ ವಿವೋ T2 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹಾಗೂ ವಿನ್ಯಾಸ

ವಿವೋ T2 ಪ್ರೊ 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಮಾದರಿಯ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, 2400 × 1080 ಪಿಕ್ಸಲ್‌ ರೆಸಲ್ಯೂಶನ್‌ ಆಯ್ಕೆ ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಅನ್ನು ಇದು ಪಡೆದುಕೊಂಡಿದ್ದು, ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 388 ppi ಆಗಿದೆ.

ವಿವೋದ ಈ ಸ್ಟೈಲಿಶ್‌ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!..ಕರ್ವ್ ಡಿಸ್‌ಪ್ಲೇ ಇದೆ!

ವೇಗದ ಪ್ರೊಸೆಸರ್‌ ಸಾಮರ್ಥ್ಯ

ವಿವೋ T2 ಪ್ರೊ ಫೋನ್‌ ಪ್ರೊಸೆಸರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಮೂಲಕ ಕೆಲಸ ಮಾಡಲಿದೆ. ಇದರ ಜೊತೆಗೆ ಆಂಡ್ರಾಯ್ಡ್ 13 ಅನ್ನು ಆಧರಿಸಿ ಫನ್‌ಟಚ್‌ ಓಎಸ್ 13 ಸಪೋರ್ಟ್‌ ಕೂಡಾ ಹೊಂದಿದೆ. ಇದರೊಂದಿಗೆ ಈ ಫೋನ್ 8GB + 128GB ಮತ್ತು 8GB + 256 GB ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ವಿವೋ T2 ಪ್ರೊ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ವಿವೋದ ಈ ಸ್ಟೈಲಿಶ್‌ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!..ಕರ್ವ್ ಡಿಸ್‌ಪ್ಲೇ ಇದೆ!

ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳ ಮಾಹಿತಿ

ವಿವೋ T2 ಪ್ರೊ ಫೋನ್‌ 4,600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸಹ ಒಳಗೊಂಡಿದ್ದು, ಬಳಕೆದಾರರಿಗೆ ವಿಶೇಷ ಭದ್ರತಾ ಫೀಚರ್ಸ್‌ ಅನ್ನು ಒದಗಿಸಲಿದೆ.

ಮೆಮೊರಿ ಹಾಗೂ ಕಲರ್ ಆಯ್ಕೆಯ ಮಾಹಿತಿ

ವಿವೋ T2 ಪ್ರೊ ಮೊಬೈಲ್‌ 8GB RAM ಮತ್ತು 128GB ಸ್ಟೋರೇಜ್‌ ಮತ್ತು 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿದೆ. ಇದು ಗೋಲ್ಡ್‌ ಹಾಗೂ ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Vivo T2 Pro 5G available at heavy price drop price on flipkart. offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+