Home
ಸುದ್ದಿಜಾಲ

3D ಕರ್ವ್‌ ಡಿಸ್‌ಪ್ಲೇ ಇರುವ ಈ ವಿವೋ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ವಿವೋ ಭಿನ್ನ ಮಾದರಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ವವೋ T2 ಪ್ರೊ 5G ಸ್ಮಾರ್ಟ್‌ಫೋನ್‌ ಸಹ ಒಂದಾಗಿದ್ದು, ಇದು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇದೀಗ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಫೋನ್‌ ಸಖತ್‌ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಹೌದು, ದೈತ್ಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ವಿವೋ T2 ಪ್ರೊ 5G (vivo T2 Pro 5G) ಫೋನ್‌ ಶೇ. 10% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ 27,999 ರೂ. ಗಳ ಬೆಲೆಯನ್ನು ಹೊಂದಿದ್ದು, ಆದರೆ ಇದೀಗ ಫ್ಲಿಪ್‌ಕಾರ್ಟ್‌ ಆಫರ್‌ನಲ್ಲಿ ಈ ಫೋನ್‌ 24,999ರೂ. ಗಳಿಗೆ ಖರೀದಿಗೆ ಲಭ್ಯ ಇದೆ.

3D ಕರ್ವ್‌ ಡಿಸ್‌ಪ್ಲೇ ಇರುವ ಈ ವಿವೋ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಇನ್ನು ಈ ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 13 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ವಿವೋ T2 ಪ್ರೊ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ವಿವೋ T2 ಪ್ರೊ ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ T2 ಪ್ರೊ 5G ಫೀಚರ್ಸ್‌ ಹೀಗಿವೆ

ವಿವೋ ಸಂಸ್ಥೆಯ ಈ ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಮಾದರಿಯ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, 2400 × 1080 ಪಿಕ್ಸಲ್‌ ರೆಸಲ್ಯೂಶನ್‌ ಆಯ್ಕೆ ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಅನ್ನು ಇದು ಪಡೆದುಕೊಂಡಿದ್ದು, ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 388 ppi ಆಗಿದೆ.

3D ಕರ್ವ್‌ ಡಿಸ್‌ಪ್ಲೇ ಇರುವ ಈ ವಿವೋ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ವಿವೋ ಕಂಪನಿಯ ಈ ಫೋನ್‌ ಪ್ರೊಸೆಸರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಮೂಲಕ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಆಂಡ್ರಾಯ್ಡ್ 13 ಅನ್ನು ಆಧರಿಸಿ ಫನ್‌ಟಚ್‌ ಓಎಸ್ 13 ಸಪೋರ್ಟ್‌ ಕೂಡಾ ಹೊಂದಿದೆ. ಇದರೊಂದಿಗೆ ಈ ಫೋನ್ 8GB + 128GB ಮತ್ತು 8GB + 256 GB ಸ್ಟೋರೇಜ್‌ನ ಎರಡು ಮಾಡೆಲ್‌ಗಳಲ್ಲಿ ಲಭ್ಯ ಇದೆ.

ವಿವೋ T2 ಪ್ರೊ ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ವಿವೋ T2 ಪ್ರೊ ಮೊಬೈಲ್‌ 4,600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸಹ ಒಳಗೊಂಡಿದ್ದು, ಬಳಕೆದಾರರಿಗೆ ವಿಶೇಷ ಭದ್ರತಾ ಫೀಚರ್ಸ್‌ ಅನ್ನು ಒದಗಿಸಲಿದೆ.

ವಿವೋ ಸಂಸ್ಥೆಯ ಮೊಬೈಲ್‌ 8GB RAM ಮತ್ತು 128GB ಸ್ಟೋರೇಜ್‌ ಮತ್ತು 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿದೆ. ಇದು ಗೋಲ್ಡ್‌ ಹಾಗೂ ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
vivo T2 Pro 5G received a Huge Price Drop in India. check offer price tag, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+