Home
ಸುದ್ದಿಜಾಲ

ಬೊಂಬಾಟ್‌ ಬೆಲೆ ಇಳಿಕೆ ಕಂಡ ವಿವೋ T2 ಪ್ರೊ ಸ್ಮಾರ್ಟ್‌ಫೋನ್‌!

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್‌ಗಳಿಗೆ ಒಂದಿಲ್ಲೊಂದು ಆಕರ್ಷಕ ಡಿಸ್ಕೌಂಟ್‌ ಲಭ್ಯ ಇರುತ್ತದೆ. ಈ ನಿಟ್ಟಿನಲ್ಲಿ ಅನೇಕ ಗ್ರಾಹಕರು ಈ ಆನ್‌ಲೈನ್‌ ತಾಣದ ಮೂಲಕ ಖರೀದಿಗೆ ಆಸಕ್ತಿ ನೀಡುತ್ತಾರೆ. ಆ ಪೈಕಿ ವಿವೋ T2 ಪ್ರೊ ಮೊಬೈಲ್‌ ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು OMG ಎನ್ನುವಂತೆ ಮಾಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ವಿವೋ T2 ಪ್ರೊ ಮೊಬೈಲ್ ಶೇ. 10% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಆಸಕ್ತ ಗ್ರಾಹಕರು 8 GB RAM + 256 GB ವೇರಿಯಂಟ್‌ನ ಫೋನ್‌ ಅನ್ನು 24,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್‌ ಲಭ್ಯ ಇರುವ ಎಕ್ಸ್‌ಚೆಂಜ್‌ ಆಫರ್‌, ಬ್ಯಾಂಕ್‌ ಕೊಡುಗೆ ಹಾಗೂ ಇತರೆ ಆಫರ್‌ ಪಡೆದುಕೊಂಡರೆ ಮತ್ತಷ್ಟು ರಿಯಾಯಿತಿ ಪಡೆಯಲು ಅವಕಾಶ ಸಿಗಲಿದೆ.

ಬೊಂಬಾಟ್‌ ಬೆಲೆ ಇಳಿಕೆ ಕಂಡ ವಿವೋ T2 ಪ್ರೊ ಸ್ಮಾರ್ಟ್‌ಫೋನ್‌!

ವಿವೋ T2 ಪ್ರೊ ಮೊಬೈಲ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನೊಂದಿಗೆ ಕೆಲಸ ನಿರ್ವಹಿಸಲಿದ್ದು, ಇದರ ಇದರ ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯ ಲಭ್ಯ. ಇನ್ನುಳಿದಂತೆ ವಿವೋ T2 ಪ್ರೊ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ವಿನ್ಯಾಸದ ಮಾಹಿತಿ

ವಿವೋ T2 ಪ್ರೊ ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಮಾದರಿಯ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, 2400 × 1080 ಪಿಕ್ಸಲ್‌ ರೆಸಲ್ಯೂಶನ್‌ ಆಯ್ಕೆ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಅನ್ನು ಇದು ಪಡೆದುಕೊಂಡಿದ್ದು, ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 388 ppi ಆಗಿದೆ.

ಬೊಂಬಾಟ್‌ ಬೆಲೆ ಇಳಿಕೆ ಕಂಡ ವಿವೋ T2 ಪ್ರೊ ಸ್ಮಾರ್ಟ್‌ಫೋನ್‌!

ಪ್ರೊಸೆಸರ್‌ ಪವರ್‌ ಮಾಹಿತಿ ಹೀಗಿದೆ

ವಿವೋ T2 ಪ್ರೊ ಮೊಬೈಲ್‌ ಪ್ರೊಸೆಸರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಮೂಲಕ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ ಆಂಡ್ರಾಯ್ಡ್ 13 ಅನ್ನು ಆಧರಿಸಿ ಫನ್‌ಟಚ್‌ ಓಎಸ್ 13 ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 8GB + 128 GB ಮತ್ತು 8GB +256 GB ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ಬೊಂಬಾಟ್‌ ಬೆಲೆ ಇಳಿಕೆ ಕಂಡ ವಿವೋ T2 ಪ್ರೊ ಸ್ಮಾರ್ಟ್‌ಫೋನ್‌!

ಕ್ಯಾಮೆರಾ ಸೆನ್ಸಾರ್ ಮಾಹಿತಿ ಹೀಗಿದೆ

ವಿವೋ T2 ಪ್ರೊ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಒಳಗೊಂಡಿದೆ.

ಬಿಗ್ ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳ ಮಾಹಿತಿ

ವಿವೋ T2 ಪ್ರೊ ಮೊಬೈಲ್‌ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸಹ ಒಳಗೊಂಡಿದ್ದು, ಬಳಕೆದಾರರಿಗೆ ವಿಶೇಷ ಸೆಕ್ಯುರಿಟಿ ಫೀಚರ್ಸ್‌ ಅನ್ನು ಒದಗಿಸಲಿದೆ.

ಮೆಮೊರಿ ಹಾಗೂ ಕಲರ್‌ ಮಾಹಿತಿ
ವಿವೋ T2 ಪ್ರೊ ಮೊಬೈಲ್‌ 8GB RAM ಮತ್ತು 128GB ಸ್ಟೋರೇಜ್‌ ಹಾಗೂ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿದೆ. ಈ ಫೋನ್‌ ಬ್ಲ್ಯಾಕ್‌ ಹಾಗೂ ಗೋಲ್ಡ್‌ ಕಲರ್‌ ಆಯ್ಕೆ ಪಡೆದಿದೆ.

Best Mobiles in India

English summary
vivo T2 Pro 5G received big price cut on flipkart. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+