Home
ಸುದ್ದಿಜಾಲ

vivo phone: 3D ಕರ್ವ್ಡ ಡಿಸ್‌ಪ್ಲೇ.. 8GB RAM, 64MP ಮುಖ್ಯ ಕ್ಯಾಮೆರಾ.. ವಿವೋದ ಈ ಫೋನ್‌ ಬೆಲೆ ಇಷ್ಟೇ!

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ ಅನ್ನು ನೀಡಲಿವೆ. ಅದರಲ್ಲೂ ಇತ್ತೀಚಿಗೆ ಲಾಂಚ್‌ ಆಗುತ್ತಿರುವ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳು ಸಹ ಇತರೆ ಬ್ರ್ಯಾಂಡ್‌ನ ಪ್ರೀಮಿಯಂ ಫೋನ್‌ಗಳನ್ನು ಮೀರಿಸುವ ಸಾಮರ್ಥ್ಯ ಪಡೆದುಕೊಂಡಿವೆ. ಈ ನಡುವೆ ಹೊಸ ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇಸ್‌ನ (Flipkart Big Billion Days) ಭಾಗವಾಗಿ ಸಾಕಷ್ಟು ಫೋನ್‌ಗಳಿಗೆ ಭಾರೀ ರಿಯಾಯಿತಿ ನೀಡಲಾಗಿದ್ದು, ಅದರಂತೆ ವಿವೋ T2 ಪ್ರೊ 5G (vivo T2 Pro 5G 128 GB +8 GB RAM) ಸ್ಮಾರ್ಟ್‌ಫೋನ್‌ಗೂ ರಿಯಾಯಿತಿ ನೀಡಲಾಗಿದೆ. ಈ ಫೋನ್‌ 3D ಕರ್ವ್ಡ ಡಿಸ್‌ಪ್ಲೇ ಹಾಗೂ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ ಜೊತೆಗೆ ಡೈಮೆನ್ಸಿಟಿ 7200 ಪ್ರೊಸೆಸರ್ ಮೂಲಕ ಫೋನ್‌ ಬಳಕೆದಾರರು ಉತ್ತಮ ಅನುಭವ ಪಡೆಯಬಹುದು. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ವಿವರ ತಿಳಿಯೋಣ.

3D ಕರ್ವ್ಡ ಡಿಸ್‌ಪ್ಲೇ.. 8GB RAM,64MP ಮುಖ್ಯ ಕ್ಯಾಮೆರಾ; ಈ ಫೋನ್‌ ಬೆಲೆ ಇಷ್ಟೇ!

ವಿವೋ T2 ಪ್ರೊ 5G ಫೋನ್‌ನ ಆಫರ್‌ ವಿವರ: 8 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಈ ಫೋನ್‌ಗೆ 26,999 ರೂ.ಗಳನ್ನು ನಿಗದಿ ಮಾಡಲಾಗಿದ್ದು, ನೀವು ಇದನ್ನು ಈ ವಿಶೇಷ ಸೇಲ್‌ನಲ್ಲಿ 23,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ನೀವು 3000ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ, ವಿನಿಮಯ ಆಫರ್‌ನಲ್ಲಿ 11 ಸಾವಿರಕ್ಕೂ ಅಧಿಕ ರಿಯಾಯಿತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಇದರೊಂದಿಗೆ ಕೆಲವು ಬ್ಯಾಂಕ್‌ ಆಫರ್‌ಗಳನ್ನೂ ಸಹ ಘೋಷಣೆ ಮಾಡಲಾಗಿದೆ. ಅಂದರೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1000 ರೂ. ವರೆಗೆ ಬ್ಯಾಂಕ್ ಆಫರ್ ಸಿಗಲಿದೆ ಹಾಗೂ ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಕ್ರೆಡಿಟ್ ಕಾರ್ಡ್ ಮೇಲೆ 10% ರಿಯಾಯಿತಿ ಸಿಗಲಿದ್ದು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ಈ ಫೋನ್ ಖರೀದಿ ಮಾಡಿದ್ರೆ 5,000 ರೂ.ವರೆಗೂ ರಿಯಾಯಿತಿ ಸಿಗಲಿದೆ.

ಇದಿಷ್ಟು ಮಾತ್ರವಲ್ಲದೆ ಸಾಕಷ್ಟು ಇತರೆ ಬ್ಯಾಂಕ್‌ನ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳ ಮೇಲೂ ಆಫರ್‌ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ. ಅಂದರೆ ನೀವು ತಿಂಗಳಿಗೆ 8,000ರೂ.ಗಳನ್ನು ಪಾವತಿ ಮಾಡಬಹುದು. ಹಾಗಿದ್ರೆ, ಈ ಫೋನ್‌ ಅನ್ನು ಈ ಬೆಲೆಗೆ ಖರೀದಿ ಮಾಡಲು ಯೋಗ್ಯವೇ?, ಇದರಲ್ಲಿ ಏನೆಲ್ಲಾ ವಿಶೇಷ ಫೀಚರ್ಸ್ ಆಯ್ಕೆ ಇದೆ ಎಂಬುದನ್ನು ನೋಡೋಣ ಬನ್ನಿ.

ವಿವೋ T2 ಪ್ರೊ 5G ಡಿಸ್‌ಪ್ಲೇ ವಿವರ: ಈ ಫೋನ್ 3D ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರುವುದು ಪ್ರಮುಖವಾದ ವಿಷಯವಾಗಿದೆ. ಜೊತೆಗೆ 120 Hz ರಿಫ್ರೆಶ್ ರೇಟ್‌, 100% ಸಿನಿಮಾ-ದರ್ಜೆಯ DCI-P3 ಕಲರ್ ಗ್ಯಾಮಟ್ ಆಯ್ಕೆ, 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದ್ದು, ಇದು ನೇರ ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಪಷ್ಟ ಗೋಚರತೆಯನ್ನು ನೀಡುತ್ತದೆ.

ವಿವೋ T2 ಪ್ರೊ 5G ಪ್ರೊಸೆಸರ್‌ ಮಾಹಿತಿ: ಇದರ ಪ್ರೊಸೆಸರ್‌ ವಿಚಾರಕ್ಕೆ ಬರುವುದಾದರೆ ಈ ಹೊಸ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ ಬಲ ಪಡೆದಿದೆ. ಇದು ಶಕ್ತಿಶಾಲಿ 4 nm ಚಿಪ್‌ಸೆಟ್ ಅನ್ನು ಹೊಂದಿದ್ದು, ಫ್ಲ್ಯಾಗ್‌ಶಿಪ್-ಗ್ರೇಡ್ TSMC 2 ನೇ ಪೀಳಿಗೆಯ 4 nm ಪ್ರಕ್ರಿಯೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಉನ್ನತ ಶಕ್ತಿಯ ದಕ್ಷ ಕಾರ್ಯಕ್ಷಮತೆಯನ್ನು ನೀಡುವ ಸಲುವಾಗಿ 7,20,000+ ಸ್ಕೋರ್‌ನ ಗುರಿಯನ್ನು ಇದು ಹೊಂದಿದೆ.

ವಿವೋ T2 ಪ್ರೊ 5G ಕ್ಯಾಮೆರಾ ರಚನೆ: ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 64 MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ ಹಾಗೂ ಔರಾ ಲೈಟ್‌ನೊಂದಿಗೆ ಉತ್ತಮ ದರ್ಜೆಯ ನೈಟ್‌ ಫೋಟೋ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, 9 ಪಟ್ಟು ಹೆಚ್ಚು ಪ್ರಕಾಶಿತ ಬೆಳಕಿನ ಫೋಟೋಗಳನ್ನು ಇದರಲ್ಲಿ ಸೆರೆಹಿಡಿಯಬಹುದು. ಇದರೊಂದಿಗೆ 2MP ಸೆಕೆಂಡರಿ ರಿಯರ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ.

3D ಕರ್ವ್ಡ ಡಿಸ್‌ಪ್ಲೇ.. 8GB RAM,64MP ಮುಖ್ಯ ಕ್ಯಾಮೆರಾ; ಈ ಫೋನ್‌ ಬೆಲೆ ಇಷ್ಟೇ!

ವಿವೋ T2 ಪ್ರೊ 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 4600 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 74.8 ಮಿ.ಮೀ ಅಗಲ, 164.1 ಮಿ.ಮೀ ಎತ್ತರದೊಂದಿಗೆ 176 ಗ್ರಾಂ ತೂಕ ಹೊಂದಿದೆ. ಉಳಿದಂತೆ ಈ ಫೋನ್ ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ ಓಎಸ್ 13 ಗ್ಲೋಬಲ್ ನಲ್ಲಿ ರನ್‌ ಆಗಲಿದ್ದು, ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ಕಾಂಪಸ್, ಪ್ರಾಕ್ಸಿಮಿಟಿ ಸೆನ್ಸರ್, ಮೋಟಾರ್, ಗೈರೊಸ್ಕೋಪ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

Best Mobiles in India

English summary
vivo T2 Pro 5G smartphone discounted In Flipkart Big Billion Days. This phone has a 3D curvead display, 8GB RAM and 64MP main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+