Home
ಸುದ್ದಿಜಾಲ

ಸಂಚಲನ ಉಂಟು ಮಾಡಿದ್ದ ವಿವೋ T2 ಪ್ರೊ ಫೋನ್‌ ಲಾಂಚ್‌; ಫೀಚರ್ಸ್‌ ಏನಿವೆ? ಬೆಲೆ ಎಷ್ಟು?

ವಿವೋ ಸ್ಮಾರ್ಟ್‌ಫೋನ್‌ಗಳಿಗೆ (Vivo smartphone) ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ ಖರೀದಿ ಮಾಡುವ ವಿಶೇಷ ಗ್ರಾಹಕರು ಇದ್ದಾರೆ. ಅದರಂತೆ ಲಾಂಚ್‌ ಆಗುವ ಮುನ್ನವೇ ಸ್ಮಾರ್ಟ್‌ಫೋನ್‌ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಹೊಸ ಫೋನ್‌ ಇಂದು ಬಿಡುಗಡೆ ಆಗಿದೆ.

ಹೌದು, ಭಾರತದಲ್ಲಿ ಇಂದು ವಿವೋ T2 ಪ್ರೊ (Vivo T2 Pro) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಈ ಫೋನ್ ಇತ್ತೀಚಿಗೆ ಲಾಂಚ್‌ ಆಗಿರುವ ಐಕ್ಯೂ Z7 ಪ್ರೊ ನಂತೆಯೇ ಕಾಣಿಸಿಕೊಂಡಿದೆ. ಜೊತೆಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್, 66W ವೇಗದ ಚಾರ್ಜಿಂಗ್ ಸೇರಿದಂತೆ ಅನೇಕ ಸುಧಾರಿತ ಫೀಚರ್ಸ್‌ ಹೊಂದಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸಂಚಲನ ಉಂಟು ಮಾಡಿದ್ದ ವಿವೋ T2 ಪ್ರೊ ಫೋನ್‌ ಲಾಂಚ್‌; ಫೀಚರ್ಸ್‌ ಏನಿವೆ?

ವಿವೋ T2 ಪ್ರೊ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರು ವಿಡಿಯೋ ನೋಡುವಾಗ ಹಾಗೂ ಗೇಮಿಂಗ್‌ನಲ್ಲಿ ತಲ್ಲೀನವಾಗಿರುವಾಗ ವಿಶೇಷವಾದ ಹೊಸ ಅನುಭವ ಪಡೆದುಕೊಳ್ಳಬಹುದು.

ವಿವೋ T2 ಪ್ರೊ ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್‌ ಪ್ರೊಸೆಸರ್‌ ವಿಚಾರಕ್ಕೆ ಬಂದರೆ ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಂಡ್ರಾಯ್ಡ್ 13 ಅನ್ನು ಆಧರಿಸಿ ಫನ್‌ಟಚ್‌ ಓಎಸ್ 13 ಅನ್ನು ರನ್ ಈ ಫೋನ್‌ ರನ್‌ ಮಾಡಲಿದೆ. ಉಳಿದಂತೆ ಈ ಫೋನ್ 8GB + 128GB ಮತ್ತು 8GB +256GB ಯ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ವಿವೋ T2 ಪ್ರೊ ಕ್ಯಾಮೆರಾ ರಚನೆ: ಹಾಗೆಯೇ ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ. ಅಂದರೆ OIS ಜೊತೆಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಮತ್ತು 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಸೆಲ್ಫಿ ಪ್ರಿಯರಿಗೆ ಈ ಫೋನ್‌ ಖಂಡಿತಾ ಇಷ್ಟ ಆಗಲಿದೆ.

ವಿವೋ T2 ಪ್ರೊ ಬ್ಯಾಟರಿ ಹಾಗೂ ಇತರೆ: ಈ ಫೋನ್ 4,600mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 66W ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP52 ರೇಟಿಂಗ್ ಪಡೆದಿದೆ. ಹಾಗೆಯೇ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸಹ ಇದ್ದು, ಬಳಕೆದಾರರಿಗೆ ವಿಶೇಷ ಭದ್ರತಾ ಫೀಚರ್ಸ್‌ ಅನ್ನು ನೀಡಲಿದೆ.

ವಿವೋ T2 ಪ್ರೊ ಬೆಲೆ ಹಾಗೂ ಲಭ್ಯತೆ : ಈ ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ಸ್ಟೋರೇಜ್‌ ಫೋನ್‌ಗೆ 23,999 ರೂಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ 256GB ಸ್ಟೋರೇಜ್ ಮಾದರಿಯೂ ಇದ್ದು, ಇದಕ್ಕೆ 24,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ಗಳನ್ನು ನೀವು ಸೆಪ್ಟೆಂಬರ್ 29 ರಂದು ಸಂಜೆ 7:00 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಸಂಚಲನ ಉಂಟು ಮಾಡಿದ್ದ ವಿವೋ T2 ಪ್ರೊ ಫೋನ್‌ ಲಾಂಚ್‌; ಫೀಚರ್ಸ್‌ ಏನಿವೆ?

ಪ್ರಮುಖ ಮಾಹಿತಿ ಏನೆಂದರೆ ಕಂಪನಿಯು ಮಾರಾಟದ ಕೊಡುಗೆಗಳನ್ನು ಸಹ ಘೋಷಿಸಿದೆ. ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ನೀವು ಈ ಫೋನ್‌ ಖರೀದಿ ಮಾಡಲು ಮುಂದಾದರೆ 2,000 ರೂ.ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ವಿನಿಮಯ ಬೋನಸ್ ಸಹ ಲಭ್ಯ ಇದೆ. ಈ ಮೂಲಕ ನೀವು 1,000ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದು.

Best Mobiles in India

English summary
Vivo T2 Pro smartphone has been unveiled in India today. This phone looks similar to the recently launched IQOO Z7 Pro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+