Home
ಸುದ್ದಿಜಾಲ

ಇಂದು ಶುರುವಾಗಲಿದೆ ವಿವೋ T2 ಪ್ರೊ ಸೇಲ್‌!..ಆಫರ್‌ಗೆ ಗ್ರಾಹಕರ ದಿಲ್‌ ಖುಷ್‌!

ವಿವೋ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ 'ವಿವೋ T2 ಪ್ರೊ' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ಇಂದು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮತ್ತು ವಿವೋ ಇ- ಸ್ಟೋರ್‌ ಮೂಲಕ ಭಾರತದಲ್ಲಿ ಮೊದಲ ಸೇಲ್‌ ಶುರು ಮಾಡಲಿದೆ. ಈ ಫೋನಿನ 8GB + 128GB ಸ್ಟೋರೇಜ್‌ನ ಆರಂಭಿಕ ಬೆಲೆಯು 23,999ರೂ. ಆಗಿದೆ.

ಹೌದು, ವಿವೋ ಸಂಸ್ಥೆಯ ವಿವೋ T2 ಪ್ರೊ ಫೋನಿನ ಫಸ್ಟ್‌ ಸೇಲ್‌ ಇಂದು (ಸೆ. 29) ಸಂಜೆ 7 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮತ್ತು ವಿವೋ ಸ್ಟೋರ್‌ ಶುರುವಾಗಿದೆ. ಆಕ್ಸಿಸ್‌ ಹಾಗೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 2,000 ರೂ. ತ್ವರಿತ ರಿಯಾಯಿತಿ ಲಭ್ಯ ಆಗಲಿದೆ.

ಇಂದು ಶುರುವಾಗಲಿದೆ ವಿವೋ T2 ಪ್ರೊ ಸೇಲ್‌!..ಆಫರ್‌ಗೆ ಗ್ರಾಹಕರ ದಿಲ್‌ ಖುಷ್‌!

ಇನ್ನು ಈ ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಪಡೆದಿದ್ದು, ಆಂಡ್ರಾಯ್ಡ್ 13 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ವಿವೋ T2 ಪ್ರೊ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನುಳಿದಂತೆ ವಿವೋ T2 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ T2 ಪ್ರೊ ಡಿಸ್‌ಪ್ಲೇ ಹಾಗೂ ವಿನ್ಯಾಸದ ಮಾಹಿತಿ
ವಿವೋ T2 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಮಾದರಿಯ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, 2400 × 1080 ಪಿಕ್ಸಲ್‌ ರೆಸಲ್ಯೂಶನ್‌ ಆಯ್ಕೆ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಅನ್ನು ಇದು ಪಡೆದುಕೊಂಡಿದ್ದು, ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 388 ppi ಆಗಿದೆ.

ವಿವೋ T2 ಪ್ರೊ ಪ್ರೊಸೆಸರ್‌ ಸಾಮರ್ಥ್ಯ ಎಷ್ಟಿದೆ
ವಿವೋ T2 ಪ್ರೊ ಫೋನ್‌ ಪ್ರೊಸೆಸರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್‌ ಮೂಲಕ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಆಂಡ್ರಾಯ್ಡ್ 13 ಅನ್ನು ಆಧರಿಸಿ ಫನ್‌ಟಚ್‌ ಓಎಸ್ 13 ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 8GB + 128GB ಮತ್ತು 8GB +256GB ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ವಿವೋ T2 ಪ್ರೊ ಕ್ಯಾಮೆರಾ ಸೆನ್ಸಾರ್ ರಚನೆ
ವಿವೋ T2 ಪ್ರೊ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ವಿವೋ T2 ಪ್ರೊ ಬ್ಯಾಟರಿ ಹಾಗೂ ಇತರೆ ಆಯ್ಕೆಗಳ ಮಾಹಿತಿ
ವಿವೋ T2 ಪ್ರೊ ಸ್ಮಾರ್ಟ್‌ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸಹ ಒಳಗೊಂಡಿದ್ದು, ಬಳಕೆದಾರರಿಗೆ ವಿಶೇಷ ಭದ್ರತಾ ಫೀಚರ್ಸ್‌ ಅನ್ನು ಒದಗಿಸಲಿದೆ.

ವಿವೋ T2 ಪ್ರೊ ಬೆಲೆ ಹಾಗೂ ಲಭ್ಯತೆಯ ಮಾಹಿತಿ
ವಿವೋ T2 ಪ್ರೊ ಮೊಬೈಲ್‌ 8GB RAM ಮತ್ತು 128GB ಸ್ಟೋರೇಜ್‌ ಫೋನ್‌ ಬೆಲೆಯು 23,999 ರೂ. ಆಗಿದ್ದು, ಅದೇ ರೀತಿ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಬೆಲೆಯು 24,999 ರೂ. ಆಗಿದೆ. ಈ ಫೋನ್‌ ಇದೇ ಸೆಪ್ಟೆಂಬರ್ 29 ರಂದು ಸಂಜೆ 7:00 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ ಆಗಲಿದೆ.

Best Mobiles in India

English summary
Vivo T2 Pro goes on sale today via flipkart and vivo website. check here offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+