Home
ಸುದ್ದಿಜಾಲ

ವಿವೋದ ಈ ಹೊಸ ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..50ಎಂಪಿ ಕ್ಯಾಮೆರಾ ಇದೆ!

ವಿವೋ ಕಂಪನಿಯು ಇತ್ತೀಚಿಗೆ ಲಾಂಚ್ ಮಾಡಿರುವ ವಿವೋ T2x 5G ಸ್ಮಾರ್ಟ್‌ಫೋನ್‌ ಬಜೆಟ್‌ ದರದಲ್ಲಿ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಈ ಮೊಬೈಲ್‌ ಫೋನ್‌ ಇದೀಗ ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದ್ದು, ಬಜೆಟ್‌ ಮೊಬೈಲ್‌ ಅನ್ನು ಆಫರ್‌ನಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯ.

ಹೌದು, ವಿವೋ ಸಂಸ್ಥೆಯ ವಿವೋ T2x 5G ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಈಗ 26% ರಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8GB RAM ಹಾಗೂ 128 GB ROM ಆಂತರೀಕ ಸಂಗ್ರಹದ ವೇರಿಯಂಟ್‌ ಬೆಲೆಯು 18,999ರೂ. ದರ ಹೊಂದಿದ್ದು, ಆಫರ್‌ನಲ್ಲಿ ಇದು 13,999ರೂ. ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಗಳ ಕೊಡುಗೆ ಸಹ ಗ್ರಾಹಕರಿಗೆ ಖಚಿತವಾಗಿ ಲಭ್ಯ.

ವಿವೋದ ಈ ಹೊಸ ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..50ಎಂಪಿ ಕ್ಯಾಮೆರಾ ಇದೆ!

ಈ ಫೋನ್ ಬಜೆಟ್‌ ವಿಭಾಗದಲ್ಲಿ ಕಾಣಿಸಿಕೊಂಡಿದ್ದರೂ, ಈ ಮೊಬೈಲ್‌ನ ಕೆಲವು ಫೀಚರ್ಸ್‌ಗಳು ಬೊಂಬಾಟ್‌ ಎನಿಸಿವೆ. ಅಂದಹಾಗೆ ಇದು ಸ್ನಾಪ್‌ಡ್ರಾಗನ್ 680SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯದ ಪವರ್‌ ಪಡೆದಿದೆ. ಇನ್ನು ಈ ಮೊಬೈಲ್‌ ಗೋಲ್ಡ್‌, ಬ್ಲ್ಯಾಕ್‌ ಹಾಗೂ ಬ್ಲೂ ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನುಳಿದಂತೆ ವಿವೋ T2x 5G ಫೋನ್‌ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ T2x 5G ಸ್ಕ್ರೀನ್‌ ವಿನ್ಯಾಸ ಮತ್ತು ರಚನೆ ಹೇಗಿದೆ : ವಿವೋ T2x 5G ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿದೆ.

ವಿವೋ T2x 5G ಆಂತರೀಕ ಸ್ಟೋರೇಜ್‌ ಆಯ್ಕೆಯ ಮಾಹಿತಿ : ವಿವೋ T2x 5G ಫೋನ್‌ 8 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಿದೆ. ಈ ಸ್ಮಾರ್ಟ್‌ಫೋನ್‌ RAM 3.0 ಫೀಚರ್ಸ್‌ ಅನ್ನು ಕೂಡ ಪಡೆದಿದೆ.

ವಿವೋ T2x 5G ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್‌ ಕಮಾಲ್‌ : ವಿವೋ T2x 5G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಇದು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದ್ದು, ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ.

ವಿವೋ T2x 5G ಬ್ಯಾಟರಿ ಸಾಮರ್ಥ್ಯದ ವಿವರ : ಈ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್‌ ಸಾಮರ್ಥ್ಯಯನ್ನು ಪಡೆದಿದ್ದು, 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಒಳಗೊಂಡಿದೆ.

ವಿವೋ T2x 5G ಮೆಮೊರಿ ಆಯ್ಕೆ ಮತ್ತು ಕಲರ್‌ ಲಭ್ಯತೆ : ವಿವೋ T2x 5G ಫೋನ್‌ 4GB + 128 GB ವೇರಿಯಂಟ್‌, 6GB + 128 GB ಮತ್ತು 8GB + 128 GB ವೇರಿಯಂಟ್‌ಗಳ ಆಯ್ಕೆ ಪಡೆದಿದೆ. ಹಾಗೆಯೇ ಈ ಫೋನ್‌ ಮೂರು ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಗೋಲ್ಡ್‌, ಬ್ಲ್ಯಾಕ್‌ ಹಾಗೂ ಬ್ಲೂ ಕಲರ್‌ ಆಗಿವೆ.

Best Mobiles in India

English summary
vivo T2x 5G available at great discount on Flipkart: offer price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+