ವಿವೋ ಫೋನ್ ಖರೀದಿಸೋಕೆ ಇದುವೇ ಬೆಸ್ಟ್ ಆಫರ್!..ಗ್ರಾಹಕರಿಗೆ ಉಳಿತಾಯ!
ಫ್ಲಿಪ್‌ಕಾರ್ಟ್ ಸಂಸ್ಥೆಯು ಆಯೋಜಿಸಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಈಗ ಲೈವ್ ಆಗಿದೆ. ಈ ಸೇಲ್‌ನಲ್ಲಿ ಪ್ರಮುಖ ಎಲ್ಲ ಬ್ರ್ಯಾಂಡ್‌ಗಳ ಫೋನ್‌ಗಳಿಗೆ ಬೊಂಬಾಟ್ ರಿಯಾಯಿತಿ ಲಭ್ಯವಿದೆ. ಅದರಲ್ಲಿಯೂ ವಿವೋ ಸಂಸ್ಥೆಯ ವಿವೋ T2x 5G ಸ್ಮಾರ್ಟ್‌ಫೋನ್ ಸಖತ್ ರಿಯಾಯಿತಿ ಪಡೆದಿದೆ.
ಹೌದು, ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಬೊಂಬಾಟ್ ಕೊಡುಗೆಗಳಿಂದ ಭರ್ತಿ ಆಗಿದೆ. ಅದರಲ್ಲಿ ವಿವೋ T2x 5G ಮೊಬೈಲ್ 8 GB RAM ವೇರಿಯಂಟ್ 14,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಎಜ್ಸ್‌ಚೇಂಜ್ ಕೊಡುಗೆ, ಆಯ್ದ ಬ್ಯಾಂಕ್ ರಿಯಾಯಿತಿ ಒಳಗೊಂಡಂತೆ ಈ ಮೊಬೈಲ್ ಆಫರ್‌ನಲ್ಲಿ 10,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಇನ್ನು ವಿವೋ T2x 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್ ಪವರ್ ಪಡೆದಿದ್ದು, ಇದರ ಜೊತೆಗೆ 50 ಮೆಗಾ ಪಿಕ್ಸಲ್ ಸೆನ್ಸಾರ್ ಮುಖ್ಯ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಹಾಗೆಯೇ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಹಾಗಾದರೇ ವಿವೋ T2x 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ಪ್ರೊಸೆಸರ್ ಪವರ್ ಹೀಗಿದೆ
ವಿವೋ T2x 5G ಮೊಬೈಲ್ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್ ಪವರ್ ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಕೂಡಾ ಪಡೆದಿದೆ.
ಮೆಮೊರಿ ಸ್ಟೋರೇಜ್ ಮಾಹಿತಿ
ವಿವೋ ಸಂಸ್ತೆಯ ಈ ಫೋನ್ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ( ಎಸ್‌ಡಿ ) ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಒದಗಿಸಲಾಗಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ RAM 3.0 ಫೀಚರ್ಸ್ ಅನ್ನು ಕೂಡ ಪಡೆದಿದೆ.
ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ರಚನೆ
ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ
ಈ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಕೂಡಾ ಒಳಗೊಂಡಿದೆ.
ಆಫರ್ ಹಾಗೂ ಲಭ್ಯತೆ
ದೇಶಿಯ ಮಾರುಕಟ್ಟೆಯಲ್ಲಿ ವಿವೋ T2x 5G ಫೋನ್ 4 GB + 128 GB ವೇರಿಯಂಟ್ ಹಾಗೂ 6 GB + 128 GB ಮತ್ತು 8 GB + 128 GB ವೇರಿಯಂಟ್ ಆಯ್ಕೆ ಪಡೆದಿದೆ. ಹಾಗಾಯೇ ಈ ಫೋನ್ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








