Home
ಸುದ್ದಿಜಾಲ

ವಿವೋದ ಈ 5G ಫೋನಿಗೆ ಈಗ ಭಾರೀ ಡಿಸ್ಕೌಂಟ್‌!..ಗ್ರಾಹಕರಿಗೆ ಖುಷಿ!

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್ ನಲ್ಲಿ ಏನಾದರೊಂದು ವಿಶೇಷ ಮಾರಾಟ ಮೇಳಗಳನ್ನು ನಿಡುತ್ತವೆ ಸಾಗಿ ಬಂದಿದೆ. ಆನ್‌ಲೈನ್‌ ಗ್ರಾಹಕರಿಗೆ ಡಿಸ್ಕೌಂಟ್‌ನಲ್ಲಿ ಹೊಸ ಗ್ಯಾಜೆಟ್ಸ್‌ಗಳನ್ನು ಖರೀದಿಸುವುದಕ್ಕೆ ಅವಕಾಶ ಒದಗಿಸುತ್ತದೆ. ಇದೀಗ ಫ್ಲಿಪ್‌ಕಾರ್ಟ್‌ ಮೊಬೈಲ್‌ ಫೋನ್ಸ್‌ ಬೊನಾಂಜಾ ಸೇಲ್‌ ಆಯೋಜಿಸಿದ್ದು, ಇದರಲ್ಲಿ ವಿವೋ T2x 5G ಮೊಬೈಲ್‌ ಬೊಂಬಾಟ್‌ ರಿಯಾಯಿತಿ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಮೊಬೈಲ್‌ ಫೋನ್ಸ್‌ ಬೊನಾಂಜಾ ಸೇಲ್‌ ಆರಂಭಿಸಿದ್ದು, ಈ ಸೇಲ್ ಮೇಳವು ಇದೇ ಡಿಸೆಂಬರ್ 6 ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ ನಲ್ಲಿ ವಿವೋ ಸಂಸ್ಥೆಯ ವಿವೋ T2x 5G ಮೊಬೈಲ್‌ ಮೇಲೆ 28% ರಷ್ಟು ಆಫರ್‌ ಲಭ್ಯ ಮಾಡಿದ್ದು, ಗ್ರಾಹಕರು 14,999ರೂ. ಗಳಿಗೆ ಖರೀದಿಸಬಹುದು.

ವಿವೋದ ಈ 5G ಫೋನಿಗೆ ಈಗ ಭಾರೀ ಡಿಸ್ಕೌಂಟ್‌!..ಗ್ರಾಹಕರಿಗೆ ಖುಷಿ!

ಇನ್ನು ವಿವೋ T2x 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ಪವರ್‌ ಪಡೆದಿದ್ದು, ಇದರ ಜೊತೆಗೆ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಮುಖ್ಯ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಹಾಗೆಯೇ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ವಿವೋ T2x 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋದ ಈ 5G ಫೋನಿಗೆ ಈಗ ಭಾರೀ ಡಿಸ್ಕೌಂಟ್‌!..ಗ್ರಾಹಕರಿಗೆ ಖುಷಿ!

ಡಿಸ್‌ಪ್ಲೇ ಡಿಸೈನ್ ಮತ್ತು ಪ್ರೊಸೆಸರ್‌ ಬಲ ಹೀಗಿದೆ

ವಿವೋ T2x 5G ಮೊಬೈಲ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ಪವರ್‌ ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ.

ಸ್ಟೋರೇಜ್‌ ಮಾಹಿತಿ ಹೀಗಿದೆ

ವಿವೋ ಕಂಪನಿಯ ಈ ಫೋನ್‌ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ( ಎಸ್‌ಡಿ ) ಮೆಮೊರಿ ಕಾರ್ಡ್‌ ಮೂಲಕ 1 TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಒದಗಿಸಲಾಗಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ RAM 3.0 ಫೀಚರ್ಸ್‌ ಅನ್ನು ಕೂಡ ಪಡೆದಿದೆ.

ವಿವೋದ ಈ 5G ಫೋನಿಗೆ ಈಗ ಭಾರೀ ಡಿಸ್ಕೌಂಟ್‌!..ಗ್ರಾಹಕರಿಗೆ ಖುಷಿ!

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟಿದೆ

ವಿವೋದ ಈ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಆಯ್ಕೆಗಳನ್ನು ಕೂಡಾ ಒಳಗೊಂಡಿದೆ.

ಮೆಮೊರಿ ಆಯ್ಕೆ ಹಾಗೂ ಕಲರ್ ಮಾಹಿತಿ

ದೇಶಿಯ ಮಾರುಕಟ್ಟೆಯಲ್ಲಿ ವಿವೋ T2x 5G ಫೋನ್‌ 4 GB + 128 GB ವೇರಿಯಂಟ್‌ ಹಾಗೂ 6 GB + 128 GB ಮತ್ತು 8 GB + 128 GB ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಹಾಗೆಯೇ ಈ ಫೋನ್‌ ಬ್ಲ್ಯಾಕ್‌, ಬ್ಲೂ ಹಾಗೂ ಗೋಲ್ಡ್‌ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Vivo T2x 5G price drop on Flipkart Mobile Bonanza Sale. more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+