Home
ಸುದ್ದಿಜಾಲ

ಇಂದು ವಿವೋದ ಈ ಹೊಸ 5G ಫೋನ್‌ ಮಾರಾಟ!..ಆಫರ್‌ ಏನು ಗೊತ್ತಾ?

ಮೊಬೈಲ್‌ ಮಾರುಕಟ್ಟೆಯಲ್ಲಿನ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾದ ವಿವೋ ಕಂಪನಿಯ ನೂತನ ವಿವೋ T3 5G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್‌ 27 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 19,999ರೂ. ಆಗಿದೆ.

ಹೌದು, ವಿವೋ ಸಂಸ್ಥೆಯ ವಿವೋ T3 5G ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಇಂದು ಮಧ್ಯಾಹ್ನ 12 ರಂದು ಮಾರಾಟ ಶುರು ಆಗಲಿದೆ. ಈ ಫೋನ್‌ 8GB + 128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ.

ಇಂದು ವಿವೋದ ಈ ಹೊಸ 5G ಫೋನ್‌ ಮಾರಾಟ!..ಆಫರ್‌ ಏನು ಗೊತ್ತಾ?

ಹಾಗೆಯೇ ವಿವೋದ ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಒಳಗೊಂಡಿದೆ. ಇನ್ನು ಗ್ರಾಹಕರು ಇದನ್ನು ಕಾಸ್ಮಿಕ್ ಬ್ಲೂ ಮತ್ತು ಸಿಸ್ಟಲ್ ಫ್ಲೇಕ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ವಿವೋ T3 5G ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಇಂದು ವಿವೋದ ಈ ಹೊಸ 5G ಫೋನ್‌ ಮಾರಾಟ!..ಆಫರ್‌ ಏನು ಗೊತ್ತಾ?

ವಿವೋ T3 5G ಮೊಬೈಲ್‌ ಫೀಚರ್ಸ್‌

ವಿವೋ T3 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಹಾಗೂ 360Hz ಟಚ್ ಸ್ಯಾಂಪ್ಲಿಂಗ್ ರೇಟ್, ಹೆಚ್‌ಡಿಆರ್ 10+ ಸೌಲಭ್ಯ, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಸೌಲಭ್ಯ ಕೂಡಾ ಪಡೆದಿದೆ.

ವಿವೋ T3 5G ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 4nm ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಕೂಡಾ ಪಡೆದಿದೆ. ಇದರೊಂದಿಗೆ 8GB RAM, 128GB ಹಾಗೂ 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಇವೆ. ಹಾಗೆಯೇ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ವಿಸ್ತರಿಸುವ ಸೌಲಭ್ಯ ಪಡೆದಿದೆ.

ವಿವೋ T3 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಈ ಫೋನಿನ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ.

ವಿವೋ ಸಂಸ್ಥೆಯ ಈ ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಕುಡಾ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಈ ನೂತನ ಫೋನ್‌ 8GB + 128GB ಮಾಡೆಲ್‌ ಬೆಲೆಯು 19,999 ರೂ. ಆಗಿದ್ದು, ಹಾಗೆಯೇ 8GB + 256GB ಮಾಡೆಲ್‌ ಬೆಲೆಯು 21,999 ರೂ.ಗಳ ದರದಲ್ಲಿ ಖರೀದಿಗೆ ಲಭ್ಯ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಭರ್ಜರಿ ಡಿಸ್ಕೌಂಟ್‌ ಕೊಡುಗೆ ಲಭ್ಯ. ಇನ್ನು ಇದು ಕಾಸ್ಮಿಕ್ ಬ್ಲೂ ಮತ್ತು ಸಿಸ್ಟಲ್ ಫ್ಲೇಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
Vivo T3 5G Goes on Sale in India at 12 noon Today via Flipkart. Check Offers, Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+