Home
ಸುದ್ದಿಜಾಲ

ನಾಳೆ ಎಂಟ್ರಿ ಕೊಡಲಿದೆ ಹೊಸ ವಿವೋ T3 5G ಫೋನ್‌!..ಖರೀದಿಗೆ ಕ್ಯೂ ಗ್ಯಾರಂಟಿ!

ಜನಪ್ರಿಯ ವಿವೋ ಸಂಸ್ಥೆಯ ಹೊಸ ವಿವೋ T3 5G ಸ್ಮಾರ್ಟ್‌ಫೋನ್‌ ನಾಳೆ (ಮಾರ್ಚ್‌ 21 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ನೂತನ ಸ್ಮಾರ್ಟ್‌ಫೋನ್ ಡಿಸೈನ್‌ ಹಾಗೂ ಕೆಲವು ಆಕರ್ಷಕ ಫೀಚರ್ಸ್‌ಗಳಿಂದಾಗಿ ಈಗಾಗಲೇ ಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಚಿತ್ತ ಸೆಳೆದುಕೊಂಡಿದೆ.

ಹೌದು, ವಿವೋ T3 5G ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ನಾಳೆ ಲಾಂಚ್ ಆಗಲಿದೆ. ಈ ಫೋನ್‌ ಲಾಂಚ್‌ ಕುರಿತಾಗಿ ದೈತ್ಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಮೈಕ್ರೋ ಪೇಜ್‌ ಮಾಡಿದೆ. ಇನ್ನು ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ.

ನಾಳೆ ಎಂಟ್ರಿ ಕೊಡಲಿದೆ ಹೊಸ ವಿವೋ T3 5G ಫೋನ್‌!..ಖರೀದಿಗೆ ಕ್ಯೂ ಗ್ಯಾರಂಟಿ!

ಹಾಗೆಯೇ ಈ ಫೋನ್‌ 128GB ಅಥವಾ 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಎಂಟ್ರಿ ಕೊಡಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿರಲಿದೆ. ಅದೇ ರೀತಿ ಸದ್ಯ ಸಾಮಾನ್ಯ ಎನಿಸಿರುವ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆಯನ್ನು ಕೂಡಾ ಒಳಗೊಂಡಿರಲಿದೆ. ಇನ್ನುಳಿದಂತೆ ವಿವೋ T3 5G ಮೊಬೈಲ್‌ನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಾಳೆ ಎಂಟ್ರಿ ಕೊಡಲಿದೆ ಹೊಸ ವಿವೋ T3 5G ಫೋನ್‌!..ಖರೀದಿಗೆ ಕ್ಯೂ ಗ್ಯಾರಂಟಿ!

ವಿವೋ T3 5G ಫೋನ್ - ನಿರೀಕ್ಷಿತ ಫೀಚರ್ಸ್‌

ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿವೋ T3 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಒಳಗೊಂಡಿರಲಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿರಲಿದ್ದು, ಇದರ ಜೊತೆಗೆ 1800 ನಿಟ್ಸ್‌ ವರೆಗಿನ ಬ್ರೈಟ್‌ನೆಸ್‌ ಸೌಲಭ್ಯ ಸಹ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ವಿವೋದ ಈ ಹೊಸ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಇರಲಿದೆ. ಹಾಗೆಯೇ ಈ ಫೋನ್‌ ಎರಡು ವೇರಿಯಂಟ್‌ ಆಯ್ಕೆಯಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಇದ್ದು, ಅವುಗಳಯ ಕ್ರಮವಾಗಿ 128GB ಅಥವಾ 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಎನ್ನಲಾಗಿದೆ. ಇದರೊಂದಿಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್‌ ವಿಸ್ತರಣೆಗೂ ಅವಕಾಶ ನೀಡಲಾಗಿದೆ.

ವಿವೋ T3 5G ಫೋನ್ ರಿಯರ್‌ನಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸಾರ್‌ ಆಗಿರಲಿದೆ. 2x ಪೋರ್ಟ್ರೇಟ್‌ ಜೂಮ್‌ ಸೌಲಭ್ಯ, OIS ಜೊತೆಗೆ 4K ರೆಕಾರ್ಡಿಂಗ್‌ ಸೌಲಭ್ಯಗಳನ್ನು ಪಡೆದಿರಲಿದೆ. ಇನ್ನು ವಿಡಿಯೋ ಕರೆಗಳು ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

ವಿವೋ ಸಂಸ್ಥೆಯು ಈ ನೂತನ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ 44W ಫ್ಲ್ಯಾಶ್‌ಚಾರ್ಜ್ ಸಪೋರ್ಟ್‌ ಇರಲಿದೆ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್‌ ಫೋನ್‌ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, IP54 ಧೂಳು ಮತ್ತು ನೀರಿನ ಪ್ರತಿರೋಧದ ಆಯ್ಕೆ ಒಳಗೊಂಡಂತೆ ಇತರೆ ಅಗತ್ಯ ಕನೆಕ್ಟಿವಿಟಿ ಆಯ್ಕೆಯ ಸಪೋರ್ಟ್‌ ಪಡೆದಿರಲಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಬರಲಿರುವ ಈ ಮೊಬೈಲ್‌ 128GB ಅಥವಾ 256GB ಸ್ಟೋರೇಜ್‌ ಆಯ್ಕೆಗಳಲ್ಲಿ ಲಾಂಚ್‌ ಆಗುವ ನಿರೀಕ್ಷೆಗಳು ಇವೆ. ಇನ್ನು ಈ ಫೋನಿನ ಬೆಲೆಯು 18,000 ರಿಂದ 20,000ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
VIVO T3 5G is launching in india tomorrow. Check, Offers, Price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+