ವಿವೋ T3 5G ಸ್ಮಾರ್ಟ್‌ಫೋನ್ ಲಾಂಚ್ ದಿನಾಂಕ ನಿಗದಿ! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
ವಿವೋ ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುವಲ್ಲಿ ಯಾವತ್ತೂ ಹಿಂದೆ ಹೆಜ್ಜೆ ಇರಿಸಿಲ್ಲ. ಈ ಕಾರಣಕ್ಕೆ ಈ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಡುವೆ ಬಹುನಿರೀಕ್ಷಿತ ವಿವೋ T3 5G ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಾಂಕ ನಿಗದಿಯಾಗಿದೆ.
ಹೌದು, ಭಾರತದಲ್ಲಿ V30 ಸರಣಿಯ ಯಶಸ್ವಿ ಬಿಡುಗಡೆಯ ಬಳಿಕ ಈಗ ವಿವೋ T3 ಸ್ಮಾರ್ಟ್‌ಫೋನ್ (Vivo T3 5G Smartphone) ಅನ್ನು ಅನಾವರಣ ಮಾಡಲು ಎಲ್ಲಾ ತಯಾರಿ ನಡೆಸಲಾಗಿದೆ. ಈ ಫೋನ್ ಕೆಲವು ಮಾಹಿತಿ ಪ್ರಕಾರ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಬಜೆಟ್ ಬೆಲೆ ವಿಭಾಗದಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಈ ಫೋನ್ ಯಾವಾಗ ಲಾಂಚ್ ಆಗಲಿದೆ. ನಿರೀಕ್ಷಿತ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ವಿವೋ T3 ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 21, 2024 ರಂದು ಭಾರತದಲ್ಲಿ ಅನಾವರಣ ಮಾಡಲಾಗುತ್ತಿದ್ದು, ಇದನ್ನು ಖರೀದಿ ಮಾಡಲು ಸಾಕಷ್ಟು ಜನರು ಕಾತುರದಿಂದ ಕಾದು ಕುಳಿತಿದ್ದಾರೆ. ಕೆಲವು ಲೀಕ್ ಮಾಹಿತಿ ಪ್ರಕಾರ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ದೊಡ್ಡ ಕ್ರೇಜ್ ಉಂಟು ಮಾಡಿದೆ. ಹಾಗಿದ್ರೆ, ಇದರ ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ನೋಡೋಣ ಬನ್ನಿ.
ವಿವೋ T3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.67 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಮತ್ತು 1800 ನಿಟ್ಸ್ ವರೆಗಿನ ಬ್ರೈಟ್‌ನೆಸ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ.
ವಿವೋ T3 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಮೊದಲೇ ತಿಳಿಸಿದಂತೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದೆ. ಅಂದರೆ 128GB ಅಥವಾ 256GB ಇಂಟರ್ ಸ್ಟೋರೇಜ್ ವೇರಿಯಂಟ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು. ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಣೆಗೂ ಅವಕಾಶ ನೀಡಲಾಗಿದೆ.

ವಿವೋ T3 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇನ್ನು ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ IMX882 ಮುಖ್ಯ ಕ್ಯಾಮೆರಾ, OIS ಬೆಂಬಲ ಮತ್ತು ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಸೇರಿದಂತೆ ರಿಯರ್‌ನಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಬಹುದು ಎಂದು ಕೆಲವು ಮಾಹಿತಿಗಳಿಂದ ತಿಳಿದುಬಂದಿದೆ.
ವಿವೋ T3 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 44W ಫ್ಲ್ಯಾಶ್‌ಚಾರ್ಜ್ ಬೆಂಬಲ ಪಡೆದಿದೆ ಎಂದು ತಿಳಿದುಬಂದಿದೆ. ಉಳಿದಂತೆ ಈ ಫೋನ್ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, IP54 ಧೂಳು ಮತ್ತು ನೀರಿನ ಪ್ರತಿರೋಧ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

ವಿವೋ T3 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಮೊದಲೇ ತಿಳಿಸಿದಂತೆ ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಇರಲಿದೆ ಎನ್ನಲಾಗಿದ್ದು, ಅದರಲ್ಲಿ 8GB RAM + 128GB ಸಂಗ್ರಹಣೆ ಮತ್ತು 8GB RAM + 128GB ಸಂಗ್ರಹಣೆಯು ಕ್ರಮವಾಗಿ 18,999ರೂ.ಗಳು ಮತ್ತು 21,990ರೂ.ಗಳ ಬೆಲೆ ಹೊಂದಿರಲಿದೆ ಎಂದು ಹೇಳಲಾಗಿದೆ. ಅದಾಗ್ಯೂ ನಿಖರ ಮಾಹಿತಿಗಾಗಿ ಕೆಲವು ದಿನಗಳು ಕಾಯಬೇಕಿದೆ.


Click it and Unblock the Notifications








