Home
ಸುದ್ದಿಜಾಲ

Vivo: ಶೀಘ್ರದಲ್ಲೇ ಭಾರತದಲ್ಲಿ ವಿವೋ T3 5G: ಫೀಚರ್ಸ್‌ ನಿರೀಕ್ಷೆ ಏನು?

ವಿವೋ ಸ್ಮಾರ್ಟ್‌ಫೋನ್‌ಗಳು (Vivo Smartphones) ಜಾಗತಿಕವಾಗಿ ದೊಡ್ಡ ಸಂಚಲನವನ್ನೇ ಉಂಟು ಮಾಡುತ್ತವೆ. ಅದರಂತೆ ಈಗ ವಿವೋ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವೋ T3 5G ಸ್ಮಾರ್ಟ್‌ಫೋನ್ (Vivo T3 5G smartphone) ಲಾಂಚ್‌ ಮಾಡಲು ತಯಾರಿ ನಡೆಸಿದೆ. ಈ ಫೋನ್‌ ಬಗ್ಗೆ ಈಗಾಗಲೇ ಕೆಲವು ಮಾಹಿತಿ ಲೀಕ್‌ ಆಗಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಹೌದು, ವಿವೋ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತದಲ್ಲಿ ಹೆಚ್ಚು ಹೆಚ್ಚು ಗ್ರಾಹಕರನ್ನು ಪಡೆದುಕೊಳ್ಳುತ್ತಿದೆ. ಅದಾಗ್ಯೂ ಈಗ ಮತ್ತೊಂದು ಹೊಸ ಫೋನ್‌ ಅನ್ನು ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲಿದ್ದು, ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್ ಹಾಗೂ ಸೋನಿ ಓಐಎಸ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ ಏನು ಅನ್ನೋದನ್ನು ಗಮನಿಸೋಣ.

ಶೀಘ್ರದಲ್ಲೇ ಭಾರತದಲ್ಲಿ ವಿವೋ T3 5G: ಫೀಚರ್ಸ್‌ ನಿರೀಕ್ಷೆ ಏನು?

ವಿವೋ T3 5G ಸ್ಮಾರ್ಟ್‌ಫೋನ್‌: ಮುಂಬರುವ ಈ ಸ್ಮಾರ್ಟ್‌ಫೋನ್‌ ವರ್ಷ ಲಾಂಚ್‌ ಆಗಿರುವ ವಿವೋT2 5G ಸ್ಮಾರ್ಟ್‌ಫೋನ್‌ಗೆ ಉತ್ತರಾಧಿಕಾರಿಯಾಗಲಿದೆ. ಅದರಂತೆ ಈ ವಿವೋ T3 5G ಅನ್ನು ಎಕ್ಸ್‌ ನಲ್ಲಿ ದೃಢೀಕರಿಸಲಾಗಿದೆ. ಜೊತೆಗೆ ಕೆಲವು ವಿಶೇಷತೆಗಳ ಬಗ್ಗೆ ಕೀಟಲೆ ಮಾಡಲಾಗಿದೆ. ಈ ಮೂಲಕ ಇದು ಫ್ಲಿಪ್‌ಕಾರ್ಟ್‌ ನಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಮೈಕ್ರೋ ಸೈಟ್‌ ಅನ್ನೂ ಸಹ ಕ್ರಿಯೇಟ್‌ ಮಾಡಲಾಗಿದೆ. ಈಗಾಗಲೇ ಲೀಕ್‌ ಆದ ಕೆಲವು ಮಾಹಿತಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್ 20,000 ಕ್ಕಿಂತ ಕಡಿಮೆ ಇರುತ್ತದೆ ಎನ್ನಲಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಫೋನ್‌ ಏನೆಲ್ಲಾ ಫೀಚರ್ಸ್ಸ್ ಹೊಂದಿರಬಹುದು ಅನ್ನೋದನ್ನು ಗಮನಿಸೋಣ.

ಈ ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.67 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿರಬಹುದು ಎಂದು ನಂಬಲಾಗಿದೆ. ಅಲ್ಲದೆ ಡಿಸ್‌ಪ್ಲೇ ಮಧ್ಯದಲ್ಲಿ ಪಂಚ್ ಕಟೌಟ್ ಆಯ್ಕೆ ಇರಲಿದೆ ಎಂದು ನಿರೀಕ್ಷೆ ಮಾಡಬಹುದು. ಇದರ ಜೊತೆಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್‌ನಿಂದ (MediaTek Dimensity 7200) ಕಾರ್ಯನಿರ್ವಹಿಸಲಿದ್ದು, 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ ವಿವೋ T3 5G: ಫೀಚರ್ಸ್‌ ನಿರೀಕ್ಷೆ ಏನು?

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು ಟ್ರಿಪಲ್ ರಿಯರ್‌ ಕ್ಯಾಮೆರಾ (Triple rear camera) ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಅಂದರೆ ಓಐಎಸ್‌ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್‌ ಸೋನಿ IMX882 ಎನ್ಸರ್‌, 2 ಮೆಗಾಪಿಕ್ಸೆಲ್‌ ಬೊಕೆ ಲೆನ್ಸ್ ಮತ್ತು ಫ್ಲಿಕರ್ ಸೆನ್ಸರ್‌ ಆಯ್ಕೆಯನ್ನು ಈ ಫೋನ್‌ನಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ ವಿವೋ T3 5G: ಫೀಚರ್ಸ್‌ ನಿರೀಕ್ಷೆ ಏನು?

ಇದೆಲ್ಲದರ ಜೊತೆಗೆ ಲೀಕ್‌ ಮಾಹಿತಿ ಪ್ರಕಾರ ಈ ಫೋನ್‌ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದ್ದು, ಡ್ಯುಯಲ್ ಸ್ಟಿರಿಯೊ ಸ್ಪೀಕರ್ ರಚನೆ ಮತ್ತು IP54 ರೇಟಿಂಗ್‌ ಆಯ್ಕೆ ಪಡೆದಿರಲಿದೆ ಎಂದು ನಂಬಲಾಗಿದೆ. ಇಷ್ಟೆಲ್ಲಾ ಪ್ರೀಮಿಯಂ ಫೀಚರ್ಸ್‌ ಆಯ್ಕೆ ಪಡೆದುಕೊಂಡು 20,000 ರೂ.ಗಳಲ್ಲಿ ಏನಾದರೂ ಲಭ್ಯವಾದರೆ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುವುದು ಗ್ಯಾರಂಟಿ. ನಿಮಗೆ ಈ ಫೋನ್‌ನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
Vivo is all set to launch the affordable Vivo T3 5G smartphone in India. Some information about this phone has already been leaked and Confirmed Availability in Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+