Home
ಸುದ್ದಿಜಾಲ

ಇಂದು ವಿವೋ T3 ಲೈಟ್‌ 5G ಸೇಲ್‌ ಪ್ರಾರಂಭ; ಬೆಲೆ ಎಷ್ಟು? ಫೀಚರ್ಸ್‌ ಏನು?

ವಿವೋ ಮೊಬೈಲ್‌ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ ಪರಿಚಯಿಸಿರುವ ವಿವೋ T3 ಲೈಟ್‌ 5G (vivo T3 Lite 5G) ಫೋನ್‌ ಅಗ್ಗದ ದರದ ಹಾಗೂ ಸ್ಟೈಲಿಶ್‌ ಲುಕ್‌ ಮೂಲಕ ಆಕರ್ಷಕ ಎನಿಸಿದೆ. ಈ ಮೊಬೈಲ್‌ನ ಫಸ್ಟ್‌ ಸೇಲ್‌ ಇಂದು ( ಜುಲೈ 4 ರಂದು ) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಪ್ರಾರಂಭ ಆಗಲಿದೆ. ಅಂದಹಾಗೆ ವಿವೋ T3 ಲೈಟ್‌ 5G ಮೊಬೈಲ್‌ನ ಆರಂಭಿಕ ವೇರಿಯಂಟ್‌ ಬೆಲೆಯು 10,499 ರೂ. ಗಳು ಆಗಿದ್ದು, ಕೆಲವು ಆಫರ್‌ ಸಹ ಲಭ್ಯ ಆಗಲಿವೆ.

ಹೌದು, ರಿಯಲ್‌ಮಿ ಕಂಪನಿಯ ವಿವೋ T3 ಲೈಟ್‌ 5G ( vivo T3 Lite 5G ) ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಇಂದು ಅಧಿಕೃತವಾಗಿ ಮಾರಾಟ ಪ್ರಾರಂಭ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಪಡೆದಿದೆ.

ಇಂದು ವಿವೋ T3 ಲೈಟ್‌ 5G ಸೇಲ್‌ ಪ್ರಾರಂಭ; ಬೆಲೆ ಎಷ್ಟು? ಫೀಚರ್ಸ್‌ ಏನು?

ಇನ್ನು ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರ ಜೊತೆಗೆ 15W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ ವೈಬ್ರೆಂಟ್‌ ಗ್ರೀನ್ ಮತ್ತು ಮೆಜೆಸ್ಟಿಕ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಈ ಫೋನ್‌ ಖರೀದಿಗೆ ಲಭ್ಯ ಆಗಲಿದೆ. ಇನ್ನುಳಿದಂತೆ ವಿವೋ T3 ಲೈಟ್‌ 5G ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ವಿವೋ T3 ಲೈಟ್‌ 5G - ಫೀಚರ್ಸ್‌

ವಿವೋ T3 ಲೈಟ್‌ 5G ಮೊಬೈಲ್‌ 6.56 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಅಲ್ಲದೇ 90Hz ರಿಫ್ರೆಶ್ ರೇಟ್‌ ಆಯ್ಕೆ ಒಳಗೊಂಡಿದ್ದು, ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದು ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಕೂಡಾ ಮಾಡುತ್ತದೆ.

ಹಾಗೆಯೇ ಈ ಫೋನ್‌ 4GB RAM + 128 GB ಹಾಗೂ 6GB RAM + 128 GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಅಲ್ಲದೇ ಇದು ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ.

ವಿವೋ T3 ಲೈಟ್‌ 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದಿದ್ದು, ಇದಕ್ಕೆ ಅನುಗುಣವಾಗಿ 15W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ.

Best Mobiles in India

English summary
Vivo T3 Lite 5G first sale in india today via flipkart. offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+