Home
ಸುದ್ದಿಜಾಲ

ಸದ್ಯದಲ್ಲೇ ಅಗ್ಗದ ಬೆಲೆಯಲ್ಲಿ ಲಾಂಚ್‌ ಆಗಲಿದೆ ವಿವೋದ ಹೊಸ ಫೋನ್‌; ವಿಶೇಷ ಏನಿದೆ?

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಪಂದಾಗಿ ಗುರುತಿಸಿಕೊಂಡಿರುವ ವಿವೋ (Vivo) ಬಜೆಟ್‌ ದರದಲ್ಲಿ ಹಲವು ಮೊಬೈಲ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಆ ಪೈಕಿ ವಿವೋ T ಸರಣಿಯ ಫೋನ್‌ಗಳು ಆಕರ್ಷಕ ಎನಿಸಿದ್ದು, ಆ ಸಾಲಿಗೆ ಸಂಸ್ಥೆಯು ಈಗ ಹೊಸದಾಗಿ ವಿವೋ T3 ಲೈಟ್‌ 5G ( Vivo T3 Lite 5G ) ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಜ್ಜಾಗುತ್ತಿದೆ. ಈ ಫೋನ್‌ ಅನ್ನು ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ ತಾಣದ ಮೂಲಕ ಪ್ರತ್ಯೇಕವಾಗಿ ಮಾರಾಟವಾಗುತ್ತದೆ.

ಹೌದು, ವಿವೋ ಮೊಬೈಲ್‌ ಸಂಸ್ಥೆಯು ನೂತನವಾಗಿ ವಿವೋ T3 ಲೈಟ್‌ 5G ( Vivo T3 Lite 5G ) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಕಲ ಸಜ್ಜಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಿಲಿದೆ. ಈ ಫೋನ್ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೈಕ್ರೋ ಸೈಟ್‌ ಕೂಡಾ ಓಪೆನ ಮಾಡಲಾಗಿದೆ. ಆದರೆ ಬಿಡುಗಡೆಯ ಅಧಿಕೃತ ದಿನಾಂಕವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

ಸದ್ಯದಲ್ಲೇ ಅಗ್ಗದ ಬೆಲೆಯಲ್ಲಿ ಲಾಂಚ್‌ ಆಗಲಿದೆ ವಿವೋದ ಹೊಸ ಫೋನ್‌; ವಿಶೇಷ ಏನಿದೆ?

ಬರಲಿರುವ ನೂತನ ವಿವೋ T3 ಲೈಟ್‌ 5G ( Vivo T3 Lite 5G ) ಸ್ಮಾರ್ಟ್‌ಫೋನ್‌ ಅತ್ಯಂತ ಗ್ರಾಹಕ ಸ್ನೇಹಿ ಬೆಲೆಯ ಡ್ಯುಯಲ್ 5G ಮೊಬೈಲ್‌ ಆಗಿರುತ್ತದೆ ಎಂದು ಲಾಂಚ್ ಫ್ಲಿಪ್‌ಕಾರ್ಟ್‌ ಮೈಕ್ರೋ ಸೈಟ್ ಬಹಿರಂಗಪಡಿಸಿದೆ. ಇನ್ನು ಈ ಫೋನ್‌ ಸೋನಿ AI ಕ್ಯಾಮೆರಾವನ್ನು ಸಹ ಪಡೆದಿರಲಿದ್ದು, ಆದರೆ ಕ್ಯಾಮೆರಾ ರೆಸಲ್ಯೂಶನ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಅದಾಗ್ಯೂ, ಈ ಫೋನ್‌ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಡ್ಯುಯಲ್-ರಿಯರ್ ರಚನೆ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಫ್ಲಿಪ್‌ಕಾರ್ಟ್ ಕ್ಯಾಮೆರಾ ಮಾಹಿತಿಯನ್ನು ಜೂನ್‌ 25 ರಂದು ಬಹಿರಂಗ ಮಾಡಲಿದೆ ಹಾಗೆಯೇ ಜೂನ್ 24 ರಂದು ಫೋನಿನ ಪ್ರೊಸೆಸರ್‌ ಬಗ್ಗೆ ಮಾಹಿತಿ ಬಹರಂಗ ಮಾಡಲಿದೆ.


ವಿವೋ T3 5G - ಫೀಚರ್ಸ್‌

ವಿವೋ T3 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7200 4nm ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಕೂಡಾ ಪಡೆದಿದೆ. ಇದರೊಂದಿಗೆ 8GB RAM, 128GB ಹಾಗೂ 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಇವೆ.

ವಿವೋ T3 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ.

ವಿವೋ ಸಂಸ್ಥೆಯ ಈ ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಕುಡಾ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಪಡೆದುಕೊಂಡಿದೆ.

Best Mobiles in India

English summary
Vivo T3 Lite 5G Launching soon in India; Flipkart microsite now live. check expected specifications and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+