Home
ಸುದ್ದಿಜಾಲ

ಬಂದೇ ಬಿಡ್ತು Vivo T3 Pro 5G ಫೋನ್‌; ಮಾರುಕಟ್ಟೆಯಲ್ಲಿ ಅಸಲಿ ಆಟ ಈಗ ಶುರು!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ವಿವೋ (Vivo) ದೇಶಿಯ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿನ ವಿವೋ T3 ಸರಣಿಯ ಫೋನ್‌ಗಳು ಬಜೆಟ್‌ ರೇಂಜ್‌ನಲ್ಲಿ ಟ್ರೆಂಡಿ ಆಗಿ ಗುರುತಿಸಿಕೊಂಡಿವೆ. ಈ ಸರಣಿಯ ಮುಂದುವರಿದ ಭಾಗವಾಗಿ ಸಂಸ್ಥೆಯು ಈಗ ವಿವೋ T3 ಪ್ರೊ 5G (Vivo T3 Pro) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಲೆದರ್‌ ಫಿನಿಶ್‌ ಜೊತೆಗೆ ಮೆಟಾಲಿಕ್‌ ಫ್ರೇಮ್‌ ರಚನೆ ಒಳಗೊಂಡಿದೆ.

ಹೌದು, ವಿವೋ ಮೊಬೈಲ್‌ ಸಂಸ್ಥೆಯು ಭಾರತದಲ್ಲಿ ಹೊಸ ವಿವೋ T3 ಪ್ರೊ 5G (Vivo T3 Pro 5G) ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಹಾಗೆಯೇ ಇದು ಸ್ಲಿಮ್ ರಚನೆ ಜೊತೆಗೆ 3D ಕರ್ವ್ಡ್‌ ಅಮೋಲೆಡ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಪವರ್ ಕೂಡಾ ಒಳಗೊಂಡಿದೆ.

ಬಂದೇ ಬಿಡ್ತು Vivo T3 Pro 5G ಫೋನ್‌; ಮಾರುಕಟ್ಟೆಯಲ್ಲಿ ಅಸಲಿ ಆಟ ಈಗ ಶುರು!

ಹಾಗೆಯೇ ಇದು ಸ್ನಾಪ್‌ಡ್ರಾಗನ್ 7 ಜೆನ್‌ 3 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ನಲ್ಲಿದೆ ಜೊತೆಗೆ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಹಾಗಾದರೇ ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಿವೋ T3 ಪ್ರೊ 5G - ಫೀಚರ್ಸ್‌

ವಿವೋ T3 ಪ್ರೊ 5G ಮೊಬೈಲ್‌ 6.67 ಇಂಚಿನ 3D ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್, 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಸೌಲಭ್ಯ ಕೂಡಾ ಪಡೆದಿದೆ.

ವಿವೋ T3 ಪ್ರೊ 5G ಮೊಬೈಲ್‌ ಸ್ನಾಪ್‌ಡ್ರಾಗನ್ 7 ಜೆನ್‌ 3 SoC ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಕೂಡಾ ಪಡೆದಿದೆ. ಇದರೊಂದಿಗೆ 8 GB RAM + 128 GB ಹಾಗೂ 8 GB + 256 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಇವೆ.

ವಿವೋ T3 ಪ್ರೊ 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಜೊತೆಗೆ ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ.

ವಿವೋ T3 ಪ್ರೊ 5G ಮೊಬೈಲ್‌ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಬೆಲೆ ಹಾಗೂ ಲಭ್ಯತೆ ಮಾಹಿತಿ

8GB + 128GB ವೇರಿಯಂಟ್‌ ಬೆಲೆ - 21,999ರೂ.
8GB + 256GB ವೇರಿಯಂಟ್‌ ಬೆಲೆ - 23,999ರೂ.

ಇನ್ನು ಈ ಫೋನ್‌ ಇದೇ ಸೆಪ್ಟೆಂಬರ್ 03 ರಂದು ಮೊದಲ ಸೇಲ್‌ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನ್‌ ಸ್ಯಾಂಡ್‌ಸ್ಟೋನ್‌ ಆರೇಂಜ್‌ ಹಾಗೂ ಎಮರಾಲ್ಡ್‌ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇರಲಿದೆ. ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸೌಲಭ್ಯ ಸಹ ದೊರೆಯುತ್ತದೆ.

Best Mobiles in India

English summary
Vivo T3 Pro 5G with Snapdragon 7 Gen 3 SoC Launched in India. Check out Price and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+