ಆಫರ್‌ನಲ್ಲಿ ಸ್ಟೈಲಿಶ್ ವಿವೋ ಫೋನ್ ಖರೀದಿಸಬೇಕೆ?..ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!
ಫ್ಲಿಪ್‌ಕಾರ್ಟ್‌ನಲ್ಲಿ ( Flipkart ) ಇ ಕಾಮರ್ಸ್ ತಾಣವು ಸ್ಮಾರ್ಟ್‌ಫೋನ್‌ಗಳಿಗೆ ಏನಾದರೊಂದು ಡಿಸ್ಕೌಂಟ್ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಕಡಿಮೆ ದರದ ಹಾಗೂ ದುಬಾರಿ ದರದ ಫೋನ್‌ಗಳಿಗೂ ಸಹ ಸಖತ್ ರಿಯಾಯಿತಿ ನೀಡುತ್ತಾ ಮುನ್ನಡೆದಿದೆ. ಆ ಪೈಕಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಇದೀಗ ವಿವೋ T3 ಅಲ್ಟ್ರಾ (Vivo T3 Ultra) ಮೊಬೈಲ್ ಆಕರ್ಷಕ ಬೆಲೆ ಇಳಿಕೆಯ ದರದಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ತಾಣದಲ್ಲಿ ವಿವೋ T3 ಅಲ್ಟ್ರಾ (Vivo T3 Ultra) ಫೋನ್ ಶೇ. 38% ರಷ್ಟು ನೇರ ರಿಯಾಯಿತಿ ಹೊಂದಿದೆ. ಈ ಮೊಬೈಲ್‌ನ 8 GB RAM + 128 GB ಸ್ಟೋರೇಜ್ ವೇರಿಯಂಟ್ 31,999ರೂ. ಗಳ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದರ ಜೊತೆಗೆ ಇತರೆ ಆಯ್ದ ಬ್ಯಾಂಕ್ ಕೊಡುಗೆಗಳು ಕೂಡಾ ಗ್ರಾಹಕರಿಗೆ ದೊರೆಯುತ್ತವೆ.

ಹಾಗೆಯೇ ವಿವೋ T3 ಅಲ್ಟ್ರಾ ಫೋನ್ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದಿದೆ. ಅಲ್ಲದೇ ಇದು 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೇ ವಿವೋ T3 ಅಲ್ಟ್ರಾ (Vivo T3 Ultra) ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮಾಹಿತಿ
ವಿವೋ T3 ಅಲ್ಟ್ರಾ ಮೊಬೈಲ್ 6.78 ಇಂಚಿನ 3D ಕರ್ವ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಆಯ್ಕೆ ಇದ್ದು, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ SoC ಚಿಪ್‌ಸೆಟ್ ಪ್ರೊಸೆಸರ್ ಕಾರ್ಯ ಮಾಡುತ್ತದೆ. ಅಲ್ಲದೇ ಇದು ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಬೆಂಬಲ ಸಹ ಪಡೆದಿದೆ.
ಮೆಮೊರಿ ಹಾಗೂ ಕ್ಯಾಮೆರಾ
ವಿವೋ T3 ಅಲ್ಟ್ರಾ ಮೊಬೈಲ್ 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದರ ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಸೌಲಭ್ಯ ಇದೆ.
ಬ್ಯಾಟರಿ ಹಾಗೂ ಇತರೆ
ವಿವೋ T3 ಅಲ್ಟ್ರಾ ಮೊಬೈಲ್ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದಿದ್ದು, ಇದಕ್ಕೆ ಅನುಗುಣವಾಗಿ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ ಫೈ 6, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಸೈಡ್ ಮೌಂಟ್ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ.
ವಿವೋ T3 ಅಲ್ಟ್ರಾ ಮೊಬೈಲ್ 8GB + 128GB ವೇರಿಯಂಟ್, 8GB + 256GB ವೇರಿಯಂಟ್ ಹಾಗೂ 12GB + 256GB ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಗ್ರಾಹಕರು ಈ ಫೋನ್ ಗ್ರೀನ್ ಹಾಗೂ ಗ್ರೇ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








