Home
ಸುದ್ದಿಜಾಲ

6000mAh ಬ್ಯಾಟರಿ ಇರುವ ವಿವೋದ ಈ ಫೋನ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಎನಿಸಿರುವ ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಗೋಟ್‌ ಸೇಲ್‌ (Flipkart GOAT Sale 2024) ಮಾರಾಟ ಮೇಳ ಲೈವ್‌ ಆಗಿದೆ. ಈ ಮಾರಾಟದಲ್ಲಿ ಆಯ್ದ ಮೊಬೈಲ್‌ಗಳಿಗೆ ಬೊಂಬಾಟ್‌ ರಿಯಾಯಿತಿ ಘೋಷಿಸಿದೆ. ಆ ಲಿಸ್ಟ್‌ನಲ್ಲಿ ವಿವೋ T3x 5G (VIVO T3x 5G) ಮೊಬೈಲ್‌ ಸಹ ಭಾರೀ ಡಿಸ್ಕೌಂಟ್‌ ಪಡೆದಿದ್ದು, ಗ್ರಾಹಕರು ಫುಲ್‌ ಖುಷ್‌ ಆಗುವಂತೆ ಮಾಡಿದೆ. ಅಂದಹಾಗೆ ಈ ಫೋನ್‌ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತನ್ನ ವೆಬ್‌ಸೈಟ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಗೋಟ್‌ ಸೇಲ್‌ (Flipkart GOAT Sale 2024) ಮಾರಾಟ ಚಾಲ್ತಿ ಇದೆ. ಈ ಸೇಲ್‌ನಲ್ಲಿ ಶಿಯೋಮಿ ಸಂಸ್ಥೆಯ ಅಗ್ಗದ ಬೆಲೆಯ ವಿವೋ T3x 5G ಮೊಬೈಲ್‌ ಶೇ. 35% ರಷ್ಟು ನೇರ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಫೋನಿನ 4GB RAM + 128GB ವೇರಿಯಂಟ್‌ ಆಫರ್‌ನಲ್ಲಿ 7,699ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ.

6000mAh ಬ್ಯಾಟರಿ ಇರುವ ವಿವೋದ ಈ ಫೋನ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಜೊತೆಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ 4GB + 128GB, 6GB + 128GB ಹಾಗೂ 8GB + 128GB ವೇರಿಯಂಟ್‌ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಮುಂದೆ ನೋಡೋಣ ಬನ್ನಿರಿ.

ವಿವೋ T3x 5G ಫೀಚರ್ಸ್‌

ವಿವೋ T3x 5G ಮೊಬೈಲ್‌ 6.72 ಇಂಚಿನ ಡಿಸ್‌ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಇದು ಫುಲ್‌ ಹೆಚ್‌ಡಿ + 2408 - 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಆಗಿದ್ದು, 1000 ನಿಟ್ಸ್‌ HBM ಬ್ರೈಟ್‌ನೆಸ್‌ ಆಯ್ಕೆ ಇದ್ದು, 339 ppi ಪಿಕ್ಸೆಲ್ ಸಾಂದ್ರತೆ ಮತ್ತು 83 ಪ್ರತಿಶತ NTSC ಬಣ್ಣದ ಹರವು ಪಡೆದಿದೆ.

ವಿವೋ T3x 5G ಮೊಬೈಲ್‌ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅಡ್ರಿನೋ 710 ಜಿಪಿಯುನಿಂದ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಆಂಡ್ರಾಯ್ಡ್‌ 14 ಅನ್ನು ಆಧರಿಸಿದ ಫನ್‌ಟಚ್‌ ಓಎಸ್‌ 14 ಅನ್ನು ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ 4GB + 128GB, 6GB + 128GB ಹಾಗೂ 8GB + 128GB ವೇರಿಯಂಟ್‌ನಲ್ಲಿ ಲಭ್ಯ ಇದೆ.

ವಿವೋ T3x 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್‌ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸರ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಗೆಯೇ ಇದು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಸಹ ಪಡೆದುಕೊಂಡಿದೆ.

ವಿವೋ T3x 5G ಮೊಬೈಲ್‌ ಇನ್ನು ಈ ಫೋನ್ 199 ಗ್ರಾಂ ತೂಕ ಹೊಂದಿದ್ದು, 165.70 - 76.0 - 7.99mm ಅನುಪಾತವನ್ನು ಒಳಗೊಂಡಿದೆ. ಹಾಗೆಯೇ ಇದು 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪ್ರಯೋಜನ ಪಡೆದಿದ್ದು, 44W ಫ್ಲ್ಯಾಶ್‌ ಚಾರ್ಜ್ ಅನ್ನು ಸಪೋರ್ಟ್‌ ಇದೆ.

Best Mobiles in India

English summary
VIVO T3x 5G fabulous price cut on Flipkart goat sale 2024. check out offer, price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+