Home
ಸುದ್ದಿಜಾಲ

ವಿವೋ T3x 5G ಫೋನಿನ ಫಸ್ಟ್‌ ಸೇಲ್‌ ಯಾವಾಗ?..ಆಫರ್‌ ಬೆಲೆ ಎಷ್ಟು?

ಜನಪ್ರಿಯ ಮೊಬೈಲ್‌ ಸಂಸ್ಥೆ ವಿವೋ ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ವಿವೋ T3x 5G (vivo T3X 5G) ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇನ್ನು ಗ್ರಾಹಕರ ಗಮನ ಸೆಳೆದಿರುವ ಈ ಫೋನಿನ ಪ್ರಥಮ ಸೇಲ್‌ ಇದೇ ಏಪ್ರಿಲ್‌ 24 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಪ್ರಾರಂಭ ಆಗಲಿದೆ.

ಹೌದು, ವಿವೋ ಸಂಸ್ಥೆಯ ವಿವೋ T3x 5G (vivo T3X 5G) ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಏಪ್ರಿಲ್‌ 24 ರಂದು ಸೇಲ್‌ ಪ್ರಾರಂಭ ಆಗಲಿದೆ. ಈ ಫೋನ್‌ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದರೊಂದಿಗೆ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಒಳಗೊಂಡಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 13,499ರೂ. ಗಳು ಆಗಿದ್ದು, ಆಯ್ದ ಆಫರ್‌ಗಳು ಸಹ ಲಭ್ಯ.

ವಿವೋ T3x 5G ಫೋನಿನ ಫಸ್ಟ್‌ ಸೇಲ್‌ ಯಾವಾಗ?..ಆಫರ್‌ ಬೆಲೆ ಎಷ್ಟು?

ಅಂದಹಾಗೆ ಈ ನೂತನ 5G ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಜೊತೆಗೆ 4GB + 128GB, 6GB + 128GB ಹಾಗೂ 8GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ವಿವೋ T3 5G ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ವಿವೋ T3x 5G ಸ್ಮಾರ್ಟ್‌ಫೋನ್‌ ಫೀಚರ್ಸ್‌

ವಿವೋ T3x 5G ಸ್ಮಾರ್ಟ್‌ಫೋನ್ 6.72 ಇಂಚಿನ ಡಿಸ್‌ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಇದು ಫುಲ್‌ ಹೆಚ್‌ಡಿ + 2408 - 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಆಗಿದ್ದು, 1000 ನಿಟ್ಸ್‌ HBM ಬ್ರೈಟ್‌ನೆಸ್‌ ಆಯ್ಕೆ ಇದ್ದು, 339 ppi ಪಿಕ್ಸೆಲ್ ಸಾಂದ್ರತೆ ಮತ್ತು 83 ಪ್ರತಿಶತ NTSC ಬಣ್ಣದ ಹರವು ಪಡೆದಿದೆ.

ವಿವೋ T3x 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅಡ್ರಿನೋ 710 ಜಿಪಿಯುನಿಂದ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಆಂಡ್ರಾಯ್ಡ್‌ 14 ಅನ್ನು ಆಧರಿಸಿದ ಫನ್‌ಟಚ್‌ ಓಎಸ್‌ 14 ಅನ್ನು ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ 4GB + 128GB, 6GB + 128GB ಹಾಗೂ 8GB + 128GB ವೇರಿಯಂಟ್‌ನಲ್ಲಿ ಲಭ್ಯ ಇದೆ.

ವಿವೋ T3x 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್‌ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸರ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಗೆಯೇ ಇದು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಸಹ ಪಡೆದುಕೊಂಡಿದೆ.

ವಿವೋ T3x 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪ್ರಯೋಜನ ಪಡೆದಿದ್ದು, 44W ಫ್ಲ್ಯಾಶ್‌ ಚಾರ್ಜ್ ಅನ್ನು ಸಪೋರ್ಟ್‌ ಇದೆ. ಇನ್ನು ಈ ಫೋನ್ 199 ಗ್ರಾಂ ತೂಕ ಹೊಂದಿದ್ದು, 165.70 - 76.0 - 7.99mm ಅನುಪಾತವನ್ನು ಒಳಗೊಂಡಿದೆ. ವಿವೋ T3x 5G ಸ್ಮಾರ್ಟ್‌ಫೋನ್‌ ಆರಂಭಿಕ 4GB RAM ವೇರಿಯಂಟ್‌ ಬೆಲೆ 13,499ರೂ.ಗಳಿಗೆ ಇದನ್ನು ಖರೀದಿಗೆ ಲಭ್ಯ.

Best Mobiles in India

English summary
vivo T3X 5G first sale starts from April 24 in India. Check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+