Vivo: ಕಳೆದ ತಿಂಗಳು ಲಾಂಚ್ ಆದ ಆಕರ್ಷಕ ವಿವೋ T3x 5G ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್
ವಿವೋ ಸ್ಮಾರ್ಟ್‌ಫೋನ್‌ಗಳನ್ನು (Vivo smartphone) ಭಾರತದಲ್ಲಿ ಮುಗಿಬಿದ್ದು ಖರೀದಿ ಮಾಡುತ್ತಾರೆ, ಇನ್ನು ಈ ಫೋನ್‌ಗೆ ಆಫರ್ ಇದೆ ಅಂದರೆ ಕೇಳಬೇಕೆ?, ಅದರಂತೆ ಕಳೆದ ತಿಂಗಳು ಲಾಂಚ್ ಮಾಡಲಾದ ವಿವೋ T3x 5G ಸ್ಮಾರ್ಟ್‌ಫೋನ್ (Vivo T3x 5G smartphone) ಗೆ ಇದೀಗ ಆಫರ್ ನೀಡಲಾಗಿದೆ.
ಹೌದು, ಲಾಂಚ್ ಆಗಿ ಒಂದು ತಿಂಗಳಿಗೆ ವಿವೋ T3x 5G ಸ್ಮಾರ್ಟ್‌ಫೋನ್ ಆಫರ್ ಬೆಲೆಗೆ ಲಭ್ಯ ಆಗುತ್ತಿದೆ. ಈ ಫೋನ್ 8 GB RAM ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಮುಖ್ಯಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಏನು?, ಆಫರ್ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ T3x 5G ಸ್ಮಾರ್ಟ್‌ಫೋನ್: ಈ ಫೋನ್ 16,499 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ನ ಸಾಮಾನ್ಯ ಬೆಲೆ 20,499 ರೂ.ಗಳಾಗಿದೆ. ಆದರೆ ಪ್ರಮುಖ ಇ ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 19% ರಿಯಾಯಿತಿ ನೀಡಲಾಗಿದೆ. ಇಷ್ಟು ಸಾಲದು ಎಂಬಂತೆ ಬ್ಯಾಂಕ್ ಅಫರ್ ಅನ್ನೂ ಸಹ ನೀಡಲಾಗಿದೆ. ಇದರಿಂದ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಬ್ಯಾಂಕ್ ಆಫರ್ ವಿಚಾರಕ್ಕೆ ಬಂದರೆ ಮೊದಲ ಫ್ಲಿಪ್‌ಕಾರ್ಟ್ ಯುಪಿಐ ವ್ಯವಹಾರದಲ್ಲಿ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಸಕ್ಯಾಶ್‌ಬ್ಯಾಕ್, ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1000 ರೂ.ಗಳ ಆಫರ್, ಕ್ಲಿಯರ್‌ಟ್ರಿಪ್ ಹೋಟೆಲ್‌ಗಳ ಬುಕಿಂಗ್‌ನಲ್ಲಿ FreebieFlat 1000 ರೂ.ಗಳ ರಿಯಾಯಿತಿ ಜೊತೆಗೆ 300 ಸೂಪರ್‌ಕಾಯಿನ್, ಕಾಂಬೊ ಮೊಬೈಲ್ ಮತ್ತು ಕೇಸ್‌ಕವರ್‌ನಲ್ಲಿ ಹೆಚ್ಚುವರಿ 10% ರಿಯಾಯಿತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ವಿವೋ T3x 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.72 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120Hz ರಿಫ್ರೆಶ್ ರೇಟ್ 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 86.4% ಸ್ಕ್ರೀನ್-ಟು-ಬಾಡಿ ಅನುಪಾತ, 393 ppi ಸಾಂದ್ರತೆ ಹೊಂದಿದೆ.
ವಿವೋ T3x 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಇನ್ನು ಆಂಡ್ರಾಯ್ಡ್ 14, ಫನ್‌ಟಚ್ 14 ಓಎಸ್‌ನಲ್ಲಿ ಈ ಫೋನ್ ರನ್ ಆಗಲಿದ್ದು, ಕ್ವಾಲ್ಕಾಮ್ SM6450 ಸ್ನಾಪ್ಡ್ರಾಗನ್ 6 ಜನ್ 1 (4 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಅಡ್ರಿನೊ 710 ಜಿಪಿಯು ಬಲ ಮತ್ತು 128GB + 8GB RAM ಸ್ಟೋರೇಜ್ ಬೆಂಬಲದೊಂದಿಗೆ ಲಭ್ಯ ಇದೆ. ಸ್ಟೋರೇಜ್ ಅನ್ನು ಹೆಚ್ಚು ಮಾಡಿಕೊಳ್ಳಲು ಮೈಕ್ರೋ ಎಸ್‌ಡಿ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ.

ವಿವೋ T3x 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ಸೆಕೆಂಡರಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಅನ್ನು ಈ ಸೆನ್ಸರ್ ಬೆಂಬಲಿಸಲಿವೆ. ಉಳಿದಂತೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿದೆ.

ವಿವೋ T3x 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 44W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗೆಯೇ ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ 3.5 ಎಂಎಂ ಜ್ಯಾಕ್, ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.1, A2DP, LE, ಸ್ಥಾನೀಕರಣ ಜಿಪಿಎಸ್, ಗೆಲಿಲಿಯೊ, ಗ್ಲೋನಾಸ್, ಬಿಡಿಎಸ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಅನ್ನು ಕಾಣಬಹುದಾಗಿದೆ.


Click it and Unblock the Notifications








