ನಾಳೆ ಮತ್ತೆ ವಿವೋ T3x 5G ಫೋನ್ ಸೇಲ್ ಶುರು; ಬಜೆಟ್ ಬೆಲೆ, ಬೊಂಬಾಟ್ ಫೀಚರ್ಸ್!
ವಿವೋ ಮೊಬೈಲ್ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿರುವ ವಿವೋ T3x 5G (vivo T3X 5G) ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಇನ್ನು ಈ ಫೋನಿನ ಮಾರಾಟ ನಾಳೆ (ಮೇ 1 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಪ್ರಾರಂಭ ಆಗಲಿದೆ.
ಹೌದು, ವಿವೋ ಸಂಸ್ಥೆಯ ವಿವೋ T3x 5G ಫೋನಿನ ಸೇಲ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ನಾಳೆ ಶುರುವಾಗಲಿದೆ. ಈ ಮೊಬೈಲ್ 4 GB + 128 GB, 6 GB + 128 GB ಹಾಗೂ 8 GB + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಒಳಗೊಂಡಿದೆ.

ಹಾಗೆಯೇ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್ ಸೌಲಭ್ಯ ಪಡೆದಿರುವ ಈ ಫೋನಿನ ಆರಂಭಿಕ ಬೆಲೆಯು 13,499ರೂ. ಗಳು ಆಗಿದೆ. ಜೊತೆಗೆ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಹಾಗಾದರೇ ವಿವೋ T3 5G ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
ಡಿಸ್‌ಪ್ಲೇ ವಿನ್ಯಾಸ
ವಿವೋ ಸಂಸ್ಥೆಯ ಈ ಮೊಬೈಲ್ 6.72 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹಾಗೂ 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಇದರ ಡಿಸ್‌ಪ್ಲೇಯು 2408x1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಪಡೆದಿದ್ದು, 1000 ನಿಟ್ಸ್ HBM ಬ್ರೈಟ್‌ನೆಸ್ ಆಯ್ಕೆ ಆಗಿದೆ. ಹಾಗೆಯೇ 339 ppi ಪಿಕ್ಸೆಲ್ ಸಾಂದ್ರತೆ ಒಳಗೊಂಡಿದೆ.
ಪ್ರೊಸೆಸರ್ ಪವರ್
ವಿವೋ T3x 5G ಮೊಬೈಲ್ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಅಡ್ರಿನೋ 710 ಜಿಪಿಯುನಿಂದ ಸಪೋರ್ಟ್ ಕೂಡಾ ಇದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14 ಅನ್ನು ಆಧರಿಸಿದ ಫನ್‌ಟಚ್ ಓಎಸ್ 14 ಅನ್ನು ಕೆಲಸ ಮಾಡಲಿದೆ. ಗ್ರಾಹಕರು ಈ ಫೋನ್ 4 GB + 128 GB, 6 GB + 128 GB ಹಾಗೂ 8 GB + 128 GB ವೇರಿಯಂಟ್‌ನಲ್ಲಿ ಖರೀದಿಸಬಹುದು.
ಕ್ಯಾಮೆರಾ ರಚನೆ
ವಿವೋ T3x 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಗೆಯೇ ಇದು 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್ ಲೈಟ್ ಅನ್ನು ಪಡೆದುಕೊಂಡಿದೆ.
ಬ್ಯಾಟರಿ, ಕಲರ್ ಹಾಗೂ ಬೆಲೆ
ವಿವೋ T3x 5G ಮೊಬೈಲ್ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, 44W ಫ್ಲ್ಯಾಶ್ ಚಾರ್ಜ್ ಅನ್ನು ಸಪೋರ್ಟ್ ಲಭ್ಯ ಇದೆ. ಹಾಗೆಯೇ ವಿವೋ T3x 5G ಸ್ಮಾರ್ಟ್‌ಫೋನ್ ಗ್ರೀನ್ ಹಾಗೂ ಕ್ರಿಮ್‌ಸನ್ ಬ್ಲಿಸ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇನ್ನು ಈ ಫೋನಿನ ಆರಂಭಿಕ 4GB RAM ವೇರಿಯಂಟ್ ಬೆಲೆ 13,499 ರೂ.ಗಳು ಆಗಿದೆ.


Click it and Unblock the Notifications








