Home
ಸುದ್ದಿಜಾಲ

Vivo: ಈ ತಿಂಗಳ ಅಂತ್ಯದಲ್ಲಿ ಲಾಂಚ್ ಆಗಲಿದೆ ವಿವೋ T3x 5G! ಬೆಲೆ ಎಷ್ಟಿರಲಿದೆ?

ವಿವೋ ಫೋನ್‌ಗಳು (Vivo phones) ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ಮೂಲಕ ಇವುಗಳನ್ನು ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಈ ನಡುವೆ ಈ ತಿಂಗಳ ಅಂತ್ಯದಲ್ಲಿ ವಿವೋ T3x 5G ಸ್ಮಾರ್ಟ್‌ಫೋನ್‌ (Vivo T3x 5G smartphone) ಅನ್ನು ಅನಾವರಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಹೌದು, ವಿವೋ T3x 5G ಅನ್ನು ಈ ತಿಂಗಳ ಅಂತ್ಯದಲ್ಲಿ ಅನಾವರಣ ಮಾಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್‌ ವಿವೋ T2X ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿ ಆಗಲಿರಲಿದೆ. ಅಲ್ಲದೆ ಇದು ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ?, ಬೆಲೆ ಎಷ್ಟಿರಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಈ ತಿಂಗಳ ಅಂತ್ಯದಲ್ಲಿ ಲಾಂಚ್ ಆಗಲಿದೆ ವಿವೋ T3x 5G! ಬೆಲೆ ಎಷ್ಟಿರಲಿದೆ?

ವಿವೋ T3x 5G ಸ್ಮಾರ್ಟ್‌ಫೋನ್: ವಿವೋ ಕಳೆದ ತಿಂಗಳು ವಿವೋ T3 5G ಸ್ಮಾರ್ಟ್‌ಫೋನ್‌ (Vivo T3 5G smartphone) ಅನ್ನು ಲಾಂಚ್‌ ಮಾಡಿದ್ದು, ಈಗ ವಿವೋ ಭಾರತದಲ್ಲಿ T3x 5G ಅನ್ನು ಲಾಂಚ್‌ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ವಿವೋ ಅಧಿಕೃತವಾಗಿ ಈ T3x 5G ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, 91ಮೊಬೈಲ್ಸ್ ಈ ಬಗ್ಗೆ ಕೆಲವು ಮಾಹಿತಿಗಳನ್ನು ವರದಿ ಮಾಡಿದೆ.

ಅದರಂತೆ ವಿವೋ T3x 5G ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ ಮೂರನೇ ವಾರದಲ್ಲಿ ಲಾಂಚ್‌ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಅಂದರೆ ಏಪ್ರಿಲ್ 19 ಅಥವಾ 22 ರಂದು ಈ ಫೋನ್‌ ಲಾಂಚ್‌ ಆಗಬಹುದು ಎಂದು ಲೀಕ್‌ ಮಾಹಿತಿ ಪ್ರಕಾರ ತಿಳಿದುಬಂದಿದೆ. ಅಲ್ಲದೆ ಈ ಫೋನ್‌ನ ಬಗ್ಗೆ ವಿವೋ ಮುಂದಿನ ವಾರದಿಂದ ಕೆಲವು ಫೀಚರ್ಸ್‌ ಬಗ್ಗೆ ಹಾಗೂ ಫೋನ್‌ ಬಗ್ಗೆ ಮಾಹಿತಿ ಲೀಕ್‌ ಮಾಡುವ ಸಾಧ್ಯತೆ ಇದೆ.

ಹಾಗೆಯೆ ಈ ವಿವೋ T3x 5G ಸ್ಮಾರ್ಟ್‌ಫೋನ್ ವಿವೋ T2x 5G ವೇರಿಯಂಟ್‌ನ ಸುಧಾರಿತ ಆವೃತ್ತಿಯಾಗಿರಲಿದೆ ಎನ್ನಲಾಗಿದ್ದು, ಭಾರತದಲ್ಲಿ ಈ ಫೋನ್‌ಗೆ 12,000 ರೂ.ಗಳಿಂದ 15,000 ರೂ.ಗಳ ಒಳಗೆ ಬೆಲೆ ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಬಜೆಟ್‌ ಬೆಲೆ ವಿಭಾಗದಲ್ಲಿ ಈ ಫೋನ್‌ ಕಾಣಿಸಿಕೊಳ್ಳಲಿದೆ ಎಂದು ಊಹಿಸಬಹುದು. ಅದಾಗ್ಯೂ ಈ ಫೋನ್‌ನ ಯಾವುದೇ ಫೀಚರ್ಸ್‌ ಬಗ್ಗೆ ಮಾಹಿತಿ ತಿಳಿದಿಬಂದಿಲ್ಲ. ಆದರೆ ಇದು ವಿವೋ T2x 5G ವೇರಿಯಂಟ್‌ ( Vivo T2x 5G) ಅನ್ನೇ ಹೋಲುತ್ತದೆ ಎಂದು ಹೇಳಲಾಗಿದೆ.

ಈ ತಿಂಗಳ ಅಂತ್ಯದಲ್ಲಿ ಲಾಂಚ್ ಆಗಲಿದೆ ವಿವೋ T3x 5G! ಬೆಲೆ ಎಷ್ಟಿರಲಿದೆ?

ವಿವೋ T2x ಸ್ಮಾರ್ಟ್‌ಫೋನ್‌ ಫೀಚರ್ಸ್‌: ಈ ಫೋನ್‌ನ ಫೀಚರ್ಸ್‌ ಬಗ್ಗೆ ತಿಳಿಯುವುದಾದರೆ ಇದು 60Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ 6.58 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ.

ಇದರೊಂದಿಗೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು, ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ ಓಎಸ್‌ ಅನ್ನು ಇದು ರನ್‌ ಮಾಡಲಿದೆ. ಉಳಿದಂತೆ ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಅಂದರೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಇದು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಅಲ್ಲದೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Vivo launched the Vivo T3 5G smartphone last month, now it is reported that Vivo is going to launch the T3x 5G in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+