Home
ಸುದ್ದಿಜಾಲ

ಮಾ.12ಕ್ಕೆ Vivo T4x 5G ಸೇಲ್; ಕೇವಲ 12,999 ರೂ.. ಆಫರ್ ಏನಿದೆ? ವಿಶೇಷತೆಗಳೇನು?

ವಿವೋ ಇತ್ತೀಚೆಗೆ ಭಾರತದಲ್ಲಿ ಹೊಸ ವಿವೋ T4x 5G (Vivo T4x 5G) ಅನ್ನು ಬಿಡುಗಡೆ ಮಾಡಿದೆ. ಇದನ್ನು 15,000 ರೂ.ಗಿಂತ ಕಡಿಮೆ ಬೆಲೆಗೆ ಪರಿಚಯಿಸಲಾಗಿದೆ. ಅಂದಹಾಗೆ, ಈ ಹೊಸ ಮೊಬೈಲ್ ಮಾರ್ಚ್ 12 ರಿಂದ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಗ್ರಾಹಕರಿಗೆ 1,000 ರೂ. ರಿಯಾಯಿತಿ ಘೋಷಿಸಿದೆ. ಬನ್ನಿ, ವಿವೋ T4x 5G ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ T4x 5G ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಫೋನಿನ ದೊಡ್ಡ ಶಕ್ತಿ ಎಂದರೆ ಬ್ಯಾಟರಿ. ಈ ಮೊಬೈಲ್ 6,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 6.72 ಇಂಚಿನ ಡಿಸ್ಪ್ಲೇ ಮತ್ತು 8GB RAM + 256GB ಸ್ಟೋರೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರಾಟಕ್ಕೆ ಸಜ್ಜಾಗಿದೆ.

ಮಾ.12ಕ್ಕೆ Vivo T4x 5G ಸೇಲ್; ಕೇವಲ 12,999 ರೂ.. ಆಫರ್ ಏನಿದೆ? ವಿಶೇಷತೆಗಳೇನು?

ವಿವೋ T4x 5G ಬೆಲೆ ಮತ್ತು ಆಫರ್

ವಿವೋ T4x 5G ಫೋನ್ ಭಾರತದಲ್ಲಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವನ್ನು ಕೇವಲ 13,999 ರೂ.ಗೆ ಖರೀದಿಸಬಹುದು. 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 14,999 ರೂ. ಇದೆ. ಮತ್ತು 8GB RAM + 256GB ಸ್ಟೋರೇಜ್ ಮಾದರಿಯು 16,999 ರೂ.ಗೆ ಬಿಡುಗಡೆಯಾಗಿದೆ.

ಮೊದಲ ಮಾರಾಟದ ಪ್ರಯುಕ್ತ ಈ ಫೋನ್ ಖರೀದಿ ಮೇಲೆ ಕಂಪನಿಯು 1,000 ರೂ. ರಿಯಾಯಿತಿ ನೀಡುತ್ತಿದೆ. ನೀವು ಈ ವಿವೋ 5G ಫೋನನ್ನು 12,999 ರೂ.ಗಳ ಆರಂಭಿಕ ಬೆಲೆಗೆ ಖರೀದಿಸಬಹುದು. ಇದು ಮೆರೈನ್ ಬ್ಲೂ ಮತ್ತು ಪ್ರೋಟಾನ್ ಪರ್ಪಲ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಈ ಮೊಬೈಲ್ ಮಾರ್ಚ್ 12 ರಂದು ಮಧ್ಯಾಹ್ನ 12 ಗಂಟೆಯಿಂದ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

ಈ ಸುದ್ದಿ ಓದಿದ್ದೀರಾ?: ಜಸ್ಟ್ 5,999 ರೂ.! ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಆಫರ್.. ಅಗ್ಗದ ಬೆಲೆಗೆ ಈ ಸ್ಮಾರ್ಟ್ ಟಿವಿಗಳು ಸೇಲ್.. ಪಟ್ಟಿ ನೋಡಿ

ವಿವೋ T4x 5G ವೈಶಿಷ್ಟ್ಯಗಳು

ವಿವೋ T4x 5G ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 2408 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ ಮತ್ತು 1050 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.ಈ ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್ 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ.

ವಿವೋ T4x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಎಐ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ 5G ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ ವಿವೋ 5G ಮೊಬೈಲ್ 6,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ವಿವೋ T4x 5G ಫೋನ್ 8 5G ಬ್ಯಾಂಡ್‌ಗಳನ್ನು ಹೊಂದಿದೆ. ಇದು ಜಿಯೋ ಮತ್ತು ಏರ್‌ಟೆಲ್ ನೆಟ್‌ವರ್ಕ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು OTG ಜೊತೆಗೆ ಬ್ಲೂಟೂತ್ 5.4 ಮತ್ತು ವೈ-ಫೈ 6 ಬೆಂಬಲ ಹೊಂದಿದೆ. ಇದು ಐಆರ್ ಬ್ಲಾಸ್ಟರ್ ಸಹ ಹೊಂದಿದ್ದು, ಫೋನ್ ಟಿವಿ ರಿಮೋಟ್‌ನಂತೆ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಮೊಬೈಲ್ ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ.

Best Mobiles in India

English summary
vivo T4x 5G goes on First Sale March 12 with launch offers: check Price, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+