Vivo: ಶಕ್ತಿಶಾಲಿ ಪ್ರೊಸೆಸರ್‌ನೊಂದಿಗೆ ವಿವೋ ಟ್ಯಾಬ್ 3 ಪ್ರೊ! ನಿರೀಕ್ಷಿತ ಫೀಚರ್ಸ್ ಏನು?
ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಪಡೆದಿವೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷ ಆಕರ್ಷಣೆ ಇದ್ದು, ಈ ನಡುವೆ ಕೆಲವೇ ದಿನಗಳಲ್ಲಿ ವಿವೋದಿಂದ ಹೊಸ ಟ್ಯಾಬ್ ಲಾಂಚ್ ಆಗಲಿದೆ. ಈ ಟ್ಯಾಬ್ ಬಲಶಾಲಿ ಚಿಪ್‌ಸೆಟ್‌ನೊಂದಿಗೆ ಬರಲಿದೆ.
ಹೌದು, ವಿವೋ ಇದೇ ತಿಂಗಳ 26 ರಂದು ಚೀನಾದಲ್ಲಿ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಾದ ವಿವೋ X ಫೋಲ್ಡ್ 3 ಮತ್ತು X ಫೋಲ್ಡ್ 3 ಪ್ರೊ (Vivo X Fold 3 and X Fold 3 Pro) ಅನ್ನು ಲಾಂಚ್ ಮಾಡಲಿದೆ. ಈ ಫೋನ್‌ಗಳು ಕ್ರಮವಾಗಿ ಸ್ನಾಪ್‌ಡ್ರಾಗನ್ 8 ಜನ್ 2 ಮತ್ತು ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಬಲ ಹೊಂದಿರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ವಿವೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ (Vivo Pad 3 Pro Tablet) ಸಹ ಅನಾವರಣ ಆಗಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಟ್ಯಾಬ್‌ನ ನಿರೀಕ್ಷಿತ ಫೀಚರ್ಸ್ ಏನು? ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ ಟ್ಯಾಬ್ 3 ಪ್ರೊ: ಈ ಟ್ಯಾಬ್ ಮಾದರಿ ಸಂಖ್ಯೆ PA2473 ನೊಂದಿಗೆ ಗುರುತಿಸಿಕೊಂಡಿದ್ದು, ಗೀಕ್‌ಬೆಂಚ್‌ನಲ್ಲಿ ಇದನ್ನು ಗಮನಿಸಬಹುದಾಗಿದೆ. ಈ ಟ್ಯಾಬ್ಲೆಟ್ ಈ ಹಿಂದೆ ಚೀನಾದ 3C ಪ್ರಮಾಣೀಕರಣ ಪ್ಲಾಟ್‌ಫಾರ್ಮ್‌ನ ಡೇಟಾಬೇಸ್‌ನಲ್ಲಿ ಕಳೆದ ತಿಂಗಳು ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಚೀನೀ ಮಾರುಕಟ್ಟೆಯಲ್ಲಿ ಈ ಟ್ಯಾಬ್ ಸಹ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಗೀಕ್‌ಬೆಂಚ್ ಲಿಸ್ಟ್‌ನಲ್ಲಿ ಡೈಮೆನ್ಸಿಟಿ 9300 ಪ್ರೊಸೆಸರ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಪ್ರೊಸೆಸರ್ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಟೆಕ್ ಚಿಪ್ ಆಗಿದೆ. ಚಿಪ್‌ನ ಹೆಸರನ್ನು ಪಟ್ಟಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿಲ್ಲವಾದರೂ ಲಭ್ಯವಿರುವ ಸಿಪಿಯು ಮತ್ತು ಜಿಪಿಯು ವಿವರಗಳು D9300 ಚಿಪ್ ಆನ್‌ಬೋರ್ಡ್ ಅನ್ನು ಹೊಂದಿದೆ ಎಂದು ತಿಳಿಸುತ್ತದೆ.

ಉಳಿದಂತೆ ವಿವೋ ಪ್ಯಾಡ್ 3 ಪ್ರೊ 16 GB RAM ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್ 14 ಅನ್ನು ರನ್ ಮಾಡಲಿದೆ ಎಂದು ಈ ಮೂಲಕ ತಿಳಿದುಬಂದಿದೆ. ಇದರ ಜೊತೆಗೆ ಇದು OriginOS 4 ನ ಲೇಯರ್ ಅನ್ನೂ ಸಹ ಹೊಂದಿರುವ ಸಾಧ್ಯತೆಯಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಗೀಕ್‌ಬೆಂಚ್‌ನ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಪರೀಕ್ಷೆಗಳಲ್ಲಿ, ಪ್ಯಾಡ್ 3 ಪ್ರೊ ಕ್ರಮವಾಗಿ 2223 ಮತ್ತು 7547 ಅಂಕಗಳನ್ನು ಪಡೆದುಕೊಂಡಿದೆ.
ಇನ್ನು ಈ ಡಿವೈಸ್ ಬಗ್ಗೆ ಲೀಕ್ ಆದ ಮಾಹಿತಿಗಳನ್ನು ತಿಳಿಸುವುದಾದರೆ 12.95 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಈ ಡಿಸ್‌ಪ್ಲೇ 3K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನ ಎಲ್ಇಡಿ ಫ್ಲ್ಯಾಶ್ ಆಯ್ಕೆಯೊಂದಿಗೆ ನೀಡಲಾಗಿದೆ ಎಂದು ತಿಳಿದುಬಂದಿದ್ದು, 11,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಘಟಕವನ್ನು ಇದು ಪಡೆಯುವ ನಿರೀಕ್ಷೆ ಇದೆ. ಹಾಗೆಯೇ 66W ವೇಗದ ಚಾರ್ಜಿಂಗ್ ಬೆಂಬಲವನ್ನು ಈ ಡಿವೈಸ್ ಪಡೆಯಲಿದೆ ಎಂದು ಲೀಕ್ ಆದ ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ವಿವೋ T3 5G ಲಾಂಚ್ ಡೇಟ್ ಬಹಿರಂಗ: ಈ ನಡುವೆ ಮಾರ್ಚ್ 21 ರಂದು ಭಾರತದಲ್ಲಿ T ಸರಣಿ ಸ್ಮಾರ್ಟ್‌ಫೋನ್ ವಿವೋ T3 5G ಅನ್ನು ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚೆಗೆ ಬಿಡುಗಡೆಯಾದ ಐಕ್ಯೂ Z7 5G ನಂತೆಯೇ ಫೀಚರ್ಸ್ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ 6.67 ಇಂಚಿನ FHD+ 120Hz ಅಮೋಲೆಡ್ ಡಿಸ್‌ಪ್ಲೇ ಹಾಗೂ ಮೀಟಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಬಲ ಪಡೆದಿರಲಿದೆ ಎನ್ನಲಾಗಿದೆ.
ಇದರ ಜೊತೆಗೆ 8GB RAM ಹಾಗೂ 128GB ಅಥವಾ 256GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಈ ಫೋನ್ ಲಭ್ಯ ಇರಲಿದೆ ಎನ್ನಲಾಗಿದ್ದು, 50MP ಸೋನಿ IMX882 ಮುಖ್ಯ ಕ್ಯಾಮೆರಾ ಜೊತೆಗೆ 2MP ಜೊತೆಗೆ ಎಫ್‌ಎಚ್‌ಡಿ 4MP ಕ್ಯಾಮೆರಾವನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಇದರ ಜೊತೆಗೆ 16MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.


Click it and Unblock the Notifications








