ಭಾರತದಲ್ಲಿ 'ವಿವೋ ಯು10' ಬಿಡುಗಡೆ : ಆರಂಭಿಕ ಬೆಲೆ 8,990ರೂ!

|

ಚೀನಾ ಮೂಲದ ವಿವೋ ಕಂಪನಿಯು ಇತ್ತೀಚಿಗೆ 'ವಿವೋ Z1x' ಮತ್ತು 'ವಿವೋ V17 ಪ್ರೊ' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಸೌಂಡ್‌ ಕ್ರಿಯೆಟ್‌ ಮಾಡಿದೆ. ಈಗ ಕಂಪನಿಯು ಭಾರತೀಯ ಮಾರುಕಟ್ಟೆಗೆ ಮತ್ತೊಂದು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನವನ್ನು ಮಾಡಲಿದೆ.

ವಿವೋ ಯು10

ಹೌದು, ವಿವೋ ಕಂಪನಿಯು ಇಂದು (ಸೆ.24) ದೇಶಿಯ ಮಾರುಕಟ್ಟೆಗೆ 'ವಿವೋ ಯು10' ಹೆಸರಿನ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯನ್ನು ಹೊಂದಿದ್ದರು ಫೀಚರ್ಸ್‌ಗಳಲ್ಲಿ ಯಾವುದೇ ರಾಜಿ ಮಾಡಿಲ್ಲ. 5,000mAh ಬ್ಯಾಟರಿ ಬ್ಯಾಕ್‌ಅಪ್‌, ಮೂರು ರಿಯರ್ ಕ್ಯಾಮೆರಾ ಮತ್ತು ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಮೂರು ವೇರಿಯಂಟ್‌

ವಿವೋ ಯು10 ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 3GB RAM + 32GB, 3GB RAM + 64GB ಮತ್ತು 4GB RAM + 6GB ಸ್ಟೋರೇಜ್‌ ಸಾಮರ್ಥ್ಯದಲ್ಲಿವೆ. ಈ ಫೋನಿನ ಆರಂಭಿಕ ಬೆಲೆಯು 8,990ರೂ.ಗಳಾಗಿದ್ದು, ಇದೇ ಸೆಪ್ಟೆಂಬರ್ 29ರಂದು ಅಮೆಜಾನ್ ಮತ್ತು ವಿವೋ ವೆಬ್‌ಸೈಟ್‌ನಲ್ಲಿ ಮೊದಲ ಸೇಲ್ ಶುರುವಾಗಲಿದೆ. ಹಾಗಾದರೇ ವಿವೋ ಯು10 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ವಿವೋ ಯು10 ಸ್ಮಾರ್ಟ್‌ಫೋನ್ 720 x 1544 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.35 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್ ಸ್ಟೈಲ್ ವಿನ್ಯಾಸ ಪಡೆದಿದೆ. ಡಿಸ್‌ಪ್ಲೇಯ ಅನುಪಾತವು 19.3:9 ಆಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 268 ppi ಆಗಿದೆ. ಬಾಹ್ಯ ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅನುಪಾತವು ಶೇ.89%ರಷ್ಟಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ವಿವೋ ಯು10 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್‌ ಹೊಂದಿದ್ದು, ಜೊತೆಗೆ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವನ್ನು ಪಡೆದಿದೆ. ಇದರೊಂದಿಗೆ 3GB RAM + 32GB ಸ್ಟೋರೇಜ್, 3GB RAM + 64GB ಸ್ಟೋರೇಜ್ ಮತ್ತು 4GB RAM + 6GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಮೂರು ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ.

ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ವಿವೋ ಯು10 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ರಿಯರ್ ಕ್ಯಾಮೆರಾ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿಯ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದ್ದು, ಮೂರನೇ ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್ನಲ್ಲಿದೆ. ಆಟೋ ಫೋಕಸ್‌, ಫೇಸ್‌ ಗ್ರಹಿಕೆ, ಫ್ಲ್ಯಾಶ್‌ ಆಯ್ಕೆಗಳು ಸಹ ಇವೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ವಿವೋ ಯು10 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿರುವುದು ವಿಶೇಷ. ಇನ್ನು ಬ್ಲೂಟೂತ್, ಜಿಪಿಎಸ್‌, ವೈಫೈ ಮತ್ತು 4G VoLTE ಸೇರಿದಂತೆ ಫಿಂಗರ್‌ಪ್ರಿಂಟ್ ಸೌಲಭ್ಯಗಳನ್ನು ಒಳಗೊಂಡಿದೆ. ಇದರೊಂದಿಗೆ ಸಿಸ್ಟಮ್‌ ಡಾರ್ಕ್ ಮೋಡ್ ಆಯ್ಕೆಯನ್ನು ಸಪೋರ್ಟ್‌ ಮಾಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ ಯು10 ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಆರಂಭಿಕ 3GB RAM + 32GB ವೇರಿಯಮಟ್ ಬೆಲೆಯು 8,990ರೂ, 3GB RAM + 64GB ವೇರಿಯಮಟ್ ಬೆಲೆಯು 9,990ರೂ ಮತ್ತು 10,990ರೂ. ಪ್ರೈಸ್‌ಟ್ಯಾಗ್‌ ಅನ್ನು 4GB RAM + 6GB ವೇರಿಯಂಟ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್ 29ರಂದು ಅಮೆಜಾನ್ ಮತ್ತು ವಿವೋ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
key features of the Vivo U10 are a 5,000mAh battery, Snapdragon 665 SoC, triple rear camera. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X