ಇಂದು 'ವಿವೋ U20' ಫೋನಿನ ಫಸ್ಟ್‌ ಸೇಲ್!.ಆರಂಭಿಕ ಬೆಲೆ 10,990ರೂ.!

|

ವಿವೋ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ 'ವಿವೋ ಯು20' ಸ್ಮಾರ್ಟ್‌ಫೋನಿನ ಮೊದಲ ಫ್ಲ್ಯಾಶ್‌ ಸೇಲ್ ಇಂದು (ನವೆಂಬರ್ 28) ಆರಂಭವಾಗಲಿದೆ. ಇ-ಕಾಮರ್ಸ್‌ ದಿಗ್ಗಜ ಅಮೆಜಾನ್ ತಾಣದಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ 'ವಿವೋ ಯು20' ಸ್ಮಾರ್ಟ್‌ಫೋನ್‌ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್‌ ಬೆಲೆಯು ಕೇವಲ 10,990ರೂ.ಗಳು ಆಗಿದೆ.

ವಿವೋ U20

ಹೌದು, ವಿವೋದ ಹೊಸ 'ವಿವೋ U20' ಸ್ಮಾರ್ಟ್‌ಫೋನ್‌ ಇಂದು ಅಮೆಜಾನ್‌ ತಾಣದಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌, 5,000mAh ಬ್ಯಾಟರಿ ಮತ್ತು ತ್ರಿವಳಿ ಕ್ಯಾಮೆರಾ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. 4GB RAM ಮತ್ತು 64GB ವೇರಿಯಂಟ್‌ ಫೋನ್ 10,990ರೂ.ಗಳಿಗೆ ಹಾಗೂ 6GB RAM ಮತ್ತು 64GB ವೇರಿಯಂಟ್‌ ಫೋನ್ 11,990ರೂ.ಗಳಿಗೆ ದೊರೆಯುತ್ತವೆ. ಹಾಗಾದರೇ ವಿವೋ ಸಂಸ್ಥೆಯ 'ವಿವೋ U20' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

'ವಿವೋ U20' ಸ್ಮಾರ್ಟ್‌ಫೋನ್ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ರೆಸಲ್ಯೂಶನನ್ನು ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇ ಪಿಲ್ಸಲ್ ರೆಸಲ್ಯೂಶನ್‌ ಸಾಮರ್ಥ್ಯವು 1080 x 2340 ಆಗಿರಲಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ಅಡುವಿನ ಅನುಪಾತ ಶೇ.90.3% ಆಗಿದೆ. ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್ ಮಾದರಿಯಲ್ಲಿರಲಿದ್ದು, ಡಿಸ್‌ಪ್ಲೇಯ ಪ್ರಖರತೆಯು ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಅನುಕೂಲಕರವಾಗಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

'ವಿವೋ U20' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಅನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಫನ್‌ಟಚ್ OS 9 ಬೆಂಬಲಿತ ಅಂಡ್ರಾಯ್ಡ್‌ 9 ಪೈ ಓಎಸ್‌ ಅನ್ನು ಪಡೆದಿದೆ. ಇದರೊಂದಿಗೆ 4GB RAM ಮತ್ತು 64GB ಹಾಗೂ 6GB RAM ಮತ್ತು 64GB ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ 256GB ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಆಯ್ಕೆ ಇದೆ.

ಸ್ಪೆಷಲ್‌ ಕ್ಯಾಮೆರಾ

ಸ್ಪೆಷಲ್‌ ಕ್ಯಾಮೆರಾ

ವಿವೋ U20' ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಹಾಗೂ ನೈಟ್‌ ಮೋಡ್ ಆಯ್ಕೆಯನ್ನು ಹೊಂದಿದೆ. ಇನ್ನು ಸೆಕೆಂಡ್ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ವೈಡ್‌ ಆಂಗಲ್ ಲೆನ್ಸ್‌ನಲ್ಲಿದೆ. ತೃತೀಯ ಕ್ಯಾಮೆರಾವು 2ಎಂಪಿ ಮೈಕ್ರೋ ಸೆನ್ಸಾರ್‌ ಹೊಂದಿರಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದುಕೊಂಡಿದೆ ಜತೆಗೆ ಅಗತ್ಯ ಎಡಿಟಿಂಗ್ ಫೀಚರ್ಸ್‌ಗಳು ಇವೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ವಿವೋ U20' ಸ್ಮಾರ್ಟ್‌ಫೋನಿನಲ್ಲಿ 5,000mAh ಬ್ಯಾಟರಿ ಸಾಮರ್ಥ್ಯವನ್ನು ನೀಡಲಾಗಿದೆ ಹಾಗೆಯೇ ಇದಕ್ಕೆ ಬೆಂಬಲವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ 273 ಗಂಟೆಗಳ ಸ್ಟ್ಯಾಂಡ್‌ಬೈ ಬ್ಯಾಕ್‌ಅಪ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೇ 11 ಗಂಟೆಗಳ ಫೇಸ್‌ಬುಕ್ ಮತ್ತು ಯೂಟ್ಯೂಬ್ ಬಳಕೆ ಬ್ಯಾಕ್‌ಅಪ್‌ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮೆಜಾನ್ ಮತ್ತು ವಿವೋ ತಾಣಗಳಲ್ಲಿ ಇಂದು (ನವೆಂಬರ್ 28) 'ವಿವೋ U20' ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್ ನಡೆಯಲಿದೆ. ಆರಂಭಿಕ 4GB RAM ಮತ್ತು 64GB ವೇರಿಯಂಟ್ ಬೆಲೆಯು 10,990ರೂ.ಗಳಾಗಿದೆ. ಅದೇ ರೀತಿ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 11,990ರೂ.ಗಳಾಗಿದೆ. ರೇಸಿಂಗ್ ಬ್ಲ್ಯಾಕ್‌ ಮತ್ತು ಬ್ಲೆಜ್‌ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

ಗೂಗಲ್ ನೀಡಿರುವ ಒಂದು ಚಾಲೆಂಜ್ ಗೆದ್ದರೆ ಸಿಗುತ್ತೆ ಬರೋಬ್ಬರಿ 10.76 ಕೋಟಿ!ಗೂಗಲ್ ನೀಡಿರುವ ಒಂದು ಚಾಲೆಂಜ್ ಗೆದ್ದರೆ ಸಿಗುತ್ತೆ ಬರೋಬ್ಬರಿ 10.76 ಕೋಟಿ!

Best Mobiles in India

English summary
Vivo U20 smartphone will be available on e-commerce website Amazon today at 12pm. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X