ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

|

ಭಾರತೀಯ ಮೊಬೈಲ್‌ ಮಾರುಕ್ಟಟೆಯಲ್ಲಿ ಗಟ್ಟಿ ಸ್ಥಾನವನ್ನು ಪಡೆದುಕೊಂಡಿರುವ ವಿವೋ ಕಂಪನಿಯು, ಇತ್ತೀಚಿಗೆ ವಿ ಸರಣಿಯಲ್ಲಿ ವಿ15 ಮತ್ತು ವಿ15 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಆದರೆ ಇದೀಗ ಸಂಸ್ಥೆಯು ಮೊಬೈಲ್‌ ಮಾರುಕಟ್ಟೆಯಲ್ಲಿ ಮತ್ತೆ ಭಾರಿ ಸಂಚನಯ ಮೂಡಿಸಿದ್ದು, ತನ್ನ ಜನಪ್ರಿಯ 'ವಿ15' ಮತ್ತು 'ವೈ17' ಸ್ಮಾರ್ಟ್‌ಪೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.

ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

ಹೌದು, ವಿವೋ ಕಂಪನಿಯು 'ವಿ15' ಮತ್ತು 'ವೈ17' ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರ್ಮನೆಂಟ್ ಆಗಿ 2000ರೂ.ಗಳನ್ನು ಇಳಿಕೆ ಮಾಡಿದ್ದು, ಹೀಗಾಗಿ ವಿ15 ಸ್ಮಾರ್ಟ್‌ಫೋನ್‌ ಇನ್ಮುಂದೆ 19,990ರೂ.ಗಳಿಗೆ ಮತ್ತು 'ವೈ17' ಸ್ಮಾರ್ಟ್‌ಫೋನ್‌ 15,990ರೂ.ಗಳಿಗೆ ದೊರೆಯಲಿದೆ. ಈ ಮೊದಲು ವಿ15 ಫೋನ್‌ ಬೆಲೆಯು 23,990ರೂ.ಗಳು ಮತ್ತು ವೈ17 ಸ್ಮಾರ್ಟ್‌ಫೋನ್‌ ಬೆಲೆಯು 17,990ರೂ.ಗಳು ಆಗಿತ್ತು.

ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

ಈ ಎರಡು ಸ್ಮಾರ್ಟ್‌ಫೋನ್‌ಗಳು ದೇಶಿಯ ಮಾರುಕಟ್ಟೆಯಲ್ಲಿನ ಪ್ರಮುಖ ಮೊಬೈಲ್‌ ಅಂಗಡಿಗಳಲ್ಲಿ ಮತ್ತು ಅಧಿಕೃತ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರಲಿವೆ. ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಹಲವು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆದಿವೆ. ಹಾಗಾದರೇ ವಿವೋ 'ವಿ15' ಮತ್ತು 'ವೈ17' ಸ್ಮಾರ್ಟ್‌ಫೋನ್‌ಗಳು ಇತರೆ ಯಾವೆಲ್ಲಾ ಫೀಚರ್ಸ್‌ಸಗಳನ್ನು ಹೊಂದಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ! ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ವಿವೋ ವಿ15 ಡಿಸ್‌ಪ್ಲೇ

ವಿವೋ ವಿ15 ಡಿಸ್‌ಪ್ಲೇ

ವಿವೋ ವಿ15 ಸ್ಮಾರ್ಟ್‌ಫೋನ್‌ 2340×1080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಸೂಪರ್ AMOLEDನ 6.53 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ರೇರ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನಿನ ಬಾಹ್ಯ ರಚನೆ ಸುಂದರವಾಗಿದ್ದು, ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.

ವಿವೋ ವಿ15 ತ್ರಿವಳಿ ಕ್ಯಾಮೆರಾ

ವಿವೋ ವಿ15 ತ್ರಿವಳಿ ಕ್ಯಾಮೆರಾ

ವಿವೋ ವಿ15 ಸ್ಮಾರ್ಟ್‌ಫೋನಿನಲ್ಲಿ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 12ಮೆಗಾಪಿಕ್ಸಲ್, ಸೆಕೆಂಡರಿ ಕ್ಯಾಮೆರಾವು 8ಮೆಗಾಪಿಕ್ಸಲ್ ಮತ್ತು ಮೂರನೇ ಕ್ಯಾಮೆರಾವು 5ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿವೆ. ಇದರೊಂದಿಗೆ LED ಫ್ಯ್ಲಾಶ್‌ ಸೌಲಭ್ಯವನ್ನು ನೀಡಲಾಗಿದೆ.

ಓದಿರಿ : 'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ! ಓದಿರಿ : 'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ!

ವಿವೋ ವಿ15 ಸೆಲ್ಫೀ ಕ್ಯಾಮೆರಾ

ವಿವೋ ವಿ15 ಸೆಲ್ಫೀ ಕ್ಯಾಮೆರಾ

ಸದಾ ಹೊಸತನಗಳನ್ನು ಪರಿಚಯಿಸುವ ವಿವೋ ಸಂಸ್ಥೆಯು ತನ್ನ ವಿವೋ ವಿ15 ಸ್ಮಾರ್ಟ್‌ಫೋನಿನಲ್ಲಿ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದೆ. 32 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರುವ ಸೆಲ್ಫೀ ಕ್ಯಾಮೆರಾವು, ಪಾಪ್‌ಅಪ್‌ ಮಾದರಿಯಲ್ಲಿದೆ. ಸ್ಮಾರ್ಟ್‌ಫೋನಿನ ಹೊರಗೆ ಸೆಲ್ಫಿ ಕ್ಯಾಮೆರಾ ಕಾಣಿಸುವುದಿಲ್ಲ ಆದರೆ ಸೆಲ್ಫೀ ಸೆರೆಹಿಡಿಯುವಾಗ ಮಾತ್ರ ಕ್ಯಾಮೆರಾ ತೆರೆದುಕೊಳ್ಳುತ್ತದೆ.

ವಿವೋ ವಿ15 ಪ್ರೊಸೆಸರ್

ವಿವೋ ವಿ15 ಪ್ರೊಸೆಸರ್

ಮೀಡಿಯಾ ಟೆಕ್‌ ಹಿಲಿಯೊ P70 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ 6GB RAM ಸಾಮರ್ಥ್ಯ ಮತ್ತು 64 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ.

ವಿವೋ ವಿ15 ಬ್ಯಾಟರಿ

ವಿವೋ ವಿ15 ಬ್ಯಾಟರಿ

ವಿವೋ ವಿ15 ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿಯನ್ನು ಹೊಂದಿದ್ದು, ಇದರೊಂದಿಗೆ ಡ್ಯುಯಲ್‌ ಇಂಜಿನ್ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಪಡೆದುಕೊಳ್ಳಲಿದ್ದು, ಒಂದು ಭಾರಿ ಫುಲ್‌ ಚಾರ್ಜ್‌ ಮಾಡಿದರೇ ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ.

ವಿವೋ ವೈ17 ಫೀಚರ್ಸ್‌

ವಿವೋ ವೈ17 ಫೀಚರ್ಸ್‌

ವಿವೋ ವೈ17 ಸ್ಮಾರ್ಟ್‌ಫೋನ್‌ 6.35 ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ವಾಟರ್‌ನಾಚ್, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಗಳನ್ನು ಹೊಂದಿದೆ. ಮೀಡಿಯಾ ಟೆಕ್‌ ಹಿಲಿಯೊ P35 SoC ಪ್ರೊಸೆಸರ್ ಶಕ್ತಿಯನ್ನು ಹೊಂದಿದ್ದು, 4GB RAM ಮತ್ತು 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಫೋನ್‌ ಹಿಂಬದಿ ತ್ರಿವಳಿ ಕ್ಯಾಮೆರಾ ಇದ್ದು, ಅವುಗಳು ಕ್ರಮವಾಗಿ 13ಎಂಪಿ, 8ಎಂಪಿ ಮತ್ತು 2ಎಂಪಿ ಸಾಮರ್ಥ್ಯದಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 20ಎಂಪಿ ಸಾಮರ್ಥ್ಯದಲ್ಲಿದೆ.

ವಿವೋ ವೈ17 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 18W ಬಲದ ಡ್ಯುಯಲ್‌ ಇಂಜಿನ್ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ಗೆ ವೇಗವಾಗಿ ಚಾರ್ಜ್‌ ಒದಗಿಸಲಿದೆ.

ಓದಿರಿ : ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಿಂದ ದೂರ ಸರಿದ ಸೋನಿ!.ಯಾಕೆ ಗೊತ್ತಾ?ಓದಿರಿ : ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಿಂದ ದೂರ ಸರಿದ ಸೋನಿ!.ಯಾಕೆ ಗೊತ್ತಾ?

Best Mobiles in India

English summary
Vivo V15 and Y17 prices in India permanently slashed by Rs 2,000to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X