Just In
- 4 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 5 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 6 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 8 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
'ಕ್ರಾಂತಿ' ಸಿನಿಮಾ ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ: ವಿಡಿಯೋ ವೈರಲ್!
- Sports
ಆಸ್ಟ್ರೇಲಿಯನ್ ಓಪನ್: ಜೊಕೊವಿಕ್ 22ನೇ ಗ್ರ್ಯಾನ್ಸ್ಲ್ಯಾಮ್ಗೆ ಅಡ್ಡಿಯಾಗಲಿದ್ದಾರಾ ಸ್ಟಿಫಾನೋಸ್?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭರ್ಜರಿ ಬೆಲೆ ಇಳಿಕೆ ಕಂಡ 'ವಿವೋ ವಿ15 ಪ್ರೊ' ಸ್ಮಾರ್ಟ್‌ಫೋನ್!
ಚೀನಾ ಮೂಲದ ಜನಪ್ರಿಯ ವಿವೋ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ವಿವೋ ವಿ15 ಪ್ರೊ' ಸ್ಮಾರ್ಟ್‌ಫೋನ್' ದೇಶಿಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿತ್ತು. 48ಎಂಪಿ ಕ್ಯಾಮೆರಾ ಮತ್ತು ಫ್ರಂಟ್ ಪಾಪ್‌ಅಪ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ಸೆಲ್ಫಿ ಪ್ರಿಯ ಗ್ರಾಹಕರನ್ನು ಆಕರ್ಷಿಸಿತ್ತು. ಕಂಪನಿಯು ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಗ್ರಾಹಕರ ಖುಷಿ ಹೆಚ್ಚಿಸಿದೆ.

ಹೌದು, ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾದಿಂದ ಭಾರಿ ಜನಪ್ರಿಯವಾಗಿದ್ದು, ಇದೀಗ ಬೆಲೆ ಇಳಿಕೆ ಕಂಡಿದೆ. 6GB RAM + 128GB ವೇರಿಯಂಟ್ ಬೆಲೆಯು 23,990ರೂ.ಗಳಿಗೆ ಲಭ್ಯವಿದ್ದು, ಹಾಗೆಯೇ 8GB RAM + 128GB 26,990ರೂ.ಗಳಿಗೆ ದೊರೆಯುತ್ತಿದೆ. ಬ್ಲೂ ಮತ್ತು ರೂಬಿ ರೆಡ್ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲಿಯೂ ಖರೀದೆಗೆ ಲಭ್ಯವಾಗಲಿದೆ.

ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 AIE SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲ ಸಹ ಪಡೆದಿದೆ. ಇದರೊಂದಿಗೆ ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಹಾಗಾದರೇ ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ ಒಳಗೊಂಡಿರುವ ಇತರೆ ಫೀಚರ್ಸ್‌ಗಳನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ರಚನೆ
ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ 2340×1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಸೂಪರ್ AMOLEDನ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ವಿ 15 ಪ್ರೋ ಸ್ಮಾರ್ಟ್‌ಫೋನ್‌ನಿನ ಬಾಹ್ಯರಚನೆ ಸುಂದರವಾಗಿದ್ದು, ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.

48 ಮೆಗಾಪಿಕ್ಸಲ್ ಕ್ಯಾಮೆರಾ
ವಿವೋ ತನ್ನ ಹೊಸ ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ ಮೂಲಕ ಮೊದಲ ಬಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾವನ್ನು ಪರಿಚಯಿಸಿದೆ. ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮುಖ್ಯ ಕ್ಯಾಮೆರಾ f/1.8 ಅಪರ್ಚರ್ ನೊಂದಿಗೆ ಕ್ವಾಡ್ ಪಿಕ್ಸಲ್ ಸೆನ್ಸಾರ್‌ನ 48ಮೆಗಾಪಿಕ್ಸಲ್, ಸೆಂಕೆಂಡರಿ ಕ್ಯಾಮೆರಾ 8ಮೆಗಾಪಿಕ್ಸಲ್ ಮತ್ತು ಮೂರನೆ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ.

32 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ
ಮೊದಲ ಬಾರಿಗೆ 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ವಿವೋ ಪರಿಚಯಿಸಿದ್ದು, f/2.0 ಅಪರ್ಚರ್ ಹೊಂದಿದೆ. ಈ POP UP ಸೆಲ್ಫೀ ಕ್ಯಾಮೆರಾ ಆಂತರಿಕ ರಚನೆಯನ್ನು ಹೊಂದಿದ್ದು, ಸ್ಮಾರ್ಟ್‌ಫೋನಿನ ಹೊರಗೆ ಸೆಲ್ಫಿ ಕ್ಯಾಮೆರಾ ಕಾಣಿಸುವುದಿಲ್ಲ. ಆದರೆ ಸೆಲ್ಫೀ ಸೆರೆಹಿಡಿಯುವಾಗ ಮಾತ್ರ ಕ್ಯಾಮೆರಾ ತೆರೆದುಕೊಳ್ಳುತ್ತದೆ.

ಪ್ರೊಸೆಸರ್
ವಿವೋ ವಿ15 ಪ್ರೊ ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಉತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ 6GB RAM ಸಾಮರ್ಥ್ಯ ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ.

ಬ್ಯಾಟರಿ ಶಕ್ತಿ
ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ 3700mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಭಾರಿ ಫುಲ್ ಚಾರ್ಜ್ ಮಾಡಿದರೇ ನಿರಂತರ ಹತ್ತು ಗಂಟೆ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಹಾಗೆಯೇ ವೈ ಫೈ, ಬ್ಲೂಟೂತ್, ಜಿಪಿಎಸ್ ಸೌಲಬ್ಯಗಳನ್ನು ಸಹ ಪಡೆದುಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470