Home
ಸುದ್ದಿಜಾಲ

Vivo: ವಿವೋ V17s ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಡೈಮಂಡ್ ಆರೆಂಜ್ ಕಲರ್‌ ವೇರಿಯಂಟ್‌ನಲ್ಲಿ! ಫೀಚರ್ಸ್‌ ಲೀಕ್‌

ವಿವೋ ಸ್ಮಾರ್ಟ್‌ಫೋನ್‌ಗಳು (Vivo Smartphones) ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಉತ್ತಮ ಸ್ಥಾನ ಪಡೆದಿವೆ. ಈ ಫೋನ್‌ಗಳು ಪ್ರಮುಖವಾಗಿ ಕ್ಯಾಮೆರಾ ಕೇಂದ್ರಿತವಾಗಿದ್ದು, ಇದರಿಂದ ಸಾಕಷ್ಟು ಭಾರತೀಯರು ಇವುಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಭಾರತಕ್ಕೆ ಶೀಘ್ರವೇ ವಿವೋ V17s ಡೈಮಂಡ್ ಆರೆಂಜ್ ಕಲರ್‌ ವೇರಿಯಂಟ್ (Vivo V17s Diamond Orange color variant) ಎಂಟ್ರಿ ನೀಡಲಿದೆ.

ಹೌದು, ಅಕ್ಟೋಬರ್ 2023 ರಲ್ಲಿ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಹಿಲಿಯೋ G85 ಪ್ರೊಸೆಸರ್‌ನೊಂದಿಗೆ ಬಜೆಟ್-ಶ್ರೇಣಿಯ ಡಿವೈಸ್‌ ಆಗಿರುವ ವಿವೋ Y17s ಅನ್ನು ಲಾಂಚ್ ಮಾಡಿತ್ತು. ಆದರೆ, ಈಗ ಹೊಸ ಬಣ್ಣದ ವೇರಿಯಂಟ್‌ನಲ್ಲಿ ಮತ್ತೇ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಏನಾದರೂ ಬದಲಾವಣೆ ಇದೆಯಾ?, ಶೈಲಿ ಹೇಗಿರಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ V17s ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಡೈಮಂಡ್ ಆರೆಂಜ್ ಕಲರ್‌ ವೇರಿಯಂಟ್‌ನಲ್ಲಿ

ವಿವೋ V17s ಸ್ಮಾರ್ಟ್‌ಫೋನ್‌: ಭಾರತದಲ್ಲಿ ವಿವೋ Y17s ಡೈಮಂಡ್ ಆರೆಂಜ್ ಕಲರ್ ವೇರಿಯಂಟ್‌ನಲ್ಲಿ ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ. ಈ ವೇರಿಯಂಟ್‌ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಇನ್ನು ಹಿಂದಿನ ಮಾದರಿಗಳು, ಮಿಸ್ಟಿಕ್ ಗ್ರೀನ್ ಮತ್ತು ಗ್ಲಿಟರ್ ಪರ್ಪಲ್‌ನಲ್ಲಿ ಈವರೆಗೂ ಲಭ್ಯ ಇದ್ದವು. ಇವುಗಳ ಸಾಲಿಗೆ ಈಗ ಮತ್ತೊಂದು ಕಲರ್‌ ಆಯ್ಕೆಯಲ್ಲಿ ಈ ಫೋನ್‌ ಸೇರಿಕೊಳ್ಳಲಿದೆ.

ಈ ಫೋನ್‌ನಲ್ಲಿ ರಿಯರ್‌ ಡ್ಯುಯಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಎಲ್‌ಇಡಿ ಲೈಟ್‌ನೊಂದಿಗೆ ವಜ್ರ-ಮಾದರಿಯ ವಿನ್ಯಾಸದ ಆಯ್ಕೆಯನ್ನು ಈ ಹೊಸ ಫೋನ್ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಹೊಸ ಕಲರ್‌ ವೇರಿಯಂಟ್‌ನಲ್ಲಿ ಲಭ್ಯವಾಗುವ ಈ ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಆದರೆ, ಈಗಾಗಲೇ ಲಾಂಚ್‌ ಆಗಿರುವ ಹಿಂದಿನ ವೇರಿಯಂಟ್‌ ಫೀಚರ್ಸ್‌ ತಿಳಿಯೋಣ ಬನ್ನಿ.

ವಿವೋ V17s ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಡೈಮಂಡ್ ಆರೆಂಜ್ ಕಲರ್‌ ವೇರಿಯಂಟ್‌ನಲ್ಲಿ

ವಿವೋ V17s ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಹೆಚ್‌ಡಿ + ರೆಸಲ್ಯೂಶನ್‌ ನ 6.56 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಪ್ರಮಾಣಿತ 60Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, 840 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ.

ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 6 GB ಯ LPDDR4x RAM ಮತ್ತು 128 GB eMMC 5.1 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಈ ಫೋನ್‌ ಆಂಡ್ರಾಯ್ಡ್‌ 13-ಆಧಾರಿತ ಫನ್‌ಟಚ್‌ ಓಎಸ್‌ 13 ಅನ್ನು ಇದು ರನ್ ಮಾಡಲಿದೆ.

ವಿವೋ V17s ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಡೈಮಂಡ್ ಆರೆಂಜ್ ಕಲರ್‌ ವೇರಿಯಂಟ್‌ನಲ್ಲಿ

ಇನ್ನು ಈ ಫೋನ್‌ನ ಕ್ಯಾಂಎರಾ ವಿಚಾರಕ್ಕೆ ಬಂದರೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಅಂದರೆ ಬೊಕೆ ಲೆನ್ಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದು. ಉಳಿದಂತೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಮತ್ತು ಡ್ಯುಯಲ್ ಸಿಮ್ ಬೆಂಬಲ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ 5.0, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು IP54-ರೇಟೆಡ್ ಚಾಸಿಸ್ ಫೀಚರ್ಸ್‌ ಪಡೆದಿದೆ.

Best Mobiles in India

English summary
Vivo Y17s smartphone Diamond Orange color variant will soon enter India. Some features of this phone have been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+