IPL ಮ್ಯಾಚ್‌ಗಿಂತ ಮೊದಲೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 'ವಿವೋ V19 ಪ್ರೊ'!

|

ಚೀನಾ ಮೂಲದ ವಿವೋ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಫೋನ್‌ ಮಾದರಿಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಇತ್ತೀಚಿಗೆ ಬಿಡುಗಡೆ ಮಾಡಿದ್ದ ವಿವೋ ವಿ15 ಪ್ರೊ ಹಾಗೂ ವಿವೊ ವಿ17 ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿವೆ. ಅದರ ಮುಂದುವರಿದ ಭಾಗವಾಗಿ ವಿವೋ ಕಂಪನಿಯು ವಿವೋ ವಿ19 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆಗೆ ಸಕಲ ತಯಾರಿ ನಡೆಸಿದೆ.

ವಿವೋ ವಿ19

ಹೌದು, ವಿವೋ ಸಂಸ್ಥೆಯು ವಿ ಸರಣಿಯಲ್ಲಿ ಈಗ ವಿವೋ ವಿ19 ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಮಾಡಲು ಸಜ್ಜಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ವಿವೋ ವಿ19 ಮತ್ತು ವಿವೋ ವಿ19 ಪ್ರೊ ಹೆಸರಿನ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅನ್ನು ಈ ಬಾರಿಯ IPL ಮ್ಯಾಚ್‌ ಆರಂಭಕ್ಕೂ ಮೊದಲೆ ಮಾರುಕಟ್ಟೆಗೆ ಪರಿಚಯಿಸುವುದು ಬಹುತೇಕ ಖಾತ್ರಿ ಆಗಿದೆ.

ವಿವೊ ವಿ19 ಮತ್ತು ವಿ19 ಪ್ರೊ

ಇನ್ನು ಮುಂದಿನ ತಿಂಗಳು ಬರಲಿರುವ ಈ ವಿವೊ ವಿ19 ಮತ್ತು ವಿ19 ಪ್ರೊ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಪಂಚ್ ಹೋಲ್ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್ ವೇಗವನ್ನು ಪಡೆದಿರಲಿದ್ದು, ಫನ್‌ಟಚ್ OS 9.2 ಬೆಂಬಲಿತ ಆಂಡ್ರಾಯ್ಡ್ ಓಎಸ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದರೊಂದಿಗೆ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಆಯ್ಕೆ ಹೊಂದಿರಲಿದೆ.

1080 x 2340 ಪಿಕ್ಸಲ್ ರೆಸಲ್ಯೂಶನ್

ವಿವೋ ವಿ19 ಪ್ರೊ ಫೋನ್ ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವಂತೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಪಡೆದಿರುವ ನಿರೀಕ್ಷೆಗಳಿವೆ. ಸೆಲ್ಫಿಗಾಗಿ ಮುಂಭಾಗದಲ್ಲಿ ಎರಡು ಕ್ಯಾಮೆರಾ ವ್ಯವಸ್ಥೆ ಹೊಂದಿರಲಿದ್ದು, ಮುಖ್ಯ ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಪಡೆದಿರಲಿದೆ. ಇನ್ನು ಡಿಸ್‌ಪ್ಲೇಯು 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ AMOLED ಡಿಸ್‌ಪ್ಲೇ ಪಡೆದಿರಲಿದೆ.

ಫಾಸ್ಟ್‌ ಚಾರ್ಜಿಂಗ್

ಹಾಗೆಯೇ ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರಲಿದ್ದು, ಜೊತಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವ ಸಾಧ್ಯತೆಗಳು ಅಧಿಕವಾಗಿವೆ. ಜೊತೆಗೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್‌ಅನ್‌ಲಾಕ್, ವೈಫೈ, ಜಿಪಿಎಸ್‌, ಯುಎಸ್‌ಬಿ ಪೋರ್ಟ್‌ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಗ್ಲ್ಯಾಸಿಯರ್ ಐಸ್‌ ಹಾಗೂ ಮಿಡ್‌ನೈಟ್‌ ಓಶಿಯನ್ ಬಣ್ಣಗಳ ಆಯ್ಕೆಗಳನ್ನು ಹೊಂದಿರಲಿದೆ.

Most Read Articles
Best Mobiles in India

English summary
Vivo V19 and V19 Pro will launch next month, and these will sport a dual punch-hole display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X