Home
ಸುದ್ದಿಜಾಲ

ಡ್ಯುಯಲ್ ಸೆಲ್ಫಿಯ 'ವಿವೋ V19' ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ!

ಚೀನಾ ಮೂಲದ ಸ್ಮಾರ್ಟ್‌ಫೋನ್ ಸಂಸ್ಥೆ ವಿವೋ ಇತ್ತೀಚಿಗಷ್ಟೆ ಹೊಸದಾಗಿ ವಿವೋ V19 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ವಿವೋ V17 ಫೋನಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾ, ಅಧಿಕ ಬ್ಯಾಟರಿ, ವೇಗದ ಪ್ರೊಸೆಸರ್‌ನಂತಹ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಇದೀಗ ಜನಪ್ರಿಯ ಇ-ಕಾಮರ್ಸ್‌ ತಾಣಗಳ ಮೂಲಕ ಭಾರತದಲ್ಲಿ ಸೇಲ್ ಆರಂಭವಾಗಲಿದೆ.

ವಿವೋ V19

ದೇಶದಲ್ಲಿ ಲಾಕ್‌ಡೌನ್‌ ಇರುವ ಕಾರಣ ವಿವೋ V19 ಸ್ಮಾರ್ಟ್‌ಫೋನ್‌ ಮಾರಾಟ ವಿಳಂಬ ಆಗಿದ್ದು, ಇದೀಗ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ವಿವೋ ವೆಬ್‌ಸೈಟ್‌ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗೆಯೇ ಆಫ್‌ಲೈನ್‌ ಸ್ಟೋರ್‌ಗಳಲ್ಲಿಯೂ ಮಾರಾಟ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 712 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, 48ಎಂಪಿ ಸೆನ್ಸಾರ್‌ನ ರಿಯರ್‌ ಕ್ಯಾಮೆರಾ ಹೊಂದಿದೆ.

128GB ಸ್ಟೋರೇಜ್

ವಿವೋ V19 8GB RAM ಹೊಂದಿದ್ದು, 128GB ಮತ್ತು 256GB ಸಂಗ್ರಹಣೆಯ ಆಯ್ಕೆಗಳನ್ನು ಹೊಂದಿದೆ. 128GB ಸ್ಟೋರೇಜ್ ವೇರಿಯಂಟ್ ಬೆಲೆಯು 27,990ರೂ. ಆಗಿದ್ದು, ಹಾಗೆಯೇ 256GB ಸ್ಟೋರೇಜ್ ವೇರಿಯಂಟ್ ಬೆಲೆಯು 31,990ರೂ.ಗಳಿಗೆ ಲಭ್ಯವಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ವಹಿವಾಟುಗಳೊಂದಿಗೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಇದೆ. ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೊ V19 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.44 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಫುಲ್‌ ಎಚ್‌ಡಿ ಡಿಸ್‌ಪ್ಲೇ ಆಗಿದ್ದು, ಆರನೇ ತಲೆಮಾರಿನ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಅಲ್ಲದೆ ಇದು ಸೂಪರ್ ಅಮೋಲೆಡ್ ಪಂಚ್ ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನ ಹೊಂದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ವಿವೋ V19 ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಫೋನ್‌ನ ಮೇಲಿನ ಎಡ ಮೂಲೆಯಲ್ಲಿ ಎಲ್-ಆಕಾರದ ರೀತಿಯ ಮಾಡ್ಯೂಲ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ರಿಯರ್‌ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸೂಪರ್ ನೈಟ್ ಮೋಡ್, ಅಲ್ಟ್ರಾ-ಸ್ಟೇಬಲ್ ವಿಡಿಯೋ, ಆರ್ಟ್ ಪೋರ್ಟ್ರೇಟ್ ವಿಡಿಯೋ, ಸೂಪರ್ ಮ್ಯಾಕ್ರೋ ಅನ್ನು ನೀಡಲಾಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಡ್ಯುಯೆಲ್‌ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸೂಪರ್ ನೈಟ್ ಸೆಲ್ಫಿ, ಸೂಪರ್ ವೈಡ್-ಆಂಗಲ್ ಸೆಲ್ಫಿ, ಅಲ್ಟ್ರಾ-ಸ್ಟೇಬಲ್ ವಿಡಿಯೋ ಗಳನ್ನ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 33W ಫ್ಲ್ಯಾಶ್‌ಚಾರ್ಜ್ 2.0 ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ವಿ 5.0, ಯುಎಸ್‌ಬಿ ಟೈಪ್-ಸಿ, GPS, OTG, 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ ವೈ-ಫೈ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ ಮತ್ತು ಗೈರೊಸ್ಕೋಪ್ ಅನ್ನು ಒಳಗೊಂಡಿದೆ.

Best Mobiles in India

English summary
Vivo V19, the camera-centric premium mid-range smartphone, is now available in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+