Home
ಸುದ್ದಿಜಾಲ

ಭಾರತದಲ್ಲಿ ವಿವೋ V20 SE ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಗೊತ್ತಾ?

ವಿವೋ ಮೊಬೈಲ್ ಕಂಪೆನಿಯು ಅಗ್ಗದ ಬೆಲೆಯಿಂದ ಹೈ ಎಂಡ್‌ ದರದ ವರೆಗೂ ಹಲವು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಲಾಂಚ್ ಮಾಡಿದೆ. ಆ ಪೈಕಿ ಇತ್ತೀಚಿಗಷ್ಟೆ ಕಂಪನಿಯು ವಿವೋ V20 ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಸರಣಿಯು ವಿವೊ V20, ವಿವೋ V20 SE ಮತ್ತು ವಿವೋ V20 ಪ್ರೊ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಒಳಗೊಂಡಿತ್ತು. ಇವುಗಳಲ್ಲಿ ಈಗ ವಿವೋ V20 SE ದೇಶಿಯ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದು, ಅದರ ಪ್ರೈಸ್‌ ಲೀಕ್ ಆಗಿದೆ.

ವಿವೋ V20

ಹೌದು, ವಿವೋ ಸಂಸ್ಥೆಯು ವಿವೋ V20 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿನ ವಿವೋ V20 SE ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಎಂಟ್ರಿ ನೀಡಲಿದೆ ಎನ್ನಲಾಗಿದ್ದು, ಈ ಫೋನಿನ ಬೆಲೆ ಬಗ್ಗೆ ನಿರೀಕ್ಷೆಗಳು ದಟ್ಟವಾಗಿವೆ. ಆದ್ರೆ ಇದೀಗ ರಿಲಾಯನ್ಸ್ ಡಿಜಿಟಲ್ ಹಾಗಾ ಕ್ರೋಮಾ ಸಂಸ್ಥೆಗಳು ವಿವೋ V20 SE ಸ್ಮಾರ್ಟ್‌ಫೋನ್‌ ಬೇಸ್‌ ವೇರಿಯಂಟ್‌ ಬೆಲೆಯು 20,999ರೂ. ಇರಲಿದೆ ಎಂದು ಊಹಿಸಿವೆ. ಇನ್ನು ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿವೋ V20 SE ಡಿಸ್‌ಪ್ಲೇ

ವಿವೋ V20 SE ಡಿಸ್‌ಪ್ಲೇ

ವಿವೊ V20 SE ಸ್ಮಾರ್ಟ್‌ಫೋನ್‌ 6.44-ಇಂಚಿನ ಪೂರ್ಣ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇಯು 1,080x2,400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರಲಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತ 20:9 ಆಗಿರಲಿದೆ.

ವಿವೋ V20 SE ಪ್ರೊಸೆಸರ್‌

ವಿವೋ V20 SE ಪ್ರೊಸೆಸರ್‌

ವಿವೊ V20 SE ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 SoC ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸುವ ಅವಕಾಶ ಇರಲಿದೆ.

ವಿವೋ V20 SE ಕ್ಯಾಮೆರಾ

ವಿವೋ V20 SE ಕ್ಯಾಮೆರಾ

ವಿವೋ V20 SE ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಮುಖ್ಯ ಕ್ಯಾಮೆರಾವು 48 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಇರಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾ 8ಎಂಪಿ ಮತ್ತು ತೃತೀಯ ಕ್ಯಾಮೆರಾ 2ಎಂಪಿ ಸೆನ್ಸಾರ್‌ನಲ್ಲಿರಲಿದೆ.

ವಿವೋ V20 SE ಬ್ಯಾಟರಿ

ವಿವೋ V20 SE ಬ್ಯಾಟರಿ

ವಿವೋ V20 SE ಸ್ಮಾರ್ಟ್‌ಫೋನ್ 4100mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದೆ. ಇದರೊಂದಿಗೆ 33W ಸಾಮರ್ಥ್ಯದ ಫ್ಲ್ಯಾಶ್‌ಚಾರ್ಜ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Vivo V20 SE could be launching at a price of Rs 20,999 for the base variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+