Home
ಸುದ್ದಿಜಾಲ

Vivo: ವಿವೋದ ಈ ಉತ್ತಮ ಫೋನ್‌ ಬೆಲೆಯಲ್ಲಿ ಇಳಿಕೆ: 8GB RAM... 50MP ಕ್ಯಾಮೆರಾ

ವಿವೋ ಫೋನ್‌ಗಳು (Vivo phone) ಭಾರತದಲ್ಲಿ ಬಹು ಬೇಡಿಕೆ ಇರುವ ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಅದರಲ್ಲೂ ವಿವೋ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಲಾಂಚ್ ಮಾಡಿಕೊಂಡು ಬರುತ್ತಿದೆ. ಈ ನಡುವೆ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ವಿವೋದ ಈ ಫೋನ್‌ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ವಿವೋ V23e 5G ಸ್ಮಾರ್ಟ್‌ ಫೋನ್‌ಗೆ (Vivo V23e 5G smartphone) ಆಫರ್ ನೀಡಲಾಗಿದೆ. ಈ ಫೋನ್ 8GB RAM ಸ್ಟೋರೇಜ್‌ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದ್ದು, ಇದರೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಮೂಲಕ ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್‌ ಆಗಿ ಗುರುತಿಸಿಕೊಂಡಿದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ವಿವೋದ ಈ ಉತ್ತಮ ಫೋನ್‌ ಬೆಲೆಯಲ್ಲಿ ಇಳಿಕೆ: 8GB RAM...  50MP ಕ್ಯಾಮೆರಾ

ವಿವೋ V23e 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ 6.44 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಈ ಡಿಸ್‌ಪ್ಲೇ 20:9 ಆಕಾರ ಅನುಪಾತದೊಂದಿಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, 60Hz ನ ರಿಫ್ರೆಶ್ ರೇಟ್‌ ಮತ್ತು 409 ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ.

ವಿವೋ V23e 5G ಪ್ರೊಸೆಸರ್ ಮಾಹಿತಿ: ಇನ್ನು ಈ ವಿಶೇಷ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 MT6833 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಆಕ್ಟಾ-ಕೋರ್ 2.4GHz ಡ್ಯುಯಲ್-ಕೋರ್ ಕಾರ್ಟೆಕ್ಸ್ A76, 2GHz ಹೆಕ್ಸಾ-ಕೋರ್ ಕಾರ್ಟೆಕ್ಸ್ A55 ನೊಂದಿಗೆ ಪ್ಯಾಕ್‌ ಆಗಿದೆ. ಇದರೊಂದಿಗೆ ಮಾಲಿ-G57 MC2 ಜಿಪಿಯು ಬಲ ಇದ್ದು, ಈ ಫೋನ್‌ನಲ್ಲಿ ವಿಡಿಯೋ ಸ್ಟ್ರೀಮ್‌ ಮಾಡುವಾಗ ಅಥವಾ ಗೇಮಿಂಗ್‌ನಲ್ಲಿ ಅತ್ಯುತ್ತಮವಾದ ಅನುಭವ ಪಡೆದುಕೊಳ್ಳಬಹುದು. ಹಾಗೆಯೇ ಈ ಫೋನ್ 8GB RAM ನೊಂದಿಗೆ ಕಾಣಿಸಿಕೊಂಡಿದೆ.

ವಿವೋದ ಈ ಉತ್ತಮ ಫೋನ್‌ ಬೆಲೆಯಲ್ಲಿ ಇಳಿಕೆ: 8GB RAM...  50MP ಕ್ಯಾಮೆರಾ

ವಿವೋ V23e 5G ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, 2MP ಮ್ಯಾಕ್ರೋ, 8MP ಅಲ್ಟ್ರಾ-ವೈಡ್ ಆಂಗಲ್ ಮತ್ತು 50MP ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಸೆನ್ಸರ್‌ಗಳು, ಎಕ್ಸ್‌ಪೋಸರ್ ಎಡಿಟ್‌, ಫೇಸ್‌ ಫೈಂಡ್‌, ಹೆಚ್‌ಡಿಆರ್‌ ಮೋಡ್, ಡಿಜಿಟಲ್ ಜೂಮ್ ಮತ್ತು ಐಎಸ್ಓ ಹೊಂದಾಣಿಕೆ ಸೌಲಭ್ಯ ಪಡೆದುಕೊಂಡಿವೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 44MP ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಸೆನ್ಸರ್‌ ಪಡೆದುಕೊಂಡಿದೆ.

ವಿವೋ V23e 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 4050mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್ ಬ್ಲೂಟೂತ್ ಆವೃತ್ತಿ 5.1, A2DP, LE, ಜಿಪಿಎಸ್‌, ಗ್ಲೋನಾಸ್, ಗೆಲಿಲಿಯೋ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ವಿವೋ V23e 5G ಬೆಲೆ ಹಾಗೂ ಆಫರ್ ವಿವರ: ಈ ಫೋನ್ 28,990 ರೂ.ಗಳ ಸಾಮಾನ್ಯ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ನೀವೀಗ ಇದನ್ನು 24,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ಗೆ 13% ರಷ್ಟು ರಿಯಾಯಿತಿ ನೀಡಿದೆ. ಅದಾಗ್ಯೂ ಈ ಫೋನ್ ಖರೀದಿ ವೇಳೆ ಇತರೆ ಸೌಲಭ್ಯ ಪಡೆದುಕೊಳ್ಳಲು ಸಹ ಅವಕಾಶ ನೀಡಲಾಗಿದೆ.

ವಿವೋದ ಈ ಉತ್ತಮ ಫೋನ್‌ ಬೆಲೆಯಲ್ಲಿ ಇಳಿಕೆ: 8GB RAM...  50MP ಕ್ಯಾಮೆರಾ

ಈ ಫೋನ್‌ ಖರೀದಿ ಮಾಡಿದ ನಂತೆ ನೀವು 699 ರೂ. ಮೌಲ್ಯದ ಸ್ಪಾಟಿಫೈ ಪ್ರೀಮಿಯಂ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್‌ ಪೇ ಮೂಲಕ ಖರೀದಿ ಮಾಡಿದ್ರೆ 20,000ರೂ.ಗಳ ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ
ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ಇದ್ದು, ನೀವು 1,548 ರೂ.ಗಳನ್ನು ತಿಂಗಳಿಗೆ ಪಾವತಿ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Vivo V23e 5G smartphone got offer on leading e-commerce site flipkart. This phone will provide good performance with 8GB RAM storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+