Home
ಸುದ್ದಿಜಾಲ

vivo: 29% ರಿಯಾಯಿತಿಯೊಂದಿಗೆ ವಿವೋದ ಈ ಫೋನ್‌! ಟ್ರಿಪಲ್‌ ಕ್ಯಾಮೆರಾ.. 8 GB RAM

ವಿವೋ (Vivo) ಫೋನ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಈ ಫೋನ್‌ಗಳ ಕ್ಯಾಮೆರಾ ಫೀಚರ್ಸ್‌ ಪ್ರೀಮಿಯಂ ಆಗಿದ್ದು, ಇದೇ ಈ ಫೋನ್‌ಗಳ ಬಗ್ಗೆ ಹೆಚ್ಚಿನ ಒಲವು ಉಂಟಾಗಲು ಕಾರಣವಾಗಿದೆ. ಅದಾಗ್ಯೂ ಈ ಫೋನ್‌ಗಳು ಅತ್ಯುತ್ತಮ ಪ್ರೊಸೆಸರ್‌ ಹಾಗೂ ಸ್ಟೋರೇಜ್‌ ಆಯ್ಕೆಯನ್ನೂ ಸಹ ಪಡೆದುಕೊಂಡಿರುತ್ತವೆ.

ಹೌದು, ವಿವೋ ಫೋನ್‌ಗಳು ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಹೆಚ್ಚಾಗಿ ಸೇಲ್ ಆಗುತ್ತಿವೆ. ಅದರಂತೆ ಈಗ ವಿವೋ V25 5G ಸ್ಮಾರ್ಟ್‌ಫೋನ್‌ಗೆ (Vivo V25 5G smartphone) ಭರ್ಜರಿ ಆಫರ್ ನಿಡಲಾಗಿದ್ದು, ಈ ಮೂಲಕ ಕೈಗೆಟಕುವ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದು 128 GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ 50 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಪ್ರಮುಖ ಆಫರ್ ಏನು?, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

29% ರಿಯಾಯಿತಿಯೊಂದಿಗೆ ವಿವೋದ ಈ ಫೋನ್‌! ಟ್ರಿಪಲ್‌ ಕ್ಯಾಮೆರಾ.. 8 GB RAM

ವಿವೋ V25 5G ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 32,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 23,245 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 29% ರಿಯಾಯಿತಿ ನೀಡಲಾಗಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದು.

ಈ ಫೋನ್‌ ಖರೀದಿ ವೇಳೆ ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ 1,440 ರೂ.ಗಳನ್ನು ಪ್ರತಿ ತಿಂಗಳು ಇಎಮ್ಐ ಪಾವತಿ ಮಾಡುವ ಮೂಲಕವೂ ಖರೀದಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ 699 ರೂ. ಮೌಲ್ಯದ FreebieSpotify ಪ್ರೀಮಿಯಂ ಸೌಲಭ್ಯವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

29% ರಿಯಾಯಿತಿಯೊಂದಿಗೆ ವಿವೋದ ಈ ಫೋನ್‌! ಟ್ರಿಪಲ್‌ ಕ್ಯಾಮೆರಾ.. 8 GB RAM

ವಿವೋ V25 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ವಿಶೇಷ ಸ್ಮಾರ್ಟ್‌ಫೋನ್ 6.44 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್‌ ರೇಟ್‌ HDR10+, 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದೆ. ಇದರೊಂದಿಗೆ 1080 x 2404 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 20:9 ಅನುಪಾತದೊಂದಿಗೆ ಅತ್ಯುತ್ತಮವಾದ ವೀಕ್ಷಣಾ ಅನುಭವವನ್ನು ಪಡೆಯಬಹುದಾಗಿದೆ.

ವಿವೋ V25 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 900 (6 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ G68 MC4 ಗ್ರಾಫಿಕ್ಸ್‌ ಕಾರ್ಡ್‌ ಬೆಂಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಜೊತೆಗೆ ಈ ಫೋನ್ ಆಂಡ್ರಾಯ್ಡ್ 12, ಫನ್‌ಟಚ್ 12 ಓಎಸ್‌ ಅನ್ನು ರನ್ ಮಾಡಲಿದೆ. ಹಾಗೆಯೇ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 8 GB RAM ಆಯ್ಕೆಯಲ್ಲಿ ಈ ಫೋನ್‌ ಲಭ್ಯ ಇದೆ. ಹೆಚ್ಚಿನ ಸ್ಟೋರೇಜ್‌ ಬೇಕು ಎಂದರೆ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಳ್ಳಬಹುದು.

ವಿವೋ V25 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮಾಹಿತಿ: ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ‌ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಸಹ ಲಭ್ಯ. ಜೊತೆಗೆ ಸೆಲ್ಪಿ ಹಾಗೂ ವಿಡಿಯೋ ಕರೆಗಳಿಗಾಗಿ 50 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಈ ಫೋನ್‌ ಹೊಂದಿದೆ.

29% ರಿಯಾಯಿತಿಯೊಂದಿಗೆ ವಿವೋದ ಈ ಫೋನ್‌! ಟ್ರಿಪಲ್‌ ಕ್ಯಾಮೆರಾ.. 8 GB RAM

ವಿವೋ V25 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 44W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರಿಂದ ಕೇವಲ 30 ನಿಮಿಷಗಳಲ್ಲಿ 61% ಚಾರ್ಜ್ ಮಾಡಬಹುದು. ಉಳಿದಂತೆ ಈ ಫೋನ್ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, A2DP, LE, ಯುಎಸ್‌ಬಿ ಟೈಪ್-ಸಿ 2.0 ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

Best Mobiles in India

English summary
Vivo phones are selling more and more on the leading e-commerce site. Accordingly, now there is a great offer for the Vivo V25 5G smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+