Home
ಸುದ್ದಿಜಾಲ

vivo: ವಿವೋದ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್... 8GB RAM, 64MP ರಿಯರ್‌ ಕ್ಯಾಮೆರಾ

ವಿವೋದ ಸ್ಮಾರ್ಟ್‌ಫೋನ್‌ಗಳಿಗೆ (Vivo Smartphone) ಭರ್ಜರಿ ಬೇಡಿಕೆ ಇದ್ದು, ಈ ಫೋನ್‌ಗಳಿಗೆ ಈಗಾಗಲೇ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡಲಾಗಿದೆ. ಈ ನಡುವೆ ಈಗ ಮತ್ತೆ ಜನಪ್ರಿಯ ವಿವೋದ ಈ ಫೋನ್ ಖರೀದಿ ಮಾಡುವ ಮೂಲಕ ಗ್ರಾಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಹೌದು, ವಿವೋ ಫೋನ್‌ಗಳು ಉತ್ತಮ ಕ್ಯಾಮೆರಾ ಫೀಚರ್ಸ್‌ ಹಾಗೂ ಸುಧಾರಿಯ ಪ್ರೊಸೆಸರ್‌ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ಇಷ್ಟವಾಗುತ್ತವೆ. ಅದರಂತೆ ವಿವೋ V25 ಪ್ರೊ 5G ಸ್ಮಾರ್ಟ್‌ಫೋನ್‌ (Vivo V25 Pro 5G) ಸಹ ಅತ್ಯುತ್ತಮವಾದ ಎಲ್ಲಾ ರೀತಿಯ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಈ ಫೋನ್‌ಗೆ 24% ಡಿಸ್ಕೌಂಟ್‌ ನೀಡಲಾಗಿದೆ. ಈ ಫೋನ್ 8 GB RAM ಹಾಗೂ 64MP ರಿಯರ್‌ ಕ್ಯಾಮೆರಾ ಹೊಂದುವ ಮೂಲಕ ಅತ್ಯುತ್ತಮ ಫೋನ್ ಆಗಿ ಗುರುತಿಸಿಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ವಿವರ ತಿಳಿಯೋಣ ಬನ್ನಿ.

ವಿವೋದ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್... 8GB RAM, 64MP ರಿಯರ್‌ ಕ್ಯಾಮೆರಾ...

ವಿವೋ V25 ಪ್ರೊ 5G ಫೋನ್‌ನ ಆಫರ್‌ ವಿವರ: ಈ ಫೋನ್‌ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಖರೀದಿ ಮಾಡಿದ್ರೆ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ಈ ಫೋನ್‌ನ ಸಾಮಾನ್ಯ ದರ 39,910ರೂ.ಗಳಾಗಿದ್ದು, ಆದರೆ 29,980ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ 24% ಡಿಸ್ಕೌಂಟ್ ನೀಡಿದೆ. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡುವ ಮೂಲಕ ಇನ್ನೂ ಅಗ್ಗದ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದು.

ಬ್ಯಾಂಕ್‌ ಆಫರ್‌ ವಿಚಾರಕ್ಕೆ ಬರುವುದಾದರೆ ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ (ICICI Bank Debit Card) ವ್ಯವಹಾರದ ಮೇಲೆ 10% ರಿಯಾಯಿತಿ ನೀಡಲಾಗುತ್ತದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌(Flipkart Axis Bank Card) ನಲ್ಲಿ 5% ಕ್ಯಾಶ್‌ಬ್ಯಾಕ್ ಹಾಗೂ ಪಾರ್ಟನರ್‌ಶಿಫ್‌ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಪೇ ಲೇಟರ್‌ ಆಯ್ಕೆ ಮೂಲಕ ಖರೀದಿ ಮಾಡಿದರೆ 20,000ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬುದಾಗಿದೆ.

ವಿವೋ V25 ಪ್ರೊ 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 6.56 ಇಂಚಿನ ಬೆಜೆಲ್ ಲೆಸ್ ಅಮೋಲೆಡ್‌ ಡಿಸ್‌ಪ್ಲೇ (AMOLED display) ಆಯ್ಕೆ ಪಡೆದುಕೊಂಡಿದ್ದು, ಇದು 1080 x 2376 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 398ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ವಿವೋ V25 ಪ್ರೊ 5G ಪ್ರೊಸೆಸರ್‌ ಮಾಹಿತಿ: ಇದರ ಪ್ರೊಸೆಸರ್‌ ವಿಚಾರಕ್ಕೆ ಬಂದರೆ ಮೀಡಿಯಾ ಟೆಕ್ ಡೈಮೆನ್ಸಿಟಿ 1300 MT6893Z ಪ್ರೊಸೆಸರ್‌ (MediaTek Dimensity 1300 MT6893Z Processor) ಬಲ ಪಡೆದುಕೊಂಡಿದ್ದು, ಮಾಲಿ-G77 MC9 GPU ಹೊಂದಿರುವ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ಪಡೆದುಕೊಳ್ಳಬಹುದು. ಇದರೊಂದಿಗೆ 8GB RAM ಆಯ್ಕೆಯ ಈ ಫೋನ್ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹೊಂದಿದೆ.

ವಿವೋ V25 ಪ್ರೊ 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ f/1.89 ಅಪರ್ಚರ್ ನೊಂದಿಗೆ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಹೊಂದಿದೆ. ಈ ಎರಡೂ ಸೆನ್ಸರ್‌ಗಳು f/2.4 ಅಪರ್ಚರ್ ಅನ್ನು ಹೊಂದಿವೆ. ಇದರೊಂದಿಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ವಿವೋದ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್... 8GB RAM, 64MP ರಿಯರ್‌ ಕ್ಯಾಮೆರಾ...

ವಿವೋ V25 ಪ್ರೊ 5G ಬ್ಯಾಟರಿ ಹಾಗೂ ಇತರೆ: ಈ ವಿಶೇಷ ಫೋನ್ 4830mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 66W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ 5G, 4G, 3G, 2G ನೆಟ್‌ವರ್ಕ್‌ ಬೆಂಬಲ, ಬ್ಲೂಟೂತ್ ಆವೃತ್ತಿ, ವೈ-ಫೈ ಆವೃತ್ತಿ 2.4 GHz, 5 GHz ಬೆಂಬಲ ಪಡೆದಿದೆ. ಹಾಗೆಯೇ ಎನ್‌ಎಫ್‌ಸಿ, ಯುಎಸ್ಬಿ ಸಂಪರ್ಕ, ಆಡಿಯೋ ಜ್ಯಾಕ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಇದು ಹೊಂದಿದೆ.

Best Mobiles in India

English summary
Vivo V25 Pro 5G smartphone available at 24% off on Flipkart. This phone has got 8 GB RAM and 64MP rear camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+