Home
ಸುದ್ದಿಜಾಲ

Vivo: ವಿವೋದ ಈ ಮಿಡ್‌ರೇಂಜ್‌ ಫೋನ್‌ಗೆ ಭರ್ಜರಿ ಆಫರ್! 12GB RAM... ಟ್ರಿಪಲ್‌ ಕ್ಯಾಮೆರಾ

ವಿವೋ ಫೋನ್‌ಗಳು (Vivo phone) ತಮ್ಮದೇ ಆದ ವಿಶೇಷ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲೂ ಭಾರತದಲ್ಲಿ ಮಿಡ್‌ರೇಂಜ್‌ ವಿವೋ ಫೋನ್‌ಗಳಿಗೆ ಭಾರೀ ಬೇಡಿಕೆ ಇದ್ದು, ಈ ಮೂಲಕ ಬಳಕೆದಾರರು ಪ್ರೀಮಿಯಂ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ನಡುವೆ ವಿವೋದ ಇತ್ತೀಚಿನ ಹೊಸ ಹಾಗೂ ಈ ಬಹುಬೇಡಿಕೆಯ ಫೋನ್‌ಗೆ ಆಫರ್ ನೀಡಲಾಗಿದೆ.

ಹೌದು, ವಿವೋ V27 5G ಸ್ಮಾರ್ಟ್‌ಫೋನ್‌ಗೆ (Vivo V27 5G smartphone) ಆಫರ್ ನೀಡಲಾಗಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 12GB RAM ಆಯ್ಕೆ ಹೊಂದಿದ್ದು, 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆಯೊಂದಿಗೆ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಏನು?, ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋದ ಈ ಮಿಡ್‌ರೇಂಜ್‌ ಫೋನ್‌ಗೆ ಭರ್ಜರಿ ಆಫರ್! 12GB RAM... ಟ್ರಿಪಲ್‌ ಕ್ಯಾಮೆರಾ

ವಿವೋ V27 5G ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಫೋನ್ 40,999 ರೂ.ಗಳ ಸಾಮಾನ್ಯ ದರ ಹೊಂದಿದ್ದು, ನೀವೀಗ ಇದನ್ನು 34,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ವಿಶೇಷ ಅಫರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಘೋಷಣೆ ಮಾಡಲಾಗಿದೆ. ಅಂದರೆ, ಫ್ಲಿಪ್‌ಕಾರ್ಟ್‌ಈ ಫೋನ್‌ಗೆ 14% ರಿಯಾಯಿತಿ ನೀಡಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಫೋನ್‌ನ ಬ್ಯಾಂಕ್‌ ಆಫರ್ ವಿಚಾರಕ್ಕೆ ಬಂದರೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿ ಖರೀದಿ ಮಾಡಿದರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ವಿಶೇಷ ಬೆಲೆ ಹೆಚ್ಚುವರಿ 500 ರಿಯಾಯಿತಿ ಪಡೆಯಿರಿ ಸಹ ಈ ಫೋನ್‌ಮೇಲೆ ಲಭ್ಯ ಇದೆ. ಹಾಗೆಯೇ FreebieSpotify ಪ್ರೀಮಿಯಂ ಚಂದಾದಾರಿಕೆ ಸಹ ಸಿಗಲಿದೆ. ಇದರೊಂದಿಗೆ ಅಷ್ಟು ಹಣ ನೀಡಿ ಖರೀದಿ ಮಾಡಲು ಆಗುವುದಿಲ್ಲ ಎಂದರೆ ತಿಂಗಳಿಗೆ 1,231ರೂ.ಗಳನ್ನು ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ವಿವೋದ ಈ ಮಿಡ್‌ರೇಂಜ್‌ ಫೋನ್‌ಗೆ ಭರ್ಜರಿ ಆಫರ್! 12GB RAM... ಟ್ರಿಪಲ್‌ ಕ್ಯಾಮೆರಾ

ವಿವೋ V27 5G ಡಿಸ್ಪ್ಲೇ ವಿವರ: ಇನ್ನು ಈ ಸ್ಮಾರ್ಟ್‌ಫೋನ್‌ ಈ ಬೆಲೆಗೆ ಯೋಗ್ಯವೇ ಎಂದು ಕಂಡುಕೊಳ್ಳಲು ಇದರ ಪ್ರಮುಖ ಫೀಚರ್ಸ್ ಕಡೆ ಕಣ್ಣಾಯಿಸುವುದು ಉತ್ತಮವಾಗಿದೆ. ಅದರಂತೆ ಈ ಫೋನ್ 6.5 ಇಂಚಿನ ಬೆಜೆಲ್ ಮುಕ್ತ ಡಿಸ್ಪ್ಲೇ ಹೊಂದಿದ್ದು, ಇದು 1080 x 2340 ಪಿಕ್ಸೆಲ್ ರೆಸಲ್ಯೂಶನ್ ಆಯ್ಕೆ ಪಡೆದುಕೊಂಡಿದೆ. ಈ ಐಪಿಎಸ್‌ ಡಿಸ್ಪ್ಲೇ ವಾಟರ್‌ಡ್ರಾಪ್ ನಾಚ್ ಶೈಲಿ ಪಡೆದಿದ್ದು, 396 ppi ಪಿಕ್ಸೆಲ್ ಸಾಂದ್ರತೆ ಹೊಂದಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲೇಯರ್ ರಕ್ಷಣೆ ಪಡೆದಿದೆ.

ವಿವೋ V27 5G ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್ ಎರಡು ಕಾರ್ಟೆಕ್ಸ್ A715 ಮತ್ತು ಒಂದು ಕಾರ್ಟೆಕ್ಸ್ A510 ವಿನ್ಯಾಸದೊಂದಿಗೆ ಆಕ್ಟಾ-ಕೋರ್ ಮೀಡಿಯಾಟೆಕ್ ಪ್ರೊಸೆಸರ್‌ ಬಲ ಪಡೆದಿದ್ದು, 12GB RAM ಆಯ್ಕೆ ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಅಂದರೆ ನೀವು ಗೇಮಿಂಗ್‌ನಲ್ಲಿ ಹಾಗೂ ಇತರೆ ಬಹು ಕಾರ್ಯದಲ್ಲಿ ಈ ಫೋನ್‌ ಅತ್ಯುತ್ತಮವಾಗಿ ಸ್ಪಂಧಿಸಲಿದೆ.

ವಿವೋದ ಈ ಮಿಡ್‌ರೇಂಜ್‌ ಫೋನ್‌ಗೆ ಭರ್ಜರಿ ಆಫರ್! 12GB RAM... ಟ್ರಿಪಲ್‌ ಕ್ಯಾಮೆರಾ

ವಿವೋ V27 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ಟಚ್-ಟು-ಫೋಕಸ್, ಐಎಸ್‌ಓ ಹೊಂದಾಣಿಕೆ ಮತ್ತು ಡಿಜಿಟಲ್ ಜೂಮ್ ಸೇರಿದಂತೆ ಆಕರ್ಷಕ ಫೀಚರ್ಸ್‌ ಅನ್ನು ಈ ಸೆನ್ಸರ್‌ಗಳು ಪಡೆದಿವೆ. ಮತ್ತು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 50 ಮೆಗಾಪಿಕ್ಸೆಲ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 66W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

Best Mobiles in India

English summary
Vivo V27 5G smartphone is available in offer price . This smartphone has a 12GB RAM option and a triple camera setup with a 50-megapixel camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+