Home
ಸುದ್ದಿಜಾಲ

ಮಾರುಕಟ್ಟೆಗೆ ಬಂದಾಯ್ತು ವಿವೋ V27 ಫೋನ್‌!..ಅಚ್ಚರಿಯ ಬೆಲೆ ಮತ್ತು ಫೀಚರ್ಸ್‌!

ವಿವೋ ಕಂಪೆನಿಯ ಬಹುನಿರೀಕ್ಷಿತ ವಿವೋ V27 ಸ್ಮಾರ್ಟ್‌ಫೋನ್‌ ಸರಣಿಯು ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸರಣಿಯು ವಿವೋ V27 ಮತ್ತು ವಿವೋ V27 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳ ಪೈಕಿ ವಿವೋ V27 ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ನಲ್ಲಿ ಗ್ರಾಹಕರ ಗಮನ ಸೆಳೆದಿದೆ.

ಹೌದು, ವಿವೋ V27 ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ರಚನೆಯ ಅನ್ನು ಇದು ಪಡೆದುಕೊಂಡಿದೆ.

ಮಾರುಕಟ್ಟೆಗೆ ಬಂದಾಯ್ತು ವಿವೋ V27 ಫೋನ್‌!..ಅಚ್ಚರಿಯ ಬೆಲೆ ಮತ್ತು ಫೀಚರ್ಸ್‌!

ಹಾಗೆಯೇ ಈ ಫೋನ್‌ ನೋಬೆಲ್‌ ಬ್ಲ್ಯಾಕ್‌ (Noble Black) ಮತ್ತು ಮ್ಯಾಜಿಕ್‌ ಬ್ಲೂ (Magic Blue) ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗಾದರೆ ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ V27 : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ವಿವೋ V27 ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಜೊತೆಗೆ 3D ಕರ್ವ್ ಎಡ್ಜ್‌ ರಚನೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಪಡೆದಿದ್ದು, ಪೂರ್ಣ ಹೆಚ್‌ಡಿ ಪ್ಲಸ್‌ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಅಲ್ಲದೇ ಅತ್ಯುತ್ತಮ ಪ್ರಖರತೆಯನ್ನು ಹೊಂದಿದೆ.

ಮಾರುಕಟ್ಟೆಗೆ ಬಂದಾಯ್ತು ವಿವೋ V27 ಫೋನ್‌!..ಅಚ್ಚರಿಯ ಬೆಲೆ ಮತ್ತು ಫೀಚರ್ಸ್‌!

ವಿವೋ V27 : ಪ್ರೊಸೆಸರ್‌ ಬಲ ಯಾವುದು?

ವಿವೋ V27 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು Funtouch OS ಬೆಂಬಲಿತ ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 8GB RAM + 128 GB ಮತ್ತು 12 GB RAM + 256 GB ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಮಾರುಕಟ್ಟೆಗೆ ಬಂದಾಯ್ತು ವಿವೋ V27 ಫೋನ್‌!..ಅಚ್ಚರಿಯ ಬೆಲೆ ಮತ್ತು ಫೀಚರ್ಸ್‌!

ವಿವೋ V27 : ತ್ರಿವಳಿ ಕ್ಯಾಮೆರಾ ಸೆನ್ಸಾರ್

ವಿವೋ V27 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು ಸಹ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ.

ವಿವೋ V27 : ಬ್ಯಾಟರಿ ಮತ್ತು ಇತರೆ ಸೌಲಭ್ಯ

ವಿವೋ V27 ಸ್ಮಾರ್ಟ್‌ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, ಬ್ಲೂಟೂತ್ 5.3, ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್-ಸಿ, ಜಿಪಿಎಸ್, ಬೀಡೌ, ಗ್ಲೋನಾಸ್, ಗೆಲಿಲಿಯೋ, ನ್ಯಾವಿಕ್ ಮತ್ತು ಹೆಚ್ಚಿನವು ಸೇರಿವೆ.

ಮಾರುಕಟ್ಟೆಗೆ ಬಂದಾಯ್ತು ವಿವೋ V27 ಫೋನ್‌!..ಅಚ್ಚರಿಯ ಬೆಲೆ ಮತ್ತು ಫೀಚರ್ಸ್‌!

ವಿವೋ V27 : ಬೆಲೆ ಮತ್ತು ಲಭ್ಯತೆ

ವಿವೋ V27 ಸ್ಮಾರ್ಟ್‌ಫೋನ್‌ ಭಾರತದಲ್ಲಿ 8 GB RAM + 128 GB ವೇರಿಯಂಟ್‌ ಬೆಲೆಯು 32,999 ರೂ. ಆಗಿದೆ. ಹಾಗೆಯೇ 12 GB RAM + 256 GB ವೇರಿಯಂಟ್‌ ಮಾಡೆಲ್‌ ಬೆಲೆಯು 36,999 ರೂ. ಆಗಿದೆ. ಅಧಿಕೃತ ವಿವೋ ವೆಬ್‌ಸೈಟ್‌ ಹಾಗೂ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಖರೀದಿಗೆ ಲಭ್ಯ.

Best Mobiles in India

English summary
Vivo V27 is powered by a MediaTek Dimensity 8200 and 12GB of RAM. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+