Home
ಸುದ್ದಿಜಾಲ

ವಿವೋ ಸಂಸ್ಥೆಯಿಂದ ಮತ್ತೆ ಹೊಸ ಸ್ಮಾರ್ಟ್‌ಫೋನ್‌ ಲಾಂಚ್!..ಬೆಲೆ ಎಷ್ಟು?

ವಿವೋ ಮೊಬೈಲ್‌ ಸಂಸ್ಥೆಯು ನೂತನವಾಗಿ ವಿವೋ V27 ಸ್ಮಾರ್ಟ್‌ಫೋನ್‌ ಸರಣಿಯನ್ನು ಪರಿಚಯಿಸಿದೆ. ವಿವೋ V27 ಮತ್ತು ವಿವೋ V27 ಪ್ರೊ ಫೋನ್‌ಗಳ ಜೊತೆಗೆ ಸಂಸ್ಥೆಯು ವಿವೋ V27e ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪ್ರಾಥಮಿಕ ಕ್ಯಾಮೆರಾ ಅನ್ನು ಒಳಗೊಂಡಿದೆ.

ಹೌದು, ವಿವೋ V27e ಸ್ಮಾರ್ಟ್‌ಫೋನ್‌ ಮಲೇಷ್ಯಾ ಮಾರುಕಟ್ಟೆಯಲ್ಲಿ ಇದೀಗ ಲಾಂಚ್ ಆಗಿದೆ. ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G99 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಇದು ಪಡೆದುಕೊಂಡಿದೆ.

ವಿವೋ ಸಂಸ್ಥೆಯಿಂದ ಮತ್ತೆ ಹೊಸ ಸ್ಮಾರ್ಟ್‌ಫೋನ್‌ ಲಾಂಚ್!..ಬೆಲೆ ಎಷ್ಟು?

ಹಾಗೆಯೇ ಈ ಫೋನ್‌ ಲ್ಯಾವೆಂಡರ್ ಪರ್ಪಲ್‌ (Lavender Purple) ಮತ್ತು ಗ್ಲೋರಿ ಬ್ಲ್ಯಾಕ್‌ (Glory Black) ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗಾದರೆ ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ V27e : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ವಿವೋ V27e ಸ್ಮಾರ್ಟ್‌ಫೋನ್‌ 6.62 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಇನ್ ಡಿಸ್‌ಪ್ಲೇ ಫಿಂಗರ್‌ ಸ್ಕ್ಯಾನರ್‌ ಆಯ್ಕೆ ಇದೆ. ಹಾಗೆಯೇ ಈ ಫೋನ್ 2400 × 1080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಪಡೆದಿದೆ.

ವಿವೋ ಸಂಸ್ಥೆಯಿಂದ ಮತ್ತೆ ಹೊಸ ಸ್ಮಾರ್ಟ್‌ಫೋನ್‌ ಲಾಂಚ್!..ಬೆಲೆ ಎಷ್ಟು?

ವಿವೋ V27e : ಯಾವ ಪ್ರೊಸೆಸರ್‌ ಕಾರ್ಯ ನಿರ್ವಹಿಸಲಿದೆ?

ವಿವೋ V27e ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G99 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು Funtouch OS 13 ಬೆಂಬಲಿತ ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 8 GB + 256 GB ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಇದು ಖರೀದಿಗೆ ಲಭ್ಯವಾಗಲಿದೆ.

ವಿವೋ V27e : ಟ್ರಿಪಲ್‌ ಕ್ಯಾಮೆರಾ ಕಮಾಲ್

ವಿವೋ V27e ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ.

ವಿವೋ ಸಂಸ್ಥೆಯಿಂದ ಮತ್ತೆ ಹೊಸ ಸ್ಮಾರ್ಟ್‌ಫೋನ್‌ ಲಾಂಚ್!..ಬೆಲೆ ಎಷ್ಟು?

ವಿವೋ V27e : ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು?

ವಿವೋ V27e ಸ್ಮಾರ್ಟ್‌ಫೋನ್‌ 4,600 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, ಬ್ಲೂಟೂತ್ 5.3, ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್-ಸಿ, ಜಿಪಿಎಸ್, ಬೀಡೌ, ಗ್ಲೋನಾಸ್, ಗೆಲಿಲಿಯೋ, ನ್ಯಾವಿಕ್ ಮತ್ತು ಹೆಚ್ಚಿನವು ಸೇರಿವೆ.

ವಿವೋ V27e : ಬೆಲೆ ಮತ್ತು ಲಭ್ಯತೆ ಮಾಹಿತಿ

ವಿವೋ V27e ಸ್ಮಾರ್ಟ್‌ಫೋನ್‌ 8 GB + 256 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು ಮಲೇಷ್ಯಾದಲ್ಲಿ RM 1,299 (ಭಾರತದಲ್ಲಿ 24,000ರೂ.) ಆಗಿದೆ. ಮಲೇಷ್ಯಾದಲ್ಲಿ ಈ ಫೋನ್‌ ಲಭ್ಯವಿದೆ. ಭಾರತದಲ್ಲಿ ಯಾವಾಗ ಲಾಂಚ್ ಆಗಲಿದೆ ಎಂಬುದರ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Vivo V27e comes equipped with a 64MP primary rear camera that features OIS support and also has Aura Light. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+