Home
ಸುದ್ದಿಜಾಲ

ವಿವೋ V29 ಸ್ಮಾರ್ಟ್‌ಫೋನ್‌ ಅನಾವರಣ!..ಇದರ ಫೀಚರ್ಸ್‌ಗೆ ಗ್ರಾಹಕರು ಫಿದಾ!

ಪ್ರಮುಖ ಮೊಬೈಲ್‌ ತಯಾರಕ ಬ್ರ್ಯಾಂಡ್‌ಗಳಲ್ಲಿ ಒಂದಾದ ಚೀನಾ ಮೂಲದ ವಿವೋ ಕಂಪೆನಿಯು ಈಗಾಗಲೇ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ವಿವೋ ಸಂಸ್ಥೆಯು ಇದೀಗ ನೂತನವಾಗಿ ತನ್ನ V ಸರಣಿಯಲ್ಲಿ ವಿವೋ V29 ಸ್ಮಾರ್ಟ್‌ಫೋನ್‌ಗಳ ಅನ್ನು ಅನಾವರಣ ಮಾಡಿದೆ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದೆ.

ಹೌದು, ವಿವೋ ಸಂಸ್ಥೆಯು ನೂತನವಾಗಿ ವಿವೋ V29 ಸ್ಮಾರ್ಟ್‌ಫೋನ್‌ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ಈ ಮೂಲಕ ತನ್ನ ಫೋನ್‌ಗಳ ಲೈನ್‌ಅಪ್‌ ಅನ್ನು ವಿಸ್ತರಿಸಿಕೊಂಡಿದೆ. ಈ ನೂತನ ಫೋನ್‌ 8GB RAM ಆಯ್ಕೆಯನ್ನು ಪಡೆದಿದ್ದು, ಇದರ ಜೊತೆಗೆ 8GB ವರ್ಚುವಲ್ RAM ಸೌಲಭ್ಯವನ್ನು ಸಹ ಪಡೆದುಕೊಂಡಿದೆ.

ವಿವೋ V29 ಸ್ಮಾರ್ಟ್‌ಫೋನ್‌ ಅನಾವರಣ!..ಇದರ ಫೀಚರ್ಸ್‌ಗೆ ಗ್ರಾಹಕರು ಫಿದಾ!

ಹಾಗೆಯೇ ವಿವೋ V29 ಮೊಬೈಲ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಜೊತೆಗೆ 4,700mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಅನ್ನು ಪಡೆದಿದೆ. ಹಾಗೆಯೇ 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿದೆ.

ಈ ಫೋನ್ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಈ ಫೋನ್‌ IP68 ರೇಟಿಂಗ್‌ ಪಡೆದಿದ್ದು, ನೀರು ಹಾಗೂ ಧೂಳು ರೆಸಿಸ್ಟೆನ್ಸ್‌ ಸೌಲಭ್ಯ ಪಡೆದಿದೆ. ಇನ್ನುಳಿದಂತೆ ವಿವೋ V29 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಿವೋ V29 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ವಿವೋ V29 ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇನ್ನು ಡಿಸ್‌ಪ್ಲೇ 1.5K ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 452 PPI ಆಗಿದ್ದು, DCI-P3 ಸಿನಿಮಾ ಗ್ರೇಡ್‌ ಕಲರ್‌ ಹರಿವನ್ನು ಪಡೆದಿದೆ.

ವಿವೋ V29 ಪ್ರೊಸೆಸರ್‌ ಪವರ್ : ವಿವೋ V29 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಬೆಂಬಲಿಸಲಿದೆ. ಹಾಗೆಯೆ ಈ ಫೋನ್ 8GB RAM ಮತ್ತು 128 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಪಡೆದಿದ್ದು, ಜೊತೆಗೆ 8GB ವರ್ಚುವಲ್ RAM ಸೌಲಭ್ಯವನ್ನು ಸಹ ಪಡೆದುಕೊಂಡಿದೆ.

ವಿವೋ V29 ಟ್ರಿಪಲ್ ಕ್ಯಾಮೆರಾ ಸೆನ್ಸಾರ್ ವಿಶೇಷ : ವಿವೋ V29 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇದಲ್ಲದೆ ತನ್ನ ವರ್ಗದಲ್ಲೇ ಅತ್ಯುತ್ತಮ ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ವಿವೋ V29 ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟು : ವಿವೋ V29 ಸ್ಮಾರ್ಟ್‌ಫೋನ್‌ 4,700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಬೆಂಬಲ ಸಹ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ eSIM ಬೆಂಬಲ, IP68 ರೇಟಿಂಗ್, ಅಲ್ಟ್ರಾ-ಲಾರ್ಜ್ vc ಬಯೋನಿಕ್ ಕೂಲಿಂಗ್ ಸಿಸ್ಟಮ್ ಸೌಲಭ್ಯ ಪಡೆದಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹೈಬ್ರಿಡ್ ಎಸ್‌ಡಿ ಕಾರ್ಡ್ ಸ್ಲಾಟ್, ಬ್ಲೂಟೂತ್ 5.1 ಮತ್ತು ವೈಫೈ ಹೊಂದಾಣಿಕೆ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಬೆಂಬಲಿಸಲಿದೆ.

ವಿವೋ V29 ಬೆಲೆ, ಲಭ್ಯತೆ ಮತ್ತು ಕಲರ್ ಆಯ್ಕೆ ಮಾಹಿತಿ : ವಿವೋ V29 ಸ್ಮಾರ್ಟ್‌ಫೋನ್‌ 8GB RAM ವೇರಿಯಂಟ್‌ ಆಯ್ಕೆ ಪಡೆದಿದೆ. ಈ ಫೋನ್‌ ಪೀಕ್‌ ಬ್ಲೂ ಹಾಗೂ ನೋಬೆಲ್‌ ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Vivo V29 With Snapdragon 778G SoC Unveiled: specification and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+