Home
ಸುದ್ದಿಜಾಲ

Vivo: 8 GB RAM.. 3D ಕರ್ವ್ಡ್ ಡಿಸ್‌ಪ್ಲೇ... ವಿವೋದ ಈ ಫೋನ್‌ಗೆ ಈಗ ಬಿಗ್‌ ಡಿಸ್ಕೌಂಟ್!

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯಲ್ಲೂ ಲಭ್ಯ ಇವೆ. ಅದರಲ್ಲೂ ಇತ್ತೀಚೆಗೆಂತೂ ಬಜೆಟ್‌ ಬೆಲೆಯ ಫೋನ್‌ಗಳಲ್ಲೂ ಸಹ ಪ್ರೀಮಿಯಂ ಫೀಚರ್ಸ್‌ ಅನ್ನು ಕಾಣಬಹುದು. ಈ ವೇಳೆ ವಿವೋದಿಂದ ಕೆಲವು ತಿಂಗಳ ಹಿಂದೆ ಲಾಂಚ್‌ ಆಗಿರುವ ವಿವೋ V29e 5G ಸ್ಮಾರ್ಟ್‌ಫೋನ್‌ (Vivo V29e 5G smartphone) ಬಹಳ ಜನಪ್ರಿಯತೆ ಪಡೆದುಕೊಂಡಿದೆ.

ಹೌದು, ವಿವೋ ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ಫೋನ್‌ಗಳ ಉತ್ತಮ ಕ್ಯಾಮೆರಾ ಫೀಚರ್ಸ್‌ ಹಾಗೂ ಕಾರ್ಯಕ್ಷಮತೆ ಜನರಿಗೆ ಮಾರುಹೋಗಿದ್ದಾರೆ. ಈ ವೇಳೆ ನೀವೇನಾದರೂ ಅತ್ಯುತ್ತಮ ಫೋನ್ ಖರೀದಿ ಮಾಡಲು ಬಯಸಿದರೆ ಇತ್ತೀಚಿಗೆ ಲಾಂಚ್‌ ಆದ ವಿವೋ V29e 5G ಫೋನ್ (Vivo V29e 5G) ಕಡೆ ಕಣ್ಣಾಯಿಸಬಹುದು. ಈ ಫೋನ್ 8 GB RAM ಹಾಗೂ 3D ಕರ್ವ್ಡ್ ಸ್ಕ್ರೀನ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ನೋಡೋಣ ಬನ್ನಿ.

8 GB RAM.. 3D ಕರ್ವ್ಡ್ ಡಿಸ್‌ಪ್ಲೇ... ವಿವೋದ ಈ ಫೋನ್‌ಗೆ ಈಗ ಬಿಗ್‌ ಡಿಸ್ಕೌಂಟ್!

ವಿವೋ V29e 5G ಆಫರ್ ವಿವರ: ಈ ಫೋನ್‌ ಅನ್ನು ನೀವು ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಖರೀದಿ ಮಾಡಬಹುದು. ಈ ಪ್ಲಾಟ್‌ಫಾರ್ಮ್‌ನ ಬೆಲೆ ವಿಭಾಗದಲ್ಲಿ ಭಿನ್ನತೆ ಇದ್ದು, ಕೆಲವು ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಪ್ರಮುಖವಾಗಿ ಅಮೆಜಾನ್‌ ಮೂಲಕ ನೀವು ಖರೀದಿ ಮಾಡಲು ಮುಂದಾದರೆ 25,999ರೂ.ಗಳನ್ನು ಪಾವತಿ ಮಾಡಬೇಕಿದೆ.

ಹಾಗೆಯೇ ಕ್ರೋಮಾ ಮೂಲಕ ನೀವು ಖರೀದಿ ಮಾಡಲು ಬಯಸಿದರೆ 26,999ರೂ.ಗಳನ್ನು ಪಾವತಿ ಮಾಡಬೇಕಿದೆ. ಇದೇ ವೇಳೆ ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಲು ಮುಂದಾದರೆ 26,999ರೂ.ಗಳನ್ನು ನೀಡಬೇಕಿದೆ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಹಲವಾರು ಬ್ಯಾಂಕ್‌ ಆಫರ್ ನೀಡಲಾಗಿದೆ. ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಈ ಫೋನ್‌ನ ಮೂಲ ದರ ಫ್ಲಿಪ್‌ಕಾರ್ಟ್‌ನಲ್ಲಿ 31,999ರೂ.ಗಳಾಗಿದೆ.

ವಿವೋ V29e 5G ಡಿಸ್‌ಪ್ಲೇ ಮಾಹಿತಿ: ಈ ಫೋನ್‌ ಅನ್ನು ನೀವು ಖರೀದಿ ಮಾಡಲು ಇಚ್ಚಿಸಿದ್ದೇ ಆದರೆ ಇದರ ಕೆಲವು ಫೀಚರ್ಸ್‌ ಕಡೆ ಕಣ್ಣಾಯಿಸಿ. ಈ ಮೂಲಕ ನೀವು ನೀಡುತ್ತಿರುವ ಬೆಲೆಗೆ ಇದು ಯೋಗ್ಯವೇ ಎಂಬುದನ್ನು ತಿಳಿದುಕೊಳ್ಳಬಹುದು. ಈ ಫೋನ್ 6.78 ಇಂಚಿನ ಅಮೋಲೆಡ್‌ 3D ಕರ್ವ್ಡ್ ಡಿಸ್‌ಪ್ಲೇ (3D curved AMOLED display) ಆಯ್ಕೆ ಪಡೆದುಕೊಂಡಿದ್ದು, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ.

ಇದರೊಂದಿಗೆ 391 ಪಿಪಿಐ, 8000000:1 ಹೆಚ್ಚಿನ ಕಾಂಟ್ರಾಸ್ಟ್ ಅನುಪಾತ, 1200 Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಹಾಗೂ 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 120 Hz ರಿಫ್ರೆಶ್ ರೇಟ್‌ ಹೊಂದುವ ಮೂಲಕ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ಪಂಚ್ ಹೋಲ್ ಆಯ್ಕೆ ಇದೆ.

ವಿವೋ V29e 5G ಪ್ರೊಸೆಸರ್‌ ವಿವರ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ (Qualcomm Snapdragon 695 processor) ಕಾರ್ಯನಿರ್ವಹಿಸಲಿದ್ದು, ಇದು 2.2 GHz, ಆಕ್ಟಾ ಕೋರ್ ಪ್ರೊಸೆಸರ್ ಆಗಿದೆ. ಇದರೊಂದಿಗೆ 8 GB RAM + 8 GB ವರ್ಚುವಲ್ RAM ಆಯ್ಕೆಯನ್ನು ನೀಡಲಾಗುತ್ತದೆ. ಉಳಿದಂತೆ 128 GB ಇಂಟರ್‌ ಸ್ಟೋರೇಜ್‌‌ ಆಯ್ಕೆ ಪಡೆದುಕೊಂಡಿದ್ದು, ಕಾರ್ಯಕ್ಷಮತೆಯಲ್ಲಿ ಈ ಬೆಲೆಗೆ ಯೋಗ್ಯವಾದ ಫೋನ್‌ ಆಗಿದೆ.

ವಿವೋ V29e 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ OIS ಬೆಂಬಲದ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಹಾಗೂ 8 64 ಮೆಗಾಪಿಕ್ಸೆಲ್‌ ನ ಸೆಕೆಂಡರಿ ಕ್ಯಾಮೆರಾ ಸೆನ್ಸರ್‌ ಮೂಲಕ ಬಳಕೆದಾರರು ಸುಂದರವಾದ ಫೋಟೋ ಸೆರೆಹಿಡಿಲು ಅನುಕೂಲವಾಗಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಬರೋಬ್ಬರಿ 50 ಮೆಗಾಪಿಕ್ಸೆಲ್‌ನ ಸೆನ್ಸರ್‌ ಆಯ್ಕೆ ನೀಡಲಾಗಿದೆ.

8 GB RAM.. 3D ಕರ್ವ್ಡ್ ಡಿಸ್‌ಪ್ಲೇ... ವಿವೋದ ಈ ಫೋನ್‌ಗೆ ಈಗ ಬಿಗ್‌ ಡಿಸ್ಕೌಂಟ್!

ವಿವೋ V29e 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 44W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G, 5G, VoLTE ಬ್ಲೂಟೂತ್ ಆವೃತ್ತಿ v5.1, ವೈ-ಫೈ, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್‌ಸಿ -C v2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ (Connectivity Features) ಪಡೆದುಕೊಂಡಿದೆ.

Best Mobiles in India

English summary
Vivo V29e 5G Smartphone has gained a lot of popularity. This smartphone has got 8 GB RAM and 3D curved screen option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+