Home
ಸುದ್ದಿಜಾಲ

Vivo: ವಿವೋ V30 5G ಗ್ಲೋಬಲ್ ವೇರಿಯಂಟ್ ಫೀಚರ್ಸ್‌ ಲೀಕ್‌! ಹೇಗಿರಲಿದೆ ಡಿಸೈನ್?

ವಿವೋ ಫೋನ್‌ಗಳು (Vivo phone) ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತಿವೆ. ಈ ಫೋನ್‌ಗಳ ಕ್ಯಾಮೆರಾ ಫೀಚರ್ಸ್‌ ಹಾಗೂ ಕಾರ್ಯಕ್ಷಮತೆ ಇತರೆ ಫೋನ್‌ಗಳಿಗಿಂತ ಭಿನ್ನವಾಗಿರಲಿದೆ. ಅದರಂತೆ ವಿವೋ ಇದೀಗ ಮತ್ತೊಂದು ವಿಶೇಷ ಫೋನ್‌ ಮೂಲಕ ಜಾಗತಿಕವಾಗಿ ಸದ್ದು ಮಾಡಲು ಸಜ್ಜಾಗಿದೆ.

ಹೌದು, ವಿವೋ ಶೀಘ್ರದಲ್ಲೇ V30 (Vivo V30) ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಿದೆ ಎನ್ನಲಾಗಿದೆ. ಈ ಫೋನ್‌ ಬಗ್ಗೆ ಈಗಾಗಲೇ ಜಾಗತಿಕವಾಗಿ ಬಹಳ ಚರ್ಚೆ ಆಗುತ್ತಿದ್ದು, ಲೀಕ್‌ ಮಾಹಿತಿ ಆಧಾರದ ಮೇಲೆ ಇದು ಭರ್ಜರಿ ಫೀಚರ್ಸ್‌ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ವಿಶೇಷತೆ ಪಡೆದಿರಬಹುದು?, ಆರಂಭದಲ್ಲಿ ಇದನ್ನು ಎಲ್ಲಿ ಅನಾವರಣ ಮಾಡಲಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ವಿವೋ V30 5G ಗ್ಲೋಬಲ್ ವೇರಿಯಂಟ್ ಫೀಚರ್ಸ್‌ ಲೀಕ್‌! ಹೇಗಿರಲಿದೆ ಡಿಸೈನ್?

ವಿವೋ V30 ಸರಣಿ: ಈ ಸ್ಮಾರ್ಟ್‌ಫೋನ್ ಸರಣಿ ಬಹು ವೇರಿಯಂಟ್‌ ಆಯ್ಕೆ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಮುಂಬರುವ ಕೊಡುಗೆಗಳನ್ನು ಅಧಿಕೃತವಾಗಿ ಲೇವಡಿ ಮಾಡಲಾಗಿದೆ. ಜೊತೆಗೆ ಈ ಫೋನ್‌ ಬಹು ಪ್ರಮಾಣೀಕರಣಗಳನ್ನು ಸಹ ಪಡೆದಿದ್ದು, ಈಗ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ V30 5G ಯ ಪ್ರಮುಖ ಫೀಚರ್ಸ್‌ ಹಾಗೂ ಅದರ ವಿನ್ಯಾಸವನ್ನು ಬಹಿರಂಗಪಡಿಸುವ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಈ ಫೋನ್‌ ಅನ್ನು ಫಿಲಿಪೈನ್ಸ್‌ನಲ್ಲಿ ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದ್ದು, ಟಿಪ್‌ಸ್ಟರ್ ಮಾಹಿತಿ ಪ್ರಕಾರ, ಫೋನ್ ಕಳೆದ ತಿಂಗಳು ಚೀನಾದಲ್ಲಿ ಪ್ರಾರಂಭವಾದ ವಿವೋ S18 (Vivo S18) ಅನ್ನು ಹೋಲುತ್ತದೆ. ರಿಯರ್‌ ಪ್ಯಾನೆಲ್‌ನಲ್ಲಿ ಆಯತಾಕಾರದ ಲೈಟ್‌ ಆಯ್ಕೆ ಪಡೆದಿರಲಿದ್ದು, ಮೇಲ್ಭಾಗವು ಕ್ಯಾಮೆರಾ ಸೆನ್ಸರ್‌ನೊಂದಿಗೆ ಸ್ಕ್ವಾರಿಶ್ ಮಾಡ್ಯೂಲ್ ಅನ್ನು ಹೊಂದಿದೆ.

ಜೊತೆಗೆ ಕೆಳಗಿನ ಅರ್ಧವು ಅವಳಿ ಎಲ್ಇಡಿ ಲೈಟಿಂಗ್ ರಚನೆ ಪಡೆದಿದ್ದು, ಸೆಲ್ಫಿ ಸೆನ್ಸರ್‌ ಅನ್ನು ಮಧ್ಯದಲ್ಲಿ ಜೋಡಿಸಲಾಗಿದೆ, ಇದರೊಂದಿಗೆ ಪಂಚ್-ಹೋಲ್ ಕಟೌಟ್‌ನೊಂದಿಗೆ ಕರ್ವ್ಡ್ ಡಿಸ್‌ಪ್ಲೇ ಇದರಲ್ಲಿರಲಿದ್ದು, ಈ ಎಲ್ಲಾ ಮಾಹಿತಿ ಟೀಸರ್‌ನಿಂದ ಹೊರಬಿದ್ದಿದೆ. ಪ್ರಮುಖ ಫೀಚರ್ಸ್‌ ವಿಷಯಕ್ಕೆ ಬಂದರೆ ವಿವೋ V30 5G ಯ ಜಾಗತಿಕ ವೇರಿಯಂಟ್‌ ಸ್ನಾಪ್‌ಡ್ರಾಗನ್ 7 ಜನ್ 3 SoC ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಈ ಫೋನ್‌ ಸರಣಿ 12GB RAM ಜೊತೆಗೆ 12GB ವರ್ಚುವಲ್ RAM ಅನ್ನು ಪಡೆದಿರಲಿದೆ ಎಂದು ತಿಳಿದುಬಂದಿದ್ದು, 80W ವೇಗದ ಚಾರ್ಜಿಂಗ್ ಅನ್ನು ಇದು ಬೆಂಬಲಿಸುತ್ತದೆ ಎನ್ನುವ ಮಾಹಿತಿ ದೃಢವಾಗಿದೆ. ಗುಗ್ಲಾನಿ ಪ್ರಕಾರ, ಸ್ಮಾರ್ಟ್‌ಫೋನ್ ಓಷನ್ ಬ್ಲೂ ಮತ್ತು ಬ್ಲ್ಯಾಕ್‌ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದು 185 ಗ್ರಾಂ ತೂಕ ಹೊಂದಿರಲಿದೆ. ಈ ಎಲ್ಲಾ ಫೀಚರ್ಸ್‌ನೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಎಂದು ಲೀಕ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿವೋ V40 SE 5G, V30 SE, Y200e: ಈ ಫೋನ್‌ನ ನಂತೆಯೇ ಮುಂದಿನ ದಿನಗಳಲ್ಲಿ ವಿವೋ V40 SE 5G, V30 SE, Y200e ಸ್ಮಾರ್ಟ್‌ಫೋನ್‌ಗಳು ಸಹ ಅನಾವರಣ ಆಗಲಿವೆ. ಈ ಫೋನ್‌ಗಳ ಹೆಸರನ್ನು ಗೂಗಲ್‌ ಪ್ಲೇ ಡಿವೈಸ್‌ ಲಿಸ್ಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಇದರಿಂದ ಶೀಘ್ರದಲ್ಲೇ ಈ ಫೋನ್‌ಗಳು ಸಹ ಅನಾವರಣ ಆಗಲಿದೆ ಎಂದು ತೋರುತ್ತದೆ. ಮೂರು ವರ್ಷಗಳ ನಂತರ, V ಸರಣಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ವಿವೋ SE ಮಾನಿಕರ್ ಅನ್ನು ಪುನರುಜ್ಜೀವನಗೊಳಿಸುತ್ತಿದೆ.

ವಿವೋ V30 5G ಗ್ಲೋಬಲ್ ವೇರಿಯಂಟ್ ಫೀಚರ್ಸ್‌ ಲೀಕ್‌! ಹೇಗಿರಲಿದೆ ಡಿಸೈನ್?

ಈ ವಿವೋ V40 SE 5G, ವಿವೋ V30 SE ಮತ್ತು ವಿವೋ Y200e 5G ಸ್ಮಾರ್ಟ್‌ಫೋನ್‌ಗಳು (Vivo V40 SE 5G, Vivo V30 SE and Vivo Y200e 5G) ಈ ವರ್ಷ ಬಿಡುಗಡೆ ಮಾಡಲಿರುವ ಚೈನೀಸ್ ಬ್ರ್ಯಾಂಡ್‌ನ ಮಿಡ್‌ ರೇಂಜ್‌ನ ಫೋನ್‌ಗಳ ಮೊದಲ ಬ್ಯಾಚ್ ಆಗಿರಬಹುದು ಎಂದೂ ಸಹ ಹೇಳಲಾಗಿದೆ.

Best Mobiles in India

English summary
Vivo is said to be unveiling the Vivo V30 series of smartphones soon. There is already a lot of discussion about this phone globally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+