Home
ಸುದ್ದಿಜಾಲ

Vivo: ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಲಾಂಚ್‌! 80W ವೇಗದ ಚಾರ್ಜಿಂಗ್.. ಬೆಲೆ ಎಷ್ಟು?

ವಿವೋದ (vivo) ಯಾವುದೇ ಫೋನ್‌ ಲಾಂಚ್‌ ಆದರೂ ಸಹ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸಂಚಲನ ಉಂಟು ಮಾಡುತ್ತದೆ. ಅದರಂತೆ ಈಗ ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ (Vivo V30 Lite 4G smartphone) ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ಹೌದು, ಇದೀಗ ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ ಫೋನ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಕ್ವಾಲ್ಕಾಮ್ ಪ್‌ಡ್ರಾಗನ್ 685 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಲಾಂಚ್‌! 80W ವೇಗದ ಚಾರ್ಜಿಂಗ್..

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ E4 ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್‌ ಮತ್ತು 1,800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಮೂಲಕ ಉತ್ತಮ ವೀಕ್ಷಣೆ ಅನುಭವವನ್ನು ನೀಡಲಿದೆ.

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಈ ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 685 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಆಧಾರಿತ ಫನ್‌ಟಚ್‌ ಓಎಸ್‌ 14 ಅನ್ನು ರನ್‌ ಮಾಡಲಿದೆ. ಹಾಗೆಯೇ ರಷ್ಯಾದಲ್ಲಿ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡರೆ ಕಾಂಬೋಡಿಯಾದಲ್ಲಿ 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ. ಹಾಗೆಯೇ ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್‌ ಸೆಕೆಂಡರಿ ಸೆನ್ಸರ್‌ ಮೂಲಕ ಡ್ಯುಯಲ್-ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದ್ದು, ಫೋಟೋಗ್ರಫಿ ಪ್ರಿಯರಿಗೆ ವಿವಿಧ ರೀತಿಯ ಪ್ರಯೋಜನ ನೀಡಲಿದೆ.

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಲಾಂಚ್‌! 80W ವೇಗದ ಚಾರ್ಜಿಂಗ್..

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಇನ್ನು ಈ ಸ್ಮಾರ್ಟ್‌ಫೋನ್ 80W ವರೆಗೆ ವೇಗವಾಗಿ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ ಹೊಂದಿದ್ದು, ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್, 4G VoLTE, ಬ್ಲೂಟೂತ್ ಆವೃತ್ತಿ 5.0, ವೈ-ಫೈ ಮತ್ತು ಜಿಪಿಎಸ್‌ ನಂತಹ ಫೀಚರ್ಸ್‌ ಆಯ್ಕೆಯನ್ನು ಪಡೆದುಕೊಂಡಿದೆ.

ವಿವೋ V30 ಲೈಟ್‌ 4G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಲಾಂಚ್ ಮಾಡಲಾಗಿದ್ದು, ಮೊದಲೇ ತಿಳಿಸಿದಂತೆ ರಷ್ಯಾದಲ್ಲಿ 8GB RAM ಮತ್ತು 128GB ಯ ಫೋನ್‌ ಹಾಗೂ ಕಾಂಬೋಡಿಯಾದಲ್ಲಿ 256GB ಸ್ಟೋರೇಜ್‌ ಆಯ್ಕೆಯ ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಅದರಂತೆ ರಷ್ಯಾದಲ್ಲಿ RUB 24,999 (ಅಂದಾಜು 22,512 ರೂ.ಗಳು) ಮತ್ತು ಕಾಂಬೋಡಿಯಾದಲ್ಲಿ KHR 1.2 ಮಿಲಿಯನ್ (ಅಂದಾಜು 24,717 ರೂ.ಗಳ) ದರ ನಿಗದಿ ಮಾಡಲಾಗಿದೆ ಈ ಫೋನ್ ಹಸಿರು ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

ವಿವೋ 30 ಲೈಟ್‌ 4G ಗೂ V30 ಲೈಟ್‌ 5G ಸ್ಮಾರ್ಟ್‌ಫೋನ್‌ಗೆ ಇರುವ ವ್ಯತ್ಯಾಸ: 4G ಮತ್ತು 5G ರೂಪಾಂತರಗಳ ನಡುವಿನ ಒಂದು ಗಮನಾರ್ಹ ವ್ಯತ್ಯಾಸವೆಂದರೆ ಪ್ರೊಸೆಸರ್‌ಗಳ ಆಯ್ಕೆ. V30 ಲೈಟ್‌ 4G ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 685 SoC ನೊಂದಿಗೆ ಕಾಣಿಸಿಕೊಂಡರೆ, 5G ರೂಪಾಂತರ ಮೆಕ್ಸಿಕೊದಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್, ಸೌದಿ ಅರೇಬಿಯಾದಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನೊಂದಿಗೆ ಲಾಂಚ್ ಮಾಡಲಾಗಿದೆ.

4G ಮತ್ತು 5G ಎರಡೂ ಮಾದರಿಗಳು ಕೆಲವು ಮಾರುಕಟ್ಟೆಗಳಲ್ಲಿ 80W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದ್ದರೆ, ಮೆಕ್ಸಿಕೋದಲ್ಲಿ ಬಿಡುಗಡೆಯಾದ 5G ಮಾದರಿಯು 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Vivo V30 Lite 4G smartphone unveiled. The smartphone has an AMOLED display and is powered by a Qualcomm Snapdragon 685 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+