ವಿವೋದ ಈ ಸ್ಟೈಲಿಶ್ ಫೋನ್ ಬೆಲೆ ಇಳಿಕೆ; ಜಬರ್ದಸ್ತ್ ಡಿಸ್ಕೌಂಟ್ ಬಿಡಬೇಡಿ!
ಲೀಡಿಂಗ್ ಇ ಕಾಮರ್ಸ್ ತಾಣ ಎನಿಸಿರುವ ಫ್ಲಿಪ್‌ಕಾರ್ಟ್ ಒಂದಿಲ್ಲೊಂದು ಆಫರ್ ಮೇಳಗಳನ್ನು ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದು, ಇದೀಗ ಮೊಬೈಲ್ ಫೆಸ್ಟಿವಲ್ ಸೇಲ್ ಆಯೋಜಿಸಿದ್ದು ಸಖತ್ ಕೊಡುಗೆಗಳ ಘೋಷಣೆ ಮಾಡಿದೆ. ಅದರಲ್ಲಿಯೂ ಪ್ರಮುಖವಾಗಿ ಆಯ್ದ ಮೊಬೈಲ್‌ಗಳಿಗೆ ಬೊಂಬಾಟ್ ರಿಯಾಯಿತಿ ಲಭ್ಯ ಮಾಡಿದೆ. ಆ ಪೈಕಿ ವಿವೋ ಸಂಸ್ಥೆಯು ವಿವೋ V30 ಪ್ರೊ ಮೊಬೈಲ್ (Vivo V30 Pro 5G ) ಗ್ರಾಹಕರು ಹುಬ್ಬೇರಿಸುವಂತಹ ಡಿಸ್ಕೌಂಟ್ ನಲ್ಲಿ ಕಾಣಿಸಿಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಆಯೋಜಿಸಿರುವ ಸ್ಮಾರ್ಟ್‌ಫೋನ್ ಫೆಸ್ಟಿವಲ್ ಸೇಲ್‌ನಲ್ಲಿ ವಿವೋ V30 ಪ್ರೊ (Vivo V30 Pro 5G ) ಮೊಬೈಲ್ ಶೇ. 17% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ 38,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್ ಸಹ ಪಡೆಯಬಹುದಾಗಿದೆ.

ವಿವೋ V30 ಪ್ರೊ (Vivo V30 Pro 5G ) ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಅಲ್ಲದೇ ಇದು ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಗಳನ್ನು ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಕೆಲಸ ಮಾಡಲಿದೆ. ಹಾಗಾದರೇ ವಿವೋ V30 ಪ್ರೊ ಮೊಬೈಲ್ ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ V30 ಪ್ರೊ - ಫೀಚರ್ಸ್
ವಿವೋ V30 ಪ್ರೊ ( Vivo V30 Pro 5G ) ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 100% DCI-P3 ಬಣ್ಣದ ಹರವು, ಅಲ್ಲದೇ 2800 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಸಹ ಹೊಂದಿದೆ.
ವಿವೋ V30 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 4nm ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256 GB ಹಾಗೂ 12GB RAM ಮತ್ತು 512 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ವಿವೋ V30 ಪ್ರೊ (Vivo V30 Pro 5G) ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಪೋಟ್ರೇಟ್ ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 50 ಮೆಗಾ ಪಿಕ್ಸೆಲ್ ಆಟೋಫೋಕಸ್ ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ.
ವಿವೋ V30 ಪ್ರೊ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ನ್ನು ಪಡೆದಿದ್ದು, ಇದು 80W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.3, GPS, USB ಟೈಪ್-C, NFC ಸಪೋರ್ಟ್ ಜೊತೆಗೆ ಸಿಗಲಿದೆ.


Click it and Unblock the Notifications








