Home
ಸುದ್ದಿಜಾಲ

ವಿವೋ V30 ಪ್ರೊ ಬಿಡುಗಡೆ ಸಿದ್ಧ!..ಇದರ ಫೀಚರ್ಸ್‌ ಹೇಗಿವೆ ಗೊತ್ತಾ?

ಜನಪ್ರಿಯ ವಿವೋ ಸಂಸ್ಥೆಯು ತನ್ನ V ಸರಣಿಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿದೆ. ಇದೀಗ ಈ ಸರಣಿಯ ಮುಂದುವರಿದ ಭಾಗವಾಗ ವಿವೋ V30 ಪ್ರೊ ಮೊಬೈಲ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನಿನ ಕೆಲವು ಲೀಕ್‌ ಫೀಚರ್ಸ್‌ಗಳು ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ.

ಹೌದು, ವಿವೋ ಸಂಸ್ಥೆಯು ವಿವೋ V30 ಪ್ರೊ (Vivo V30 Pro) ಫೋನ್‌ ಅನ್ನು ಇದೇ ಫೆಬ್ರವರಿ 28 ರಂದು ಥೈಲ್ಯಾಂಡ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಫೋನ್ ಮೂರು ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿದ್ದು, ಅವುಗಳು ಕ್ರಮವಾಗಿ ಗ್ರೀನ್ ಸೀ, ನೈಟ್ ಸ್ಕೈ ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಕಲರ್‌ ಆಯ್ಕೆ ಹೊಂದಿರಲಿವೆ.

ವಿವೋ V30 ಪ್ರೊ ಬಿಡುಗಡೆ ಸಿದ್ಧ!..ಇದರ ಫೀಚರ್ಸ್‌ ಹೇಗಿವೆ ಗೊತ್ತಾ?

ಇತ್ತೀಚಿನ ಲೀಕ್‌ ಮಾಹಿತಿಗಳ ಪ್ರಕಾರ, ವಿವೋ V30 ಪ್ರೊ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಅಲ್ಲದೇ ಈ ಫೋನ್‌ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಈ ಫೋನಿನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ V30 ಪ್ರೊ ನಿರೀಕ್ಷಿತ ಫೀಚರ್ಸ್‌
ವಿವೋ V30 ಪ್ರೊ ಮೊಬೈಲ್‌ ಸೂಪರ್-ಸ್ಮೂತ್ 120Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇದ್ದು, ಅಲ್ಲದೇ ಇದು 3D ಕರ್ವ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಒದಗಿಸಲಿದೆ.

ವಿವೋ V30 ಪ್ರೊ ಮೊಬೈಲ್‌ ಮೂರು ಕ್ಯಾಮೆರಾ ರಚನೆ ಅನ್ನು ಪಡೆದಿರುವ ಸಾಧ್ಯತೆಗಳು ಇವೆ. ಈ ಫೋನ್‌ ಝೈಸ್ ಲೆನ್ಸ್‌ಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಫೋಟೋಗಳನ್ನು ನೀಡಲಿರುವ ನಿರೀಕ್ಷೆಗಳು ಇವೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ.

ವಿವೋ V30 ಪ್ರೊ ಮೊಬೈಲ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಾತ್ರಿ ಎನ್ನಲಾಗಿದೆ. ಅಲ್ಲದೇ ಇದು ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಹಾಗೆಯೇ ಈ ಫೋನ್ ಕ್ಯಾಮೆರಾ ಮಾಡ್ಯೂಲ್ ಅಡಿಯಲ್ಲಿ 'ಔರಾ' ಲೈಟ್ ನೀಡಲಾಗಿದ್ದು, ಫೋಟೋಗಳನ್ನು ತೆಗೆದುಕೊಳ್ಳುವಾಗ ಕಲರ್‌ ತಾಪಮಾನವನ್ನು ಸೆಟ್‌ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಬರಲಿರುವ ವಿವೋ V30 ಪ್ರೊ ಮೊಬೈಲ್‌ ವಿವೋ S18 ಪ್ರೊ ಫೋನಿನಂತೆ ಕೆಲವು ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 6.78 ಇಂಚಿನ 120Hz ಫುಲ್‌ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಪಡೆದಿರಲಿದೆ. ಇದರ ಡಿಸ್‌ಪ್ಲೇ 1,260 x 2,800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ.

ಹಾಗೆಯೇ ಸಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ ಎನ್ನಲಾಗಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಆಯ್ಕೆ ಪಡೆದಿರಲಿದ್ದು, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

ಟ್ರಿಪಲ್ ರಿಯರ್‌ ಕ್ಯಾಮೆರಾ ಘಟಕವು 50 ಮೆಗಾ ಪಿಕ್ಸೆಲ್ 1/1.55 ಇಂಚಿನ ಸೋನಿ IMX920 ಪ್ರಾಥಮಿಕ ಸೆನ್ಸರ್‌, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ JN1 ಸೆನ್ಸರ್‌ನೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್ ಸೋನಿ ಸೆನ್ಸರ್‌ ಆಯ್ಕೆಯಲ್ಲಿ ಈ ಫೋನ್‌ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
Vivo V30 Pro launching soon with Zeiss lenses. Expected Features, date and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+