Home
ಸುದ್ದಿಜಾಲ

Vivo: ಬ್ಲೂಟೂತ್ SIG ಸೈಟ್‌ನಲ್ಲಿ ವಿವೋ V30 ಪ್ರೊ ಸ್ಮಾರ್ಟ್‌ಫೋನ್‌! ಏನೆಲ್ಲಾ ಫೀಚರ್ಸ್‌ ಪಡೆದಿದೆ?

ವಿವೋ (Vivo) ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಶೀಘ್ರದಲ್ಲೇ ಮತ್ತೊಂದು ಹೊಸ ಫೋನ್‌ ಅನಾವರಣ ಆಗಲಿದೆ. ಈ ಫೋನ್ ಬ್ಲೂಟೂತ್ SIG ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಫೋನ್‌ ಬಗ್ಗೆ ಭಾರೀ ಕುತೂಹಲ ಹುಟ್ಟಿದೆ.

ಹೌದು, ವಿವೋ ಕಂಪೆನಿಯು ವಿವೋ V30 ಪ್ರೊ ಸ್ಮಾರ್ಟ್‌ಫೋನ್ (Vivo V30 Pro smartphone) ಅನ್ನು ಶೀಘ್ರದಲ್ಲೇ ಅನಾವರಣ ಮಾಡಲಿದೆ. ಕೆಲವು ದಿನಗಳ ಹಿಂದಷ್ಟೇ ವಿವೋ V30 ಸ್ಮಾರ್ಟ್‌ಫೋನ್‌ (Vivo V30 smartphone) ಅನ್ನು ಅನಾವರಣ ಮಾಡಲಾಗಿದ್ದು, ಇದೀಗ ಇದೇ ಸರಣಿಯ ಫೋನ್‌ ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಬ್ಲೂಟೂತ್ SIG ಸೈಟ್‌ನಲ್ಲಿ ವಿವೋ V30 ಪ್ರೊ ಸ್ಮಾರ್ಟ್‌ಫೋನ್‌!

ವಿವೋ V30 ಪ್ರೊ ಸ್ಮಾರ್ಟ್‌ಫೋನ್: ವಿವೋ V30 ಪ್ರೊ ಸ್ಮಾರ್ಟ್‌ಫೋನ್ ಡಿಸೆಂಬರ್ 2023 ರಲ್ಲಿ ಚೀನಾದಲ್ಲಿ ಲಾಂಚ್‌ ಆದ ವಿವೋ S18 ಪ್ರೊ ಸ್ಮಾರ್ಟ್‌ಫೋನ್‌ನ (Vivo S18 Pro smartphone) ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್ ಈಗ ಪ್ರಮಾಣೀಕರಣ ಸೈಟ್‌ನಲ್ಲಿ ಗುರುತಿಸಲ್ಪಟ್ಟಿದೆ. ವಿವೋ V30 ಪ್ರೊ ಫೋನ್‌ಗೆ V2319 ಎಂದು ಬ್ಲೂಟೂತ್ SIG ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ.

ಬ್ಲೂಟೂತ್ 5.3 ಆವೃತ್ತಿ ಸಂಪರ್ಕವನ್ನು ಬೆಂಬಲಿಸುತ್ತದೆ ಎಂಬ ವಿಷಯವನ್ನು ಹೊರತುಪಡಿಸಿ ಈ ಹ್ಯಾಂಡ್‌ಸೆಟ್ ಕುರಿತು ಬೇರೆ ಹೆಚ್ಚಿನದನ್ನು ಬಹಿರಂಗಪಡಿಸುವುದಿಲ್ಲ. ಮೂಲ ವಿವೋ V30 ಮಾದರಿಯನ್ನು ಮರುಬ್ಯಾಡ್ಜ್ ಮಾಡಲಾದ ವಿವೋ S18 ಆಗಿರುವುದರಿಂದ ಈ ವಿವೋ V30 ಪ್ರೊ ಸಹ ವಿವೋ S18 ಪ್ರೊ ನಲ್ಲಿ ಇರುವ ಫೀಚರ್ಸ್‌ ಅನ್ನೇ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಬ್ಲೂಟೂತ್ SIG ಸೈಟ್‌ನಲ್ಲಿ ವಿವೋ V30 ಪ್ರೊ ಸ್ಮಾರ್ಟ್‌ಫೋನ್‌!

ಇನ್ನು ವಿವೋ S18 ಪ್ರೊ ನ 12GB + 256GB ವೇರಿಯಂಟ್‌ ಫೋನ್ ಚೀನಾದಲ್ಲಿ CNY 3,199 (ಸುಮಾರು 37,700ರೂ.ಗಳು) ಕ್ಕೆ ಅನಾವರಣ ಆಗಿದೆ. ಅದರಂತೆ 16GB + 256GB ಮತ್ತು 16GB + 512GB ವೇರಿಯಂಟ್‌ ಫೋನ್‌ಗಳು ಸಹ ಲಭ್ಯ ಇವೆ. ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ ಮತ್ತು ಸೀ ಗ್ರೀನ್‌ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಜೊತೆಗೆ ಈ ಫೋನ್‌ನ ರಿಯಲ್‌ ಪ್ಯಾನಲ್‌ನಲ್ಲಿ ಆಕರ್ಷಕ ಹೂವಿನ ಚಿತ್ತಾರದ ಆಯ್ಕೆಯನ್ನು ಕಾಣಬಹುದಾಗಿದೆ.

ವಿವೋ V30 ಪ್ರೊ ಸ್ಮಾರ್ಟ್‌ಫೋನ್‌ ವಿವೋ S18 ಪ್ರೊ ನಂತೆಯೇ ವಿಶೇಷ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 6.78 ಇಂಚಿನ 120Hz ಫುಲ್‌ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 1,260x2,800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್‌ 14 ಆಧಾರಿತ ಒರ್ಜಿನ್‌ ಓಎಸ್‌ 4 ನೊಂದಿಗೆ ಈ ಸ್ಮಾರ್ಟ್‌ಫೋನ್ ರನ್‌ ಆಗಲಿದೆ ಎನ್ನಲಾಗಿದೆ.

ಬ್ಲೂಟೂತ್ SIG ಸೈಟ್‌ನಲ್ಲಿ ವಿವೋ V30 ಪ್ರೊ ಸ್ಮಾರ್ಟ್‌ಫೋನ್‌!

ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದ್ದು, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಕ್ಯಾಮೆರಾ ವಿಚಾರಕ್ಕೆ ಬಂದರೆ ಟ್ರಿಪಲ್ ರಿಯರ್‌ ಕ್ಯಾಮೆರಾ ಘಟಕವು 50 ಮೆಗಾಪಿಕ್ಸೆಲ್ 1/1.55 ಇಂಚಿನ ಸೋನಿ IMX920 ಪ್ರಾಥಮಿಕ ಸೆನ್ಸರ್‌, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ JN1 ಸೆನ್ಸರ್‌ನೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್ ಸೋನಿ ಸೆನ್ಸರ್‌ ಆಯ್ಕೆಯಲ್ಲಿ ಈ ಫೋನ್‌ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
Vivo company will soon unveil the Vivo V30 Pro smartphone. A few days ago, Vivo had unveiled the V30 smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+