Home
ಸುದ್ದಿಜಾಲ

ಇನ್ನು ಕೆಲವೇ ದಿನದಲ್ಲಿ ಲಾಂಚ್‌ ಆಗಲಿದೆ ವಿವೋದ ಈ ಸ್ಟೈಲಿಶ್‌ ಫೋನ್‌!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾದ ವಿವೋ ಸಂಸ್ಥೆಯು ತನ್ನ ನೂತನ ವಿವೋ V30 ಮತ್ತು ವಿವೋ V30 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಈಗ ಭಾರತದಲ್ಲಿ ಲಾಂಚ್‌ ಮಾಡಲು ಸಜ್ಜಾಗಿದೆ. ಸಂಸ್ಥೆಯು ಈ ಎರಡು ಫೋನ್‌ಗಳನ್ನು ಇದೇ ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಬಿಡುಗಡೆ ಮಾಡುವುದು ಕನ್ಫರ್ಮ್‌ ಆಗಿದೆ.

ಹೌದು, ಇನ್ಫಿನಿಕ್ಸ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ವಿವೋ V30 ಮತ್ತು ವಿವೋ V30 ಪ್ರೊ ಅನ್ನು ಮಾರ್ಚ್ 7 ರಂದು ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಫೋನಿನ ಫೀಚರ್ಸ್‌ಗಳು ಈಗಾಗಲೇ ಮೊಬೈಲ್‌ ಪ್ರಿಯರನ್ನು ಸೆಳೆದಿವೆ. ಅಂದಹಾಗೆ ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ.

ಇನ್ನು ಕೆಲವೇ ದಿನದಲ್ಲಿ ಲಾಂಚ್‌ ಆಗಲಿದೆ ವಿವೋದ ಈ ಸ್ಟೈಲಿಶ್‌ ಫೋನ್‌!

ಹಾಗೆಯೇ ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇದಲ್ಲದೇ ಈ ಫೋನಿನ ಇನ್ನೊಂದು ಪ್ರಮುಖ ಹೈಲೈಟ್‌ ಎಂದರೆ ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ವಿವೋ V30 ಪ್ರೊ ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ ಎಂಟ್ರಿ ಕೊಡಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಸಹ ಪಡೆದಿರಲಿದೆ. ಇದರ ಸೆಕೆಂಡರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ ತೃತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇನ್ನು ಈ ಫೋನ್‌ ಝೈಸ್ ಲೆನ್ಸ್‌ಗಳನ್ನು ಹೊಂದಿರುವ ನಿರೀಕ್ಷೆಗಳು ಇವೆ.

ಇನ್ನು ಕೆಲವೇ ದಿನದಲ್ಲಿ ಲಾಂಚ್‌ ಆಗಲಿದೆ ವಿವೋದ ಈ ಸ್ಟೈಲಿಶ್‌ ಫೋನ್‌!

ವಿವೋ V30 ಪ್ರೊ ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಸೌಲಭ್ಯ ಸಹ ಪಡೆದಿದ್ದು, ಇದು 1260 x 2800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಡಿಸ್‌ಪ್ಲೇಯು 453 ಪಿಪಿಐ ಪಿಕ್ಸೆಲ್‌ ಸಾಂದ್ರತೆ ಪಡೆದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇಯು HDR 10+, ಅಲ್ಟ್ರಾ ಸ್ಲಿಮ್ 3D ಕರ್ವ್ ಡಿಸ್‌ಪ್ಲೇ, 2160 Hz PWM ಅನ್ನು ಹೊಂದಿದೆ. ಇದರ ಜೊತೆಗೆ 2800 ನಿಟ್ಸ್‌ ಬ್ರೈಟ್‌ನೆಸ್‌ನಲ್ಲಿರಲಿ ಇದೆ ಎಂದು ಅಂದಾಜಿಸಲಾಗಿದೆ.

ವಿವೋ V30 ಪ್ರೊ ಮೊಬೈಲ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ವಿವೋ V30 ಪ್ರೊ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದು 80W ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ ಬರಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ.

ಇತ್ತೀಚಿಗೆ ಸಂಸ್ಥೆಯು ಇತ್ತೀಚಿನ ಹೊಸ ವಿವೋ Y200e 5G ಮೊಬೈಲ್‌ 6.67 ಇಂಚಿನ ಸ್ಯಾಮ್‌ಸಂಗ್ E4 AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಸ್ನಾಪ್‌ಡ್ರಾಗನ್‌ 4 ಜೆನ್‌ 2 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ.

Best Mobiles in India

English summary
Vivo V30 Pro will launch in India on March 7. Expected Specifications and price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+