Home
ಸುದ್ದಿಜಾಲ

Vivo: ವಿವೋದ ಬಹುನಿರೀಕ್ಷಿತ ವಿವೋ V30 ಸ್ಮಾರ್ಟ್‌ಫೋನ್‌ ಘೋಷಣೆ! ಕರ್ವ್ಡ್ ಡಿಸ್‌ಪ್ಲೇ, ಬೆಲೆ ಎಷ್ಟು?

ವಿವೋ ಫೋನ್‌ಗಳಿಗೆ (Vivo phone) ಜಾಗತಿಕವಾಗಿ ಬಹಳ ಬೇಡಿಕೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿತ್ತು. ಆದರೆ ಈಗ ಕೊನೆಗೂ ಈ ಫೋನ್‌ ಅನ್ನು ವಿವೋ ಸೈಲೆಂಟ್‌ ಆಗಿ ಘೋಷಣೆ ಮಾಡಿದೆ.

ಹೌದು, ವಿವೋ V30 ಸ್ಮಾರ್ಟ್‌ಫೋನ್ (Vivo V30 smartphone) ಅನ್ನು ಇದೀಗ ಜಾಗತಿಕವಾಗಿ ಘೋಷಣೆ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್‌ ರೇಟ್‌ ಆಯ್ಕೆಯ ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 7 ಜನ್ 3 ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ವಿವೋದ ಬಹುನಿರೀಕ್ಷಿತ ವಿವೋ V30 ಸ್ಮಾರ್ಟ್‌ಫೋನ್‌ ಘೋಷಣೆ! ಕರ್ವ್ಡ್ ಡಿಸ್‌ಪ್ಲೇ...

ವಿವೋ V30 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ V ಸಣಿಗೆ ಸೇರಿದ ಉತ್ತಮ ಫೋನ್ ಆಗಿದ್ದು, ಡಿಸೆಂಬರ್‌ನಲ್ಲಿ ಚೀನಾದಲ್ಲಿ ಪರಿಚಯಿಸಲಾದ ವಿವೋ S18 (Vivo S18 smartphone) ನಂತೆಯೇ ಬಹುತೇಕ ಫೀಚರ್ಸ್‌ ಆಯ್ಕೆ ಪಡೆದಿದೆ. ಅಂದರೆ ಈ ಫೋನ್ 6.78 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದ್ದು, 60° ಕರ್ವ್ಡ್ ಅಮೋಲೆಡ್‌ ಡಿಸ್ಪ್ಲೇ ನೊಂದಿಗೆ 2800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಉತ್ತಮ ವೀಕ್ಷಣೆ ನೀಡಲಿದೆ.

ವಿವೋ V30 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಬಲ ಪಡೆದಿದ್ದು, ಅಡ್ರಿನೋ 720 ಗ್ರಾಫಿಕ್ಸ್‌ ಕಾರ್ಡ್ ಬಲ ಪಡೆದಿದ್ದು, ಫನ್‌ಟಚ್‌ ಓಎಸ್‌ 14 ಜೊತೆಗೆ ಆಂಡ್ರಾಯ್ಡ್‌ 14 ಓಎಸ್‌ ಅನ್ನು ಈ ಫೋನ್‌ ರನ್‌ ಮಾಡಲಿದೆ. ಇದರೊಂದಿಗೆ 8GB / 12GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ನಲ್ಲಿ ಈ ಫೋನ್‌ ಲಭ್ಯ ಇದೆ.

ವಿವೋದ ಬಹುನಿರೀಕ್ಷಿತ ವಿವೋ V30 ಸ್ಮಾರ್ಟ್‌ಫೋನ್‌ ಘೋಷಣೆ! ಕರ್ವ್ಡ್ ಡಿಸ್‌ಪ್ಲೇ...

ವಿವೋ V30 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ವಿಶೇಷ ಫೋನ್ OIS ಜೊತೆಗೆ 50 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಜೊತೆಗೆ 50 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್‌ ಪೋಟ್ರೇಟ್ ಸೆನ್ಸರ್‌ ಆಯ್ಕೆ ಸಹ ಇದ್ದು, 50 ಮೆಗಾಪಿಕ್ಸೆಲ್‌ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಜೊತೆಗೆ ಡ್ಯುಯಲ್ ಸಾಫ್ಟ್ ಎಲ್‌ಇಡಿ ಫ್ಲಾಶ್‌ ಲೈಟ್‌ ಆಯ್ಕೆ ಪಡೆದಿದೆ.

ವಿವೋ V30 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 80W ವೇಗದ ಚಾರ್ಜಿಂಗ್‌ ಬೆಂಬಲ ಪಡೆದಿದೆ. ಇನ್ನು ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ ಹೊಂದಿದೆ. ಇದರೊಂದಿಗೆ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ) ಬೆಂಬಲ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್‌, ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಹೈ-ರೆಸ್ ಆಡಿಯೊ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.4, ಜಿಪಿಎಸ್‌ (L1 + L5), ಯುಎಸ್‌ಬಿ ಟೈಪ್-ಸಿ, ಎನ್‌ಎಫ್‌ಸಿ ಆಯ್ಕೆ ಪಡೆದಿದೆ.

ವಿವೋದ ಬಹುನಿರೀಕ್ಷಿತ ವಿವೋ V30 ಸ್ಮಾರ್ಟ್‌ಫೋನ್‌ ಘೋಷಣೆ! ಕರ್ವ್ಡ್ ಡಿಸ್‌ಪ್ಲೇ...

ವಿವೋ V30 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಭಾರತ, ಇಂಡೋನೇಷ್ಯಾ, ಥೈಲ್ಯಾಂಡ್, ಮಲೇಷ್ಯಾ, ಹಾಂಗ್ ಕಾಂಗ್, ಸಿಂಗಾಪುರ್, ಪಾಕಿಸ್ತಾನ, ಈಜಿಪ್ಟ್ ಮತ್ತು UAE ಸೇರಿದಂತೆ 30 ಮಾರುಕಟ್ಟೆಗಳಲ್ಲಿ ಲಭ್ಯ ಇದ್ದು, ಫೆಬ್ರವರಿ 8 ರಂದು ಮೆಕ್ಸಿಕೋದಲ್ಲಿ ಈ ಫೋನ್‌ ಸರಣಿಯನ್ನು ಅನಾವರಣ ಮಾಡಲಾಗುತ್ತಿದೆ. ಈ ಫೋನ್‌ ಬೆಲೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯ ಇಲ್ಲ, ಅದಾಗ್ಯೂ ಈ ವಾರದ ನಂತರ ಫೋನ್‌ನ ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.

Best Mobiles in India

English summary
Vivo V30 smartphone has just been announced globally and this smartphone has a curved AMOLED display with 120Hz refresh rate option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+