Home
ಸುದ್ದಿಜಾಲ

ವಿವೋ V30e ಸ್ಮಾರ್ಟ್‌ಫೋನ್‌ ಈಗ ಖರೀದಿಗೆ ಲಭ್ಯ; ಬೆಲೆ ಎಷ್ಟು ಗೊತ್ತಾ?

ಲೀಡಿಂಗ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ವಿವೋ ಸಂಸ್ಥೆಯು ಇತ್ತೀಚಿಗೆ ವಿವೋ V30e ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಮೊಬೈಲ್‌ ತನ್ನ ವರ್ಗದಲ್ಲೇ ಖರೀದಿದಾರರನ್ನು ಆಕರ್ಷಿಸಿದೆ. ಈ ಫೋನಿನ ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಖರೀದಿಗೆ ಲಭ್ಯ ಇದೆ.

ಹೌದು, ವಿವೋ V30e ಸ್ಮಾರ್ಟ್‌ಫೋನ್‌ ಇದೀಗ ಖರೀದಿಗೆ ಲಭ್ಯ ಇದ್ದು, ಇದು ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ ಹಾಗೂ ವಿವೋ ಇ-ಸ್ಟೋರ್‌ ಮೂಲಕ ಇಂದು ಮಾರಾಟ ಪ್ರಾರಂಭಿಸಿದೆ. ಇನ್ನು ಈ ಫೋನ್‌ 8GB+128GB ಹಾಗೂ 8GB+256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ವಿವೋ V30e ಸ್ಮಾರ್ಟ್‌ಫೋನ್‌ ಈಗ ಖರೀದಿಗೆ ಲಭ್ಯ; ಬೆಲೆ ಎಷ್ಟು ಗೊತ್ತಾ?

ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಈ ಫೋನ್‌ ಕರ್ವ್ಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದು 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 27,999ರೂ. ಗಳು ಆಗಿದೆ. ಹಾಗಾದರೇ ವಿವೋ V30e ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ V30e ಫೀಚರ್ಸ್‌

ವಿವೋ V30e ಫೋನ್ 6.78 ಇಂಚಿನ ಫುಲ್‌ ಹೆಚ್‌ಡಿ + ಕರ್ವ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸೌಲಭ್ಯ ಕೂಡಾ ಪಡೆದಿದೆ. ಈ ಮೂಲಕ ವೀಕ್ಷಣೆ ವಿಷಯದಲ್ಲಿ ಪ್ರೀಮಿಯಂ ಅನುಭವ ಒದಗಿಸಬಲ್ಲದು.

ವಿವೋ V30e ಫೋನ್ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಈ ಫೋನ್‌ 8GB + 128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಮೈಕ್ರೊ ಎಸ್‌ಡಿ ಸೌಲಭ್ಯವನ್ನೂ ಸಹ ನೀಡಲಾಗಿದೆ.

ವಿವೋ V30e ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿ ಇದೆ. ಇನ್ನು ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಾಗಿ 50 ಮೆಗಾ ಪಿಕ್ಸಲ್‌ ಕ್ಯಾಮೆರಾ ಒದಗಿಸಲಾಗಿದೆ. ಇದರೊಂದಿಗೆ ಫ್ಲ್ಯಾಶ್‌ ಲೈಟ್‌ ಸೌಲಭ್ಯ ಸಹ ನೀಡಲಾಗಿದೆ.

ವಿವೋ V30e ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ನೀಡಲಾಗಿದೆ. ಇದರ ಜೊತೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌, ಧೂಳು ಮತ್ತು ನೀರು ನಿರೋಧಕ (IP64), 5G, ಡ್ಯುಯಲ್ 4G VoLTE, ವೈ ಫೈ 6 ಜಿಪಿಎಸ್‌/ ಗ್ಲೋನಾಸ್‌/ ಬೈಡು, ಯುಎಸ್‌ಬಿ ಟೈಪ್-ಸಿ 2.0 ನಂತಹ ಫೀಚರ್ಸ್‌ ಇವೆ.

ಬೆಲೆ ಹಾಗೂ ಲಭ್ಯತೆ

ವಿವೋ V30e ಫೋನ್ 8GB + 128GB ಹಾಗೂ 8GB + 256GB ವೇರಿಯಂಟ್‌ನ ಆಯ್ಕೆಗಳನ್ನು ಪಡೆದಿದೆ. 8GB + 128GB ವೇರಿಯಂಟ್‌ ಬೆಲೆ 27,999 ರೂ.ಗಳು ಆಗಿದೆ. ಅದೆ ರೀತಿ 8GB + 256GB ವೇರಿಯಂಟ್‌ ಬೆಲೆ 29,999 ರೂ.ಗಳ ಆಗಿದೆ. ಇನ್ನು ಈ ಫೋನ್‌ ವೆವ್ವೆಟ್‌ ಬ್ಲೂ ಹಾಗೂ ಸಿಲ್ಕ್‌ ರೆಡ್‌ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಆಸಕ್ತ ಖರೀದಿದಾದರರು ಈ ಫೋನ್‌ ಅನ್ನು ಅಧಿಕೃತ ವಿವೋ ಇ-ಸ್ಟೋರ್‌ ಹಾಗೂ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Vivo V30e Sale is live in India via Flipkart. check out Price, Offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+