Home
ಸುದ್ದಿಜಾಲ

Vivo: ವಿವೋ V30e ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್! ಸೋನಿ IMX882 OIS ಕ್ಯಾಮೆರಾ..

ವಿವೋ (Vivo) ಫೋನ್‌ಗಳು ಇತ್ತೀಚೆಗೆ ಸಾಕಷ್ಟು ಭಿನ್ನ ಫೀಚರ್ಸ್‌ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಿವೆ. ಈ ನಡುವೆ ಪ್ರೀಮಿಯಂ ಫೀಚರ್ಸ್‌ ಆಯ್ಕೆ ಇರುವ ವಿವೋ V30e ಸ್ಮಾರ್ಟ್‌ಫೋನ್‌ (Vivo V30e smartphone) ಅನ್ನು ಅನಾವರಣ ಮಾಡಲು ವಿವೋ ಸಿದ್ಧತೆ ನಡೆಸಿದೆ.

ಹೌದು, ವಿವೋ V30e ಸ್ಮಾರ್ಟ್‌ಫೋನ್‌ ಸಾಕಷ್ಟು ಭಿನ್ನ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಈ ನಡುವೆ ಕೆಲವು ಫೀಚರ್ಸ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಂತೆ ಈ ಸ್ಮಾರ್ಟ್‌ಫೋನ್ ವಿವೋ V30e ಸ್ಮಾರ್ಟ್‌ಫೋನ್ 3D ಕರ್ವ್ಡ್ ಡಿಸ್ಪ್ಲೇ ಯೊಂದಿಗೆ ಸ್ಲಿಮ್ ವಿನ್ಯಾಸದಲ್ಲಿ ಬರಲಿದೆ ಎನ್ನಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಇತರೆ ಫೀಚರ್ಸ್‌ ಏನು? ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ V30e ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್! ಸೋನಿ IMX882 OIS ಕ್ಯಾಮೆರಾ..

ವಿವೋ V30e ಸ್ಮಾರ್ಟ್‌ಫೋನ್‌: ವಿವೋ ಮುಂಬರುವ ವಿವೋ V30e ಅನ್ನು ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್‌ ಮಾಡಲು ಎದುರು ನೋಡುತ್ತಿವೆ. ಇತ್ತೀಚಿನ ವರದಿಯು ಫೋನ್‌ನ ಸ್ಲಿಮ್ ವಿನ್ಯಾಸವನ್ನು ಹೈಲೈಟ್ ಮಾಡಿದ್ದರೂ, ಆನ್‌ಲೈನ್‌ನಲ್ಲಿ ಕೆಲವು ಮಾಹಿತಿ ಲೀಕ್‌ ಆಗಿವೆ. ಅದರಲ್ಲಿ ವಿನ್ಯಾಸದ ಬಗ್ಗೆ ಸುಳಿವು ನೀಡಲಾಗಿದೆ. ಅದರಂತೆ ಈ ಫೋನ್ 3D ಕರ್ವ್ ಡಿಸ್ಪ್ಲೇ, 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ ಎಂದು ತಿಳಿದುಬಂದಿದೆ.

ವಿವೋ V30e ಸ್ಮಾರ್ಟ್‌ಫೋನ್ OIS ಶಕ್ತಗೊಂಡ ಸೋನಿ IMX882 ಸೆನ್ಸರ್‌ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದ್ದು, ಈ ವಿವೋ ಸ್ಮಾರ್ಟ್‌ಫೋನ್ ನೀಲಿ-ಹಸಿರು ಮತ್ತು ಕಂದು-ಕೆಂಪು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ 6.78 ಇಂಚಿನ FHD + ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, 120Hz ರಿಫ್ರೆಶ್‌ ರೇಟ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ.

ವಿವೋ V30e ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್! ಸೋನಿ IMX882 OIS ಕ್ಯಾಮೆರಾ..

ಇದೆಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ. ಮತ್ತು ಈ ಫೋನ್ ಕನಿಷ್ಠ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದ್ದು, ವರ್ಚುವಲ್ RAM ಗೆ ಹೆಚ್ಚುವರಿ ಬೆಂಬಲ ನೀಡಲಾಗುತ್ತದೆ ಎಂದು ಟೆಕ್‌ ಮೂಲಗಳಿಂದ ತಿಳಿದುಬಂದಿದೆ.

ಇದರ ಜೊತೆಗೆ ಈ ವಿಶೇಷ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದ್ದು, 45W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಸೆಲ್ಫಿ ಕ್ಯಾಮೆರಾಕ್ಕಾಗಿ ಮುಂಭಾಗದಲ್ಲಿ ಪಂಚ್‌ ಹೋಲ್‌ ಶೈಲಿ ಇರಲಿದ್ದು, ವಾಲ್ಯೂಮ್ ಮತ್ತು ಪವರ್ ಬಟನ್‌ ಆಯ್ಕೆಯನ್ನು ಈ ಫೋನ್‌ನ ಬಲ ತುದಿಯಲ್ಲಿ ಇರಿಸಲಾಗುತ್ತದಂತೆ. ಅದಾಗ್ಯೂ ಈ ವಿವೋ V30e ಕುರಿತಾದ ವಿವರಗಳು ಲೀಕ್‌ ಮತ್ತು ಊಹಾಪೋಹಗಳನ್ನು ಆಧರಿಸಿವೆ ಎಂಬುದು ಗಮನಿಸಬೇಕಾದ ಸಂಗತಿ.

ವಿವೋ V30e ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್! ಸೋನಿ IMX882 OIS ಕ್ಯಾಮೆರಾ..

ವಿವೋ T3x 5G ಏಪ್ರಿಲ್ 17 ರಂದು ಭಾರತದಲ್ಲಿ ಲಾಂಚ್‌: ಈ ಸ್ಮಾರ್ಟ್‌ಫೋನ್‌ ಬಗ್ಗೆ ಈಗಾಗಲೇ ಗ್ರಾಹಕರಲ್ಲಿ ಭಾರೀ ಕುತೂಹಲ ಉಂಟಾಗಿದೆ. ಫೋನ್‌ನ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ಈಗಾಗಲೇ ದೃಢೀಕರಿಸಲಾಗಿದೆ. ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಎರಡು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದ್ದು, 17,000 ರೂ.ಗಳ ಬೆಲೆ ಶ್ರೇಣಿಯಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.

ವಿವೋ T3x 5G ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.72 ಇಂಚಿನ ಫುಲ್-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ ಈ ಫೋನ್‌ 44W ವೈರ್ಡ್ ಫ್ಲ್ಯಾಶ್‌ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ.

Best Mobiles in India

English summary
Vivo V30e smartphone will appear with a lot of different features, while some features are making a big noise. Accordingly, this smartphone Vivo V30e smartphone is said to come in a slim design with a 3D curved display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+